doorada payana...

doorada payana...
ಉತ್ತುಂಗ ಶೃಂಗಗಳಿರುವುದು ಪ್ರವಾಸಕ್ಕಲ್ಲದೆ ನಿವಾಸಕ್ಕಲ್ಲ... -ಕುವೆಂಪು

Thursday, December 16, 2010

Kateel thoote dara.AVI


ಇತಿಹಾಸ ಪ್ರಸಿದ್ಧ ಕಟೀಲು ದುಗರ್ಾಪರಮೇಶ್ವರಿ ದೇವಳದಲ್ಲಿ ವರ್ಷಂಪ್ರತಿ ನಡೆಯುವ ಜಾತ್ರಾ ಮಹೋತ್ಸವದ ವೇಳೆ ನಡೆಯುವ ತೂಟೆದಾರ(ತಾಳೆಯ ಗರಿಯನ್ನು ಸುತ್ತಿ ಬೆಂಕಿಯನ್ನು ಹೊತ್ತಿಸಿ ಅದನ್ನು ಭಕ್ತರು ಒಬ್ಬರ ಮೇಲೊಬ್ಬರು ಎಸೆಯುವುದು) ತುಳುನಾಡಿನ ಪರಂಪರೆ, ಅಸುರ ಅರುಣಾಸುರನನ್ನು ಸಂಹರಿಸಿದ ದೇವಿ ವಿಜಯಿಯಾಗಿ ಬರುವ ವೇಳೆ ಈ ರೀತಿ ಬೆಂಕಿಯಿಂದ ಸ್ವಾಗತ ಕೋರುವುದು ಎಂಬ ಪ್ರತೀತಿಯೂ ಇದೆ. ಇತಿಹಾಸದಲ್ಲಿ ಪ್ರಾಚೀನ ಕಾಲದಿಂದಲೂ ನಡೆದು ಬಂದಿರುವ ವಿಶೇಷವಾದ ನಂಬಿಕೆ ಹಾಗೂ ಆಚರಣೆ. ಈ ವೇಳೆ ಭಕ್ತರು ಮೈಮೇಲೆ ಕೇವಲ ಶಾಲು ಹಾಗೂ ಧೋತಿಯನ್ನು ಮಾತ್ರ ತೊಟ್ಟುಕೊಂಡಿರುತ್ತಾರೆ, ಹಾಗಿದ್ದೂ ನಾನು ಗಮನಿಸಿದಂತೆ ಇಲ್ಲಿಯ ತನಕ ತೋಟೆದಾರಗದಲ್ಲಿ ಬೆಂಕಿ ಅನಾಹುತ, ಭಕ್ತಾದಿಗಳ ಮೈಮೇಲೆ ಗಾಯಗಳುಂಟಾದ ಉದಾಹರಣೆಗಳಿಲ್ಲ...
ಈ ವೈಶಿಷ್ಟ್ಯಪೂರ್ಣ ಆಚರಣೆಯಲ್ಲಿ ಪಾಲ್ಗೊಳ್ಳಲು ನಡುರಾತ್ರಿಯ ವೇಳೆ ಸಾವಿರಾರು ಸಂಖ್ಯೆಯ ಭಕ್ತರು ನೆರೆಯುತ್ತಾರೆ. ಕಟೀಲು ಮಾತೆಯ ಸನ್ನಿಧಿಯಲ್ಲಿ ಪಾವನರಾಗುತ್ತಾರೆ.

Sunday, December 12, 2010

ಇದ್ದು, ಇಲ್ಲದವರ ನಡುವೆ ...`ಎಲ್ಲಾ ನಮ್ಮ ಹಣೆಬರಹ ಸಾರ್... ರಸ್ತೇಲಿ, ಬೀದೀಲಿ, ಹೋಟೆಲ್, ಬಸ್ ಸ್ಟಾಪ್ ಎಲ್ಲಿ ಹೋದ್ರೂ ಅಸಹ್ಯ ನೋಟ ಬೀರೋರೇ ಜಾಸ್ತಿ. ನಾವೇನ್ ತಪ್ಪು ಮಾಡಿದ್ದೀವಿ? ಹೀಗೆ ಹುಟ್ಟಿರೋದೇ ನಮ್ ತಪ್ಪಾ...' ಹೀಗೆ ಅವರ ಬಳಿ ಯಾರಲ್ಲೂ ಕೇಳಲಾಗದ ಅಸಂಖ್ಯ ಪ್ರಶ್ನೆಗಳಿದ್ದವು. ತಮ್ಮ-ತಮ್ಮೊಳಗೆ ಹೇಳಿಕೊಂಡು ಪರಸ್ಪರ ಕಣ್ಣೀರು ಒರೆಸಿ ಉತ್ತರ ಕಂಡುಕೊಂಡ ಅದೆಷ್ಟೋ ಸಮಸ್ಯೆಗಳಿದ್ದವು. ಅವರು ತಮ್ಮ ಎಂದಿನ ಶೈಲಿಯಲ್ಲೇ ಜೀವನದ ದುರಂತಗಾಥೆಯನ್ನು ಬಿಡಿಬಿಡಿಯಾಗಿ ವಣರ್ಿಸುತ್ತಿದ್ದರೆ ಕೇಳುತ್ತಿದ್ದ ಕಿವಿ ಸ್ತಬ್ಧವಾಗಿ ಮನಸ್ಸು ಕ್ಷಣಕ್ಷಣಕ್ಕೂ ಭಾರವಾದಂತಹ ಅನುಭವ.

ಹೌದು... ಅವರೇ `ಮಂಗಳಮುಖಿ'ಯರು. ಅವರ ಮುಖ ಕಂಡರೆ ಎಲ್ಲವೂ ಮಂಗಳವಾಗುತ್ತದೆ ಎನ್ನುವುದು ಹೆಸರಿನ ತಾತ್ಪರ್ಯ. ಅಂತಹ ನಂಬಿಕೆಯೂ ನಮ್ಮ ಸಮಾಜದಲ್ಲಿ ಇಲ್ಲದಿಲ್ಲ. ಹಿಜಿರಾ, ಹಿಜಿಡಾ, ಹೆಣ್ಣಿಗರು, ನಪುಂಸಕರು, ಚ..., ಎಂದೆಲ್ಲಾ ಸಮಾಜದಲ್ಲಿ ವಿಶೇಷವಾಗಿ ಗುರುತಿಸಲ್ಪಡುವ ಇವರ ಬಗ್ಗೆ ಅನೇಕ ರೀತಿಯ ನಂಬಿಕೆ, ಅಪನಂಬಿಕೆ, ಮೂಢನಂಬಿಕೆಯೂ ನಮ್ಮಲ್ಲಿ ಬೆಳೆದಿದೆ. ಅವರು ಹಾಗಂತೆ, ಹೀಗಂತೆ... ಎಂದೆಲ್ಲಾ ಅಂತೆ-ಕಂತೆಗಳ ನಡುವೆ ಸುತ್ತಿಕೊಂಡಿರುವ ಅವರ ಬಗೆಗಿನ ಸಂಶಯಗಳಿಗೆ ಸಾಧ್ಯವಾದಷ್ಟು ವಿರಾಮ ನೀಡುವ ಪ್ರಯತ್ನ ಮಾತ್ರ ಇಲ್ಲಿ ನಡೆಸಲಾಗಿದೆ. ಇದ್ದು, ಇಲ್ಲದವರ ನಡುವೆ ಒಂದಿಷ್ಟು ಹೊತ್ತು ಕುಳಿತು ಅವರ ಪ್ರಶ್ನೆಗಳಿಗೆ ಕಿವಿಯಾದಾಗ ಅವರ ನೋವನ್ನು ಕಂಡು ಮನಸ್ಸು ಮರುಕ ಪಟ್ಟಿದ್ದು ಮಾತ್ರ ಸುಳ್ಳಲ್ಲ.

ನಾವಿರೋದೇ ಹೀಗೆ...!

ಮಂಗಳಮುಖಿಯರ ಬಗೆಗಿನ ನಮ್ಮ ಆಸಕ್ತಿಯನ್ನು ಬರಹ ರೂಪಕ್ಕೆ ಇಳಿಸಲು ಪಟ್ಟ ಪಾಡು ಅಷ್ಟಿಷ್ಟಲ್ಲ. ಯಾರನ್ನೂ ಸುಲಭವಾಗಿ ನಂಬದ ಇವರನ್ನು ಮಾತಾಡಿಸಲು ಹೋದಾಗ ನಮಗೆ ಎದುರಾದವಳು/ಎದುರಾದವನು ಶ್ರುತಿ ಅಲಿಯಾಸ್ ಸುಧಾಕರ. ನಿಮ್ಮ ಬಗ್ಗೆ ತಿಳ್ಕೋಬೇಕು ಎಂದಾಗ ವಿಳಾಸ ತಿಳಿಸಿದ್ದಳು. ಮರುದಿನ ಆಕೆ ತಿಳಿಸಿದ ವಿಳಾಸಕ್ಕೆ ತೆರಳಿದ ನಮಗೆ ನಿಜಕ್ಕೂ ಅಚ್ಚರಿ ಕಾದಿತ್ತು. ಅಲ್ಲಿ ನಮಗಾಗಿ ಅವರೆಲ್ಲರೂ ಕಾದಿದ್ದರು. ನಿಮ್ಮ ಬಗೆಗೆ ಒಂದಿಷ್ಟು ಮಾತಾಡಿ ಎಂದಾಗ ಅವರ ದು:ಖದ ಕಟ್ಟೆಯೊಡೆದಿತ್ತು. ಸಮಾಜದ ಅವಮಾನ, ಶೋಷಣೆಯಿಂದ ನೊಂದಿದ್ದ ಅವರ ಮುಖಗಳಲ್ಲಿ ಕಾಣಿಸುತ್ತಿದ್ದುದು ಎಲ್ಲವನ್ನೂ ಹೇಳಿಕೊಳ್ಳಬೇಕು ಎಂಬ ತುಡಿತ. ಕನ್ನಡವನ್ನು ಸ್ಪಷ್ಟವಾಗಿ ಮಾತಾಡುವ ಇವರು ನಮ್ಮ ನೆರೆಯ ಬಳ್ಳಾರಿ ಜಿಲ್ಲೆಯವರೇ ಆಗಿರುವುದು ವಿಶೇಷ. ಅವರೇ ಹೇಳುವಂತೆ ಬಳ್ಳಾರಿ ಜಿಲ್ಲೆಯಲ್ಲಿ ಇವರ ಜನಾಂಗಕ್ಕೆ ಸೇರಿದ ಇನ್ನೂ ಅನೇಕ ಮಂದಿ ಇದ್ದಾರೆ. ಕೆಲವು ಮಂದಿ ಭಿಕ್ಷೆಯೆತ್ತಲು ಊರು ತೊರೆದಿದ್ದರೆ, ಇನ್ನುಳಿದವರು ಅಲ್ಲಿಯೇ ಇದ್ದಾರೆ. ಲಾರಿ, ರೈಲುಗಳ ಮೂಲಕ ಮಂಗಳೂರಿಗೆ ಬಂದೆವು ಎನ್ನುವ ಇವರು, ಇಲ್ಲಿ ನಮಗೆ ಯಾರೂ ಇಲ್ಲ. ನಮ್ಮ ಊರಲ್ಲಾದರೆ ಹೇಗಾದರೂ ಬದುಕಬಹುದು ಅನ್ನೋ ಧೈರ್ಯವಿದೆ ಅನ್ನುತ್ತಾರೆ.

ಸದ್ಯಕ್ಕೆ ಮಂಗಳೂರಿನಲ್ಲಿ 22 ಜನ ಮಂಗಳಮುಖಿಯರು ಬಂದು ನೆಲೆಸಿದ್ದಾರೆ. ಇವರಲ್ಲಿ ಹೆಚ್ಚಿನ ಮಂದಿ ನೆಲೆಸಿರುವುದು ಸುರತ್ಕಲ್ ಬಳಿಯ ಕಾನದ ಬಾಡಿಗೆ ಮನೆಯೊಂದರಲ್ಲಿ. ಆರಡಿ, ಮೂರಡಿ ಜಾಗದ ಸಣ್ಣ ಬಾಡಿಗೆ ಮನೆಯಲ್ಲಿ ಇವರನ್ನು ಮನೆಯ ಮಾಲಕರು ಇರಲು ಬಿಟ್ಟಿದ್ದಾರೆ. ಇದೇಕೆ ಹೀಗೆ ಎಂದು ಕೇಳಿದರೆ ನಮಗೆ ಬಾಡಿಗೆಗೆ ಮನ ಕೊಡುವವರು ಸಿಗುವುದೂ ಇಲ್ಲ ಎಂಬ ಉತ್ತರ. ಬಳ್ಳಾರಿ ನವಾಸಿ ಮಲ್ಲಿಕಾಜರ್ುನ ಅಲಿಯಾಸ್ ಸುಧಾ, ಮಲ್ಲಿಕಾಜರ್ುನ ಅಲಿಯಾಸ್ ಮಹಾಲಕ್ಷ್ಮಿ, ರಮೇಶ ಅಲಿಯಾಸ್ ಪ್ರೀತಿ, ರಾಮ ಅಲಿಯಾಸ್ ಚಂದ್ರಕಲಾ, ಅಲಕುಂದಿಯ ಸುಧಾಕರ ಅಲಿಯಾಸ್ ಶ್ರುತಿ, ರಾಮು ಅಲಿಯಾಸ್ ಕಾವ್ಯ, ಮಂಡ್ಯದ ಶ್ರವಣ್ ಅಲಿಯಾಸ್ ಶ್ರಾವಣಿ, ಕಾಸಿಂ ಆಲಿ ಅಲಿಯಾಸ್ ಪ್ರಿಯಾ ಸದ್ಯ ಒಟ್ಟಿಗೇ ವಾಸಿಸುತ್ತಿದ್ದಾರೆ. ಅದೇ ಪುಟ್ಟ ಮನೆಯಲ್ಲಿ ವಾಸ, ಅಲ್ಲೇ ವಿಶ್ರಾಂತಿ, ಮುಂಜಾನೆ ಭಿಕ್ಷೆ ಎತ್ತಲು ಹೋದರೆ ಸಂಜೆಗೆ ವಾಪಸ್, ದಿನಕ್ಕೊಬ್ಬರಂತೆ ಅಡುಗೆ ಮಾಡುವುದು ಇವೇ ಮುಂತಾದ ನಿಯಮಗಳು ಇವರಲ್ಲಿವೆ. ಇವರು ಲೈಂಗಿಕ ಕಾರ್ಯಕರ್ತರು ಅನ್ನೋದನ್ನು ಮನಸಾರೆ ಒಪ್ಪಿಕೊಳ್ಳುವ ಅವರು, ಅದರಲ್ಲೇನು ತಪ್ಪು? ನಮ್ಮ ಹೊಟ್ಟೆಪಾಡಿಗಾಗಿ ಆ ವೃತ್ತಿಗಿಳಿದಿದ್ದೇವೆ, ನಾವು ಯಾರನ್ನೂ ಬಲವಂತ ಪಡಿಸುವುದಿಲ್ಲ ಎನ್ನುತ್ತಾರೆ.

ಮುಂದುವರಿದ ದೇಶಗಳಲ್ಲಿ ನಮ್ಮ ಸಮಾಜವನ್ನು ಯಾರೂ ನಿಕೃಷ್ಟರಾಗಿ ಕಾಣುವುದಿಲ್ಲ. ಅಲ್ಲಿ ಅವರಿಗೂ ಸಾಕಷ್ಟು ಮಯರ್ಾದೆ ಸಿಗುತ್ತದೆ. ಅವರಿಗೂ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡು ಸರಕಾರಿ ಕೆಲಸ ಮಾಡುವ, ಚುನಾವಣೆಯಲ್ಲಿ ಸ್ಪಧರ್ಿಸುವ ಅವಕಾಶವಿದೆ. ಆದರೆ ನಮ್ಮ ದೇಶದಲ್ಲಿ ಇಂತಹ ಯಾವ ವ್ಯವಸ್ಥೆಯೂ ಇಲ್ಲ. ಕನರ್ಾಟಕ ಸರಕಾರ ನಮಗಾಗಿ ವಿಶೇಷ ಯೋಜನೆಗಳನ್ನು ಜಾರಿಗೆ ತಂದಿದೆ ಎಂಬುದನ್ನು ಪೇಪರ್ನಲ್ಲಿ ಓದಿದ ನೆನಪು. ಆದರೆ ಅಂತಹ ಯಾವುದೇ ಯೋಜನೆ ನಮ್ಮನ್ನು ತಲುಪಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಇವರು. ನಮ್ಮಲ್ಲಿಯೂ ಇಂದು ಸಾಕಷ್ಟು ತಿಳಿದವರಿದ್ದಾರೆ, ಸಾಮಾಜಿಕ ರಂಗದಲ್ಲಿ ಸೇವೆ ಸಲ್ಲಿಸಲು ಯೋಗ್ಯರಿದ್ದಾರೆ, ಆದರೆ ನಮಗೆ ಸರಕಾರ ಪ್ರಾಶಸ್ತ್ಯವನ್ನೇ ನೀಡಲಾಗುತ್ತಿಲ್ಲ ಎಂಬ ಆಕ್ರೋಶ ವ್ಯಕ್ತಪಡಿಸುತ್ತಾರೆ.

ಹೌದು! ಮಂಗಳಮುಖಿಯರಿಗೂ ಬದುಕುವ ಹಕ್ಕಿದೆ. ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಇವರಿಗೆ ಗುರುತಿನ ಚೀಟಿ, ಮತದಾನದ ಗುರುತು ಪತ್ರ, ರೇಷನ್ ಕಾಡರ್್ ಸಮರ್ಪಕವಾಗಿ ವಿತರಣೆಯಾಗುತ್ತಿಲ್ಲ. ಇವರ ಆರೋಗ್ಯ ರಕ್ಷಣೆಗಾಗಿ ಸರಕಾರ ಕೈಗೊಂಡಿರುವ ಯೋಜನೆಗಳೂ ಪ್ರಯೋಜನಕ್ಕೆ ಬರುತ್ತಿಲ್ಲ. ಸರಕಾರದ ಹಣವನ್ನು ಪಡೆಯುವ ಎನ್ಜಿಓಗಳೂ ಹಿಡಿದ ಕೆಲಸವನ್ನು ಸಮರ್ಪಕವಾಗಿ ಮಾಡುತ್ತಿಲ್ಲ. ಈ ಕಾರಣದಿಂದಾಗಿ ಇವರು ಇಂದಿಗೂ ಯಾರಿಗೂ ಬೇಡದ ಜೀವನವನ್ನು ಸಾಗಿಸುತ್ತಿದ್ದಾರೆ. ಜನರಿಗೆ ತೊಂದರೆ ಕೊಡುತ್ತಾರೆ, ವಸೂಲಿ ಮಾಡುತ್ತಾರೆ, ಪ್ರವಾಸಿ ತಾಣಗಳಲ್ಲಿ ಕಿರಕಿರಿ ಉಂಟುಮಾಡುತ್ತಾರೆ ಎಂಬ ಜನರ ಆರೋಪಗಳನ್ನು ನಿರಾಕರಿಸುವ ಅವರು ತಾವು ಪ್ರವಾಸಿ ಸ್ಥಳದಲ್ಲಿ ಯಾವುದೇ ಸಮಸ್ಯೆಯನ್ನು ಸೃಷ್ಟಿಸುತ್ತಿಲ್ಲ. ನಮ್ಮನ್ನು ಬೇಕೆಂದೇ ತುಚ್ಛವಾಗಿ ಚಿತ್ರಿಸಲಾಗುತ್ತಿದೆ ಅಂತಾರೆ. ಮೂಲ ಸೌಕರ್ಯಗಳಿಂದ ವಂಚಿತರಾಗಿರುವ ಅಲೆಮಾರಿ ಹಿಜಿಡಾಗಳ ಬದುಕು ಅತಂತ್ರವಾಗಿದೆ. ಬೇಡಿದರೆ ಮಾತ್ರ ಹೊಟ್ಟೆಗೆ ಹಿಟ್ಟು ಎಂಬ ತತ್ವದಲ್ಲಿ ನಂಬಿಕೆಯಿಟ್ಟಿರುವ ಹಿಜಿಡಾಗಳನ್ನು ಮೇಲೆತ್ತುವ ಪ್ರಯತ್ನ ನಡೆಯಬೇಕು. ಅವರು ಹಾಗೆ ಹುಟ್ಟಿದ್ದೇ ತಪ್ಪೆನ್ನಲಾಗದು. ಯಾಕೆಂದರೆ ಹಿಜಿಡಾ ನಾಳೆ ನಮ್ಮ-ನಿಮ್ಮ ನಡುವೆಯೂ ಜನಿಸಬಹುದು. ಹೀಗಾಗಿ ಅವರನ್ನು ನಮ್ಮಿಂದ ದೂರವೇ ಇರಿಸುವುದು ಎಷ್ಟರಮಟ್ಟಿಗೆ ಸರಿ? ಅವರಿಗೂ ಸ್ವತಂತ್ರವಾಗಿ, ಗೌರವಯುತವಾಗಿ ಸಮಾಜದಲ್ಲಿ ಬದುಕುವ ಹಕ್ಕಿದೆ. ಸರಕಾರ, ಸ್ವಯಂಸೇವಾ ಸಂಸ್ಥೆಗಳು ಇನ್ನಾದರೂ ಇತ್ತ ಕಣ್ತೆರೆದು ಮಂಗಳಮುಖಿಯರ ಬದುಕು, ಆರೋಗ್ಯವನ್ನು ಸುಧಾರಿಸುವ ಪ್ರಯತ್ನ ಮಾಡಲಿ ಎಂಬ ಆಶಯ ನಮ್ಮದು.

ಹಿಜಿಡಾ ಅಂದರೆ ಯಾರು?

ಹಿಜಿರಾ ಅಥವಾ ಹಿಜಿಡಾ ಎನ್ನುವುದು ಉದರ್ು ಭಾಷೆಯಿಂದ ಬಂದಿರುವ ಪದ. ಇಸ್ಲಮಾಬಾದ್, ಪಾಕಿಸ್ತಾನ, ದಕ್ಷಿಣ ಏಶಿಯಾ ಖಂಡದಲ್ಲಿ ಇವರ ಸಂಖ್ಯೆ ಹೆಚ್ಚು. ಪಾಕಿಸ್ತಾನದಲ್ಲಿ ಇವರ ಗುಂಪುಗಳಿಗೆ ಸರಕಾರದಿಂದ ಪ್ರತ್ಯೇಕ ಸ್ಥಾನಮಾನವನ್ನು ಕೊಡುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಯಲ್ಲಿ ಜೀವಿಸುವಂತೆ ನೋಡಿಕೊಳ್ಳಲಾಗುತ್ತಿದೆ. ಭಾರತದಲ್ಲಿ ತಮಿಳ್ನಾಡು, ಆಂಧ್ರಪ್ರದೇಶದಲ್ಲಿ ಇವರದ್ದೇ ಆದ ಗುಂಪುಗಳಿದ್ದು, ಇವರಿಗೆ ಸರಕಾರದಿಂದ ಗುರುತಿನ ಪತ್ರ ಸಮೇತ ವಿವಿಧ ಸವಲತ್ತುಗಳನ್ನು ಒದಗಿಸಲಾಗುತ್ತಿದೆ. ಉತ್ತರ ಭಾರತದಲ್ಲಿ ಗರಿಷ್ಠ ಸಂಖ್ಯೆಯಲ್ಲಿರುವ ಹಿಜಿಡಾ ಗುಂಪು ರೇಣುಕಾ ದೇವಿಯನ್ನು ಇವರು ಆರಾಧಿಸುತ್ತವೆ. ಹೆಣ್ಣುಮಕ್ಕಳ ಉಡುಗೆಯನ್ನು ತೊಡುವ ಇವರನ್ನು ಜೋಗಪ್ಪ ಎಂತಲೂ ಕರೆಯುತ್ತಾರೆ. ಮದುವೆಯ, ಹುಟ್ಟುಹಬ್ಬದ ಕಾರ್ಯಕ್ರಮಗಳಲ್ಲಿ ಹಾಡಿ, ಕುಣಿಯುವ ಸಂಪ್ರದಾಯ ಈಗಲೂ ಚಾಲ್ತಿಯಲ್ಲಿದೆ. ದೇಶದ ವಾಣಿಜ್ಯ ನಗರಿಯಾದ ಮುಂಬೈ, ಕಲ್ಕತ್ತಾ, ದೆಹಲಿಯಲ್ಲಿ ಇವರದ್ದೇ ವೇಶ್ಯಾವಾಟಿಕಾ ತಾಣಗಳೂ ಇವೆ. ಇವುಗಳನ್ನು ಕೋಟಿ ಎಂದು ಕರೆಯುತ್ತಾರೆ. ಇಲ್ಲಿ ಮನೆಯಿಂದ ದೂರವಾಗುವ ಹಿಜಿಡಾಗಳು ಬಂದು ಸೇರುತ್ತಾರೆ ಮಾತ್ರವಲ್ಲದೆ, ಇಲ್ಲಿಂದ ಆಂಧ್ರ ಪ್ರದೇಶಕ್ಕೆ ಕರೆದೊಯ್ದು ಲಿಂಗ ಪರಿವರ್ತನೆ ಮಾಡಿಸಿಕೊಂಡು ಹಿಜಿಡಾಗಳನ್ನಾಗಿ ಬದಲಾಯಿಸುವ ವ್ಯವಸ್ಥೆಯೂ ಇದೆ. ಇಲ್ಲಿರುವ ಹಿಜಿಡಾಗಳು ತಮಗೆ ಬೇಕಾದ ಸಂಗಾತಿಯನ್ನು ಆರಿಸಿಕೊಂಡು ಅವರದ್ದೇ ಸಂಪ್ರದಾಯ ಪ್ರಕಾರ ಮದುವೆಯಾದ ಉದಾಹರಣೆಗಳೂ ಇವೆ. ಇಲ್ಲಿ ದೈಹಿಕ ಸಂಬಂಧಕ್ಕಿಂತ ಹೆಚ್ಚಾಗಿ ಪರಸ್ಪರ ಭಾವನೆಗಳಿಗೆ ಬೆಲೆ ಕೊಡುವ ಪದ್ಧತಿ ಇದೆ ಅಲ್ಲದೆ, ಇಲ್ಲಿ ನಡೆಯುವ ಮದುವೆಗೆ ಯಾವುದೇ ಕಾನೂನು, ಕಟ್ಟಳೆಗಳು ಒಳಪಡುವುದಿಲ್ಲ.

ವಾತ್ಸಾಯನ ಬರೆದಿರುವ ಕಾಮಸೂತ್ರದಲ್ಲೂ ಹಿಜಿಡಾಗಳ ಬಗ್ಗೆ ಉಲ್ಲೇಖವಿದೆ. `ತೃತೀಯ ಪ್ರಕೃತಿ' ಎಂದು ಕರೆಯಲ್ಪಡುವ ಹಿಜಿಡಾ ಕಾಮಕ್ರೀಡೆಯ ಬಗ್ಗೆ, `ಇಬ್ಬರೂ ಶಾರೀರಿಕವಾಗಿ ಗಂಡುಗಳಾಗಿದ್ದು, ಅದರಲ್ಲಿ ಒಬ್ಬ ಹೆಣ್ಣಿನ ಬಟ್ಟೆಯನ್ನು ಉಟ್ಟು ನಡೆಸುವ ಲೈಂಗಿಕ ಕ್ರಿಯೆ' ಎಂದು ವಣರ್ಿಸಲಾಗಿದೆ.

ಆರಾಧನೆ:

ಹಿಜಿಡಾಗಳು ಸಾಮಾನ್ಯವಾಗಿ ಬಹುಚರ ಮಠ ಹಾಗೂ ಶಿವನ ಆರಾಧಕರು. ಶಿವ ಹಾಗೂ ಪಾರ್ವತಿ ಒಂದಾಗಿ ಚಿತ್ರಿಸಲ್ಪಡುವ ಅರ್ಧನಾರೀಶ್ವರನನ್ನು ಇವರು ದೈವೀ ಶಕ್ತಿ ಎಂದು ನಂಬುತ್ತಾರೆ. ಭಾರತದ ಧರ್ಮಗ್ರಂಥ ರಾಮಾಯಣದಲ್ಲೂ ಹಿಜಿಡಾಗಳ ಬಗ್ಗೆ ಉಲ್ಲೇಖವಿದೆ. ರಾಮನು ಅಯೋಧ್ಯೆಯನ್ನು ತೊರೆದು 14 ವರ್ಷ ವನವಾಸಕ್ಕೆ ತೆರಳುತ್ತಾನೆ. ಈ ವೇಳೆ ಹೆಣ್ಣು-ಗಂಡು ಎಂಬ ಬೇಧಭಾವವಿಲ್ಲದೆ ಎಲ್ಲರೂ ರಾಮನನ್ನು ಹಿಂಬಾಲಿಸುತ್ತಾರೆ. ಅಂತಿಮವಾಗಿ ರಾಮ ಎಲ್ಲರನ್ನೂ ಸಮಾಧಾನಪಡಿಸಿ ಹಿಂದಕ್ಕೆ ಕಳುಹಿಸುತ್ತಾನೆ. ಆದರೆ ಆತ ತನ್ನ ವನವಾಸ ಮುಗಿಸಿ ವಾಪಸ್ ಬರುವ ವೇಳೆ ಅತ್ತ ಗಂಡೂ ಅಲ್ಲದ, ಇತ್ತ ಹೆಣ್ಣೂ ಅಲ್ಲದ ಹಿಜಿಡಾಗಳು ಕಾಣಸಿಗುತ್ತಾರೆ. ರಾಮನ ಜತೆ ಮಾತಾಡಿ, ಆಶೀರ್ವಚನ ಪಡೆಯದ ವಿನ: ಅವರು ಹೋಗುವುದಿಲ್ಲ. ಮಕ್ಕಳು ಜನಿಸಿದ ವೇಳೆ ಮತ್ತು ಮದುವೆಯ ಸಂದರ್ಭ ಅವರಿಗೆ ಅಯೋಧ್ಯೆಯಲ್ಲಿ ತಿರುಗಾಡಿ ಆಶೀರ್ವದಿಸುವ ಕಾಯಕವನ್ನು ಈ ವೇಳೆ ರಾಮನೇ ನೀಡಿದ ಎಂಬ ಬಗ್ಗೆಯೂ ಉಲ್ಲೇಖವಿದೆ. ಈ ಆಶೀರ್ವದಿಸುವ ಕಾಯಕವೇ ಹಾಡು. ನೃತ್ಯವನ್ನು ಒಳಗೊಂಡಿರುವುದಾಗಿ ಪ್ರತೀತಿಯೂ ಇದೆ.

ಕೈ ಬೀಸಿ ಕರೆದ ಮಂಗಳೂರು

ಮಂಗಳೂರು ವಿಶಾಲ ಕಡಲ ತೀರವನ್ನು ಹೊಂದಿರೋ ಸೊಬಗಿನ ಊರು. ಇಲ್ಲಿಗೆ ಒಮ್ಮೆ ಬಂದವರು ಹಿಂತಿರುಗಿ ಹೋಗುವ ಮನಸ್ಸು ಮಾಡಲಾರರು. ಕಾರಣ ಇಲ್ಲಿನ ಜನರ ಆತ್ಮೀಯತೆ, ಪ್ರೀತಿ ಅಂತದ್ದು. ತೀರಾ ಇತ್ತೀಚಿನ ಕೆಲವೊಂದು ವರ್ಷಗಳವರೆಗೆ ಮಂಗಳೂರಿಗರಿಗೆ ಮಂಗಳಮುಖಿಯರ ಪರಿಚಯವೇ ಇದ್ದಿರಲಿಲ್ಲ. ಎಲ್ಲೋ ಮುಂಬೈಯಲ್ಲಿ ಇವರು ಇರುತ್ತಾರಂತೆ, ಅಂಗಡಿ-ಅಂಗಡಿ ಭಿಕ್ಷೆ ಎತ್ತಲು ಹೋಗುತ್ತಾರಂತೆ... ಎಂದೆಲ್ಲಾ ಮುಂಬೈಯಿಂದ ಬರುತ್ತಿದ್ದ ಬಂಧುಗಳು ಅವರ ಬಗ್ಗೆ ಹೇಳುತ್ತಿದ್ದ ಮಾತುಗಳನ್ನು ಕೇಳುತ್ತಾ ನಮ್ಮವರು ಅವರು ಹೇಗಿರಬಹುದು ಎಂದು ಕಲ್ಪಿಸುತ್ತಿದ್ದರೇ ಹೊರತು ಅವರನ್ನು ನೋಡಿರಲಿಲ್ಲ. ಆದರೆ ಕಳೆದ ನಾಲ್ಕೈದು ವರ್ಷಗಳಿಂದ ಇವರು ಇಲ್ಲಿ ನಿತ್ಯ ಸುದ್ದಿಯಲ್ಲಿದ್ದಾರೆ. ಮೊನ್ನೆ ಅಲ್ಲಿದ್ದರು, ಇಂದು ಇಲ್ಲಿದ್ದರು ಎಂಬುದರಿಂದ ಹಿಡಿದು ಇವರು ಹಾಗೆ ಮಾಡುತ್ತಾರೆ, ಹೀಗೆ ಮಾಡುತ್ತಾರೆ, ನಮಗಾಗುವ ತೊಂದರೆ ಅಷ್ಟಿಷ್ಟಲ್ಲ ಎಂಬ ಆರೋಪಗಳೂ ಇವರ ಮೇಲಿದೆ. ಹೀಗಿರುವಾಗ ಇವರಲ್ಲಿ ನೀವ್ಯಾಕೆ ನಮ್ಮ ಊರಿಗೆ ಬಂದ್ರಿ ಅಂತ ಕೇಳಿದರೆ, `ನಮಗೆ ಆ ಊರು ಈ ಊರು ಇಲ್ಲಣ್ಣಾ... ಹೋದ ಊರು, ಬಂದ ದೇಶ... ಮಂಗಳೂರು ಕೈ ಬೀಸಿ ಕರೆಯಿತು, ಇಲ್ಲಿ ಬಂದ ಬಳಿಕ ಹಿಂತಿರುಗಿ ಹೋಗೋಕ್ಕೆ ಮನಸಾಗ್ತಾ ಇಲ್ಲ' ಅಂತಾರೆ.

ಏಡ್ಸ್ ಬಗ್ಗೆ ಜಾಗೃತಿ!

ಮಂಗಳೂರಿನಂತಹ ಸಭ್ಯ, ಸುಸಂಸ್ಕೃತ ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ನಿರ್ಲಜ್ಜ ಸಲಿಂಗಕಾಮಿಗಳ ಹಾವಳಿಯೂ ಬೆಳೆಯತೊಡಗಿದೆ. ಹಿಜಿಡಾಗಳು ಸಾಮಾನ್ಯವಾಗಿ ಸಲಿಂಗಕಾಮಿಗಳಲ್ಲ. ಅತ್ತ ಗಂಡೂ ಅಲ್ಲದ, ಇತ್ತ ಹೆಣ್ಣೂ ಅಲ್ಲದ ಇವರಿಗೂ ಲೈಂಗಿಕ ಬಯಕೆಗಳಿವೆ. ಬಯಕೆ ಮಿತಿ ಮೀರಿದಾಗ ಸಹಜವಾಗಿ ಗಂಡಿನ ಪ್ರೀತಿಯತ್ತ ಇವರು ಆಕಷರ್ಿತರಾಗುತ್ತಾರೆ. ಇವರು ಭಿಕ್ಷೆ ಎತ್ತುವ ಕಾಯಕವನ್ನೇನೋ ನಡೆಸುತ್ತಾರೆ. ಆದರೆ ಅದರ ನಡುವೆ ನಿರ್ಲಜ್ಜ ಪುರುಷರಿಗೆ ಕತ್ತಲಿನ ಸಂದಿಗೊಂದಿಗಳಲ್ಲಿ ಸುಖವನ್ನು ಕೊಡುತ್ತಾರೆ. ಅವರು ಕೊಡುವ ಸುಖ ಗಂಡು-ಹೆಣ್ಣಿನ ಸಮಾಗಮದಿಂದ ದೊರೆಯುವ ಪರಿಪೂರ್ಣ ಸುಖವಲ್ಲ, ಆದರೆ ಕಾಮದ ಮದವೇರಿಸಿಕೊಂಡ ಗಂಡನ್ನು ಅವರು ಕ್ಷಣಮಾತ್ರದಲ್ಲಿ ಕರಗಿಸಿ ಬಿಡುವ ಕಲೆಯನ್ನು ಮಾತ್ರ ಕರಗತ ಮಾಡಿಕೊಂಡಿದ್ದಾರೆ. ರೈಲ್ವೇ ಬ್ರಿಡ್ಜ್, ಹಳೆಯ ಪಾಳುಬಿದ್ದ ಫ್ಯಾಕ್ಟರಿ, ಮರಗಳ ತೋಪು ಮುಂತಾದೆಡೆ ಇವರ ದರ್ಶನಕ್ಕೆಂದೇ ಕಾಯುವ ಪುರುಷ ಸಿಂಹಗಳು... ಇವರನ್ನು ಕಂಡು ಮುಗಿಬೀಳುವ ವಿಟ ಪುರುಷರ ದೇಹದ ಬಿಸಿ ಆರುವವರೆಗೆ ಇವರು ಸಹಕರಿಸಬೇಕು. ಅದನ್ನು ನೀವು ನೈಸಗರ್ಿಕ ಕಾಮ ಎನ್ನಿ... ಅನೈಸಗರ್ಿಕ ಕಾಮವೆನ್ನಿ... ಇವರು ಆ ಬಗ್ಗೆ ತಲೆ ಕೆಡಿಸುವುದಿಲ್ಲ. `ಅಣ್ಣಾ... ನಮ್ಗೂ ಲೈಂಗಿಕ ಬಯಕೆಗಳಿವೆ, ಅದನ್ನು ಈ ರೀತಿ ತೀರಿಸ್ಕೋತೀವಿ. ನಮ್ಮಲ್ಲಿ ಪ್ರತಿನಿತ್ಯ ಒಬ್ಬೊಬ್ಬರು ತಲಾ 3-4 ಮಂದಿಯನ್ನು ನೋಡ್ಕೋತೀವಿ. ಗ್ರಾಹಕರಿಂದ 50-100 ರೂಪಾಯಿ ಮಾತ್ರ ಇಸ್ಕೋತೀವಿ. ಆದ್ರೆ ತಮ್ಮ ಕೆಲಸವಾದ ಮೇಲೆ ಅದನ್ನೂ ನೀಡದೆ ಹಾಗೆ ಎದ್ದು ಹೋಗೋರೂ ಇದ್ದಾರೆ' ಎನ್ನುವ ಇವರು ಲೈಂಗಿಕ ರೋಗಗಳ ಬಗ್ಗೆ ಮಾತ್ರ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಸರಕಾರದಿಂದ ಉಚಿತವಾಗಿ ಸಿಗುವ ನಿರೋಧ್ ಬಳಸದೆ ಇಂತಹ ಕ್ರಿಯೆಯಲ್ಲಿ ಭಾಗಿಯಾಗುವುದಿಲ್ಲ. ಕೆಲವೊಮ್ಮೆ ಗ್ರಾಹಕರು ವಿಪರೀತ ಒತ್ತಾಯ ಮಾಡುತ್ತಾರೆ. ಆದರೂ ನಮ್ಮಲ್ಲಿಗೆ ಬರುವ ಗ್ರಾಹಕರ ಹಾಗೂ ನಮ್ಮ ಆರೋಗ್ಯ ರಕ್ಷಣೆಗಾಗಿ ನಿರೋಧ್ ಅಗತ್ಯವಾಗಿ ಬಳಸುತ್ತೇವೆ ಎನ್ನುತ್ತಾರೆ.

ಬಿಟ್ಟರೂ ಬಿಡದೀ ಮಾಯೆ!

ನಾವು ಎಲ್ಲರಂತೆಯೇ ಬದುಕಲು ಬಯಸುತ್ತೇವೆ, ನಮಗೂ ಸಮಾಜದ ಮುಖ್ಯವಾಹಿನಿಗೆ ಬರುವ ಆಸೆಯೇನೋ ಇದೆ. ನಮ್ಮವರು ಟಿ.ವಿ. ಚಾನೆಲ್ಗಳಲ್ಲಿ ಕಾರ್ಯಕ್ರಮ ನಡೆಸಿಕೊಡುತ್ತಾರೆ, ರೇಡಿಯೋ ಜಾಕಿ ಆಗಿಯೂ ದುಡಿಯುತ್ತಿದ್ದಾರೆ. ಸ್ವಾವಲಂಬನೆಯ ಬದುಕು ನಡೆಸಬಹುದು ಎನ್ನುವ ಮಾತು ಹೇಳಲು ಮಾತ್ರ ಸುಲಭ. ಆದರೆ ನಮಗೇನೇ ಮಾಡಿದರೂ ಈ ಬಟ್ಟೆ ಮತ್ತೆ, ಮತ್ತೆ ಸೆಳೆಯುತ್ತದೆ. ನಮಗೆ ಗೊತ್ತು ನಾವು ಎಲ್ಲರಂತಿಲ್ಲ. ನಾವು ಗಂಡಸರ ಹಾಗೆ ಇದ್ದೀವಿ, ಆದರೆ ನಾವು ಹಾಗೆ ಇಲ್ಲ. ನಮಗೆ ಮಾತ್ರ ಗೊತ್ತು ನಾವು ಏನು ಎಂಬುದು. ಹೀಗಾಗಿ ನಾವು ಗಂಡಸರ ಬಟ್ಟೆ ತೊಟ್ಟು ಓಡಾಡುವಂತಿಲ್ಲ. ಹಾಗೊಂದು ವೇಳೆ ನಾವು ಗಂಡಸರ ವೇಷ ಧರಿಸಿ ಓಡಾಡಿದರೂ ನಮಗೆ ಆತ್ಮತೃಪ್ತಿ ಎನ್ನುವುದು ಸಿಗಲ್ಲ. ಈ ಹೆಣ್ಣಿನ ಬಟ್ಟೆ, ಅಲಂಕಾರ ನಮ್ಮನ್ನು ಮತ್ತೆ ತನ್ನೆಡೆಗೆ ಆಕಷರ್ಿಸುತ್ತದೆ. ಇದನ್ನೇ ಧರಿಸಿ ಮೆರೆಯಬೇಕು ಎಂಬ ಬಯಕೆ ಜಾಸ್ತಿಯಾಗುತ್ತೆ. ಈ ವೇಳೆ ಇಂತಹ ಯೋಚನೆ ನಮ್ಮ ಮನದಲ್ಲಿ ಮೂಡುವುದಾದರೂ ಹೇಗೆ? ನಾವು ಹುಟ್ಟಿದ್ದೇ ದೇವರ ಶಾಪ... ಹೇಗೋ ಬದುಕುತ್ತೇವೆ, ನಮ್ಮನ್ನು ಬದುಕಲು ಬಿಡಿ ಎಂದು ಕೈಮುಗಿದು ಕಣ್ಣಲ್ಲಿ ನೀರು ತಂದುಕೊಳ್ಳುತ್ತಾಳೆ ಪ್ರೀತಿ ಅಲಿಯಾಸ್ ರಮೇಶ್.

ಕಾಯುವಳು ಸವದತ್ತಿ ಎಲ್ಲಮ್ಮ

ಹಿಜಿಡಾಗಳ ತಂಡದಲ್ಲಿ ಇರುವ ಎಲ್ಲರೂ ಶಿಕ್ಷಣ ಪಡೆದಿಲ್ಲವಾದರೂ ಮಹಾಲಕ್ಷ್ಮಿ ಅಲಿಯಾಸ್ ಮಲ್ಲಿಕಾಜರ್ುನ ಎಸ್ಎಸ್ಎಲ್ಸಿ ಕಲಿತಿದ್ದಾಳೆ. ಪ್ರೀತಿ ಅಲಿಯಾಸ್ ರಮೇಶ ಅತೀ ಹೆಚ್ಚು ಅಂದರೆ ಪಿಯುಸಿ ಪಾಸ್ ಆಗಿದ್ದಾಳೆ, ಶ್ರುತಿ ಅಲಿಯಾಸ್ ಸುಧಾಕರ ಎಂಟನೇ ತರಗತಿ ಪಾಸ್ ಆದವಳು ಮುಂದೆ ಓದಿಲ್ಲ. ಇದಕ್ಕೆಲ್ಲಾ ಕಾರಣವಾಗಿದ್ದು ಇದೇ ಸಮಸ್ಯೆ ಎನ್ನುತ್ತಾರೆ ತಂಡದಲ್ಲಿ ಸ್ಫುರದ್ರೂಪಿಯಾಗಿ ಗುರುತಿಸಲ್ಪಡುವ ಶ್ರುತಿ. ಈಕೆಯೇ ಹೇಳುವಂತೆ, `ಬಾಲ್ಯ ಕಳೆದು ಯೌವನಕ್ಕೆ ಕಾಲಿಡುವ ವೇಳೆ ನನ್ನಲ್ಲೇನೋ ಬದಲಾವಣೆ ಆಗುತ್ತಿರುವ ಅನುಭವವಾಯಿತು. ನಾನು ಗಂಡು ಮಗು ಆಗಿದ್ದರೂ ನನಗೆ ಇದ್ದುದು ಹೆಣ್ಣಿನ ಬಟ್ಟೆಗಳ ಮೇಲೆ ಕಣ್ಣು. ಮನೆಯಲ್ಲಿಯೂ ನನಗೆ ಹೆಣ್ಣು ಮಕ್ಕಳ ಬಟ್ಟೆ ಉಡುವುದು ಹೆಚ್ಚು ಪ್ರಿಯವಾಗುತ್ತಿತ್ತು. ಈ ಕಾರಣಕ್ಕಾಗಿ ಮನೆಯ ಹೆಂಗಸರ ಬಟ್ಟೆಯನ್ನು ಉಟ್ಟು ಚಂದ ನೋಡುತ್ತಿದ್ದೆ. ಮನೆಯಲ್ಲಿ ಹೆಣ್ಣು ಮಕ್ಕಳಂತೆ ಅಲಂಕರಿಸುವುದು, ಪಾತ್ರೆ ತೊಳೆಯುವುದು, ನೆಲ ಒರೆಸುವುದು ಇವೇ ಮುಂತಾದ ಕೆಲಸದಲ್ಲಿ ಹೆಚ್ಚಾಗಿ ತೊಡಗಿಕೊಳ್ಳುತ್ತಿದ್ದೆ. ಇದೇಕೆ ಎಂದೇ ನನಗೆ ಅರ್ಥವಾಗುತ್ತಿಲ್ಲ. ಆದರೆ ಕೊನೆಗೊಂದು ದಿನ ನಾನದಕ್ಕೆ ಅರ್ಥ ಕಂಡುಕೊಂಡೆ. ನಾನು ಎಲ್ಲರಂತಿಲ್ಲ. ರಸ್ತೆಯಲ್ಲಿ ಸೊಂಟ ಬಳುಕಿಸುತ್ತಾ ಕೈ ಬೀಸಿಕೊಂಡು ನಡೆಯುತ್ತಿದ್ದರೆ ನನಗೆ ರಸ್ತೆಯ ತುಂಬಾ ಗೇಲಿಯ ಮಾತುಗಳು ಕೇಳಿಬರತೊಡಗಿತು. ಹೀಗೆ ನನಗೆ ನಾನೇ ನಿಶ್ಚಯಿಸಿದೆ. ಹೌದು... ನಾನು ಸುಧಾಕರ ಎಂಬ ಹೆಸರು ಹೊಂದಿದ್ದರೂ ಸುಧಾಕರನಂತಿಲ್ಲ. ನನ್ನಲ್ಲಿರುವುದು ಹೆಣ್ಣಿನ ಮನಸ್ಸು. ಅತ್ತ ಗಂಡೂ ಅಲ್ಲದೆ, ಇತ್ತ ಹೆಣ್ಣೂ ಅಲ್ಲದೆ ಇರುವ ನಾನು ಮನೆಯಲ್ಲಿ ಹೆಚ್ಚು ದಿನ ಇರಲಾಗಲಿಲ್ಲ. ಒಂದು ದಿನ ಮನೆ ಬಿಟ್ಟವಳು ಸವದತ್ತಿ ಎಲ್ಲಮ್ಮನ ಗುಡಿಗೆ ಹೋಗಿ ಪೂಜಾರಿಯ ಕೈಯಿಂದ ಕೊರಳಿಗೆ ಈ ಮಾಲೆ ಧರಿಸಿದೆ. ಆನಂತರ ನಾನು ಏನೆಂಬುದು ನನಗೇ ಅರ್ಥವಾಗಿ ಹೋಯಿತು' ಎನ್ನುತ್ತಾಳೆ. `ಹುಟ್ಟುವಾಗ ಯಾರೂ ಹೀಗೆ ಇರುವುದಿಲ್ಲ. ನಮಗೂ ಒಂದು ಮಗು ಹುಟ್ಟಿತು ಎಂದು ಹೆತ್ತವರು ಸಂತಸ ಪಡುತ್ತಾರೆ. ಆದರೆ ಬೆಳೆಯುತ್ತಾ ಇಂತಹ ಮಗು ಹುಟ್ಟಬಹುದು ಎನ್ನುವುದು ಅವರಿಗೆ ತಿಳಿದಿರುತ್ತದೆಯೇ? ನಾವು ಯಾವ ಜನ್ಮದಲ್ಲಿ ಯಾರಿಗೆ ಪಾಪ ಮಾಡಿದ್ದೇವೋ, ಈ ಜನ್ಮದಲ್ಲಿ ಅನುಭವಿಸುತ್ತಿದ್ದೇವೆ. ಹುಟ್ಟಿಸಿದವ ಹುಲ್ಲನ್ನು ಮಾತ್ರ ತಿನ್ನಿಸಲಾರ' ಎಂದು ಎಲ್ಲಮ್ಮನ ಹೆಸರು ಹೇಳಿಕೊಂಡು ಮೌನಕ್ಕೆ ಶರಣಾಗುತ್ತಾಳೆ.

ಎಲ್ಲರಿಗೊಬ್ಬಳೇ `ರಾಣಿ'

ಹಿಜಿಡಾಗಳು ಜಿಲ್ಲೆಗೆ ಬರಲು ಮುಖ್ಯ ಕಾರಣ ವರ್ಷದ ಹಿಂದೆ ಜಿಲ್ಲೆಯಲ್ಲಿ ದಾಂಗುಡಿ ಇಡುತ್ತಾ ಸಾಗಿ ಬರುತ್ತಿದ್ದ ಮೈನ್ಸ್ ಲಾರಿಗಳು. ಬಳ್ಳಾರಿಯ ಸಂಡೂರಿನಿಂದ ಕಬ್ಬಿಣದ ಅದಿರನ್ನು ಹೇರಿಕೊಂಡು ಇಲ್ಲಿಗೆ ಬರುತ್ತಿದ್ದ ಲಾರಿಗಳ ಚಾಲಕರು ತಮ್ಮ ಜೊತೆ ಟೈಂಪಾಸ್ಗೆಂದು ಮಂಗಳಮುಖಿಯರನ್ನೂ ಕರೆತಂದರು ಎನ್ನಲಾಗುತ್ತಿದೆ. ಹೀಗೆ ಬಂದ ಇವರು ಇಲ್ಲಿನ ವಾತಾವರಣ ನೋಡಿ ಹಿಂತಿರುಗಿ ಹೋಗಲು ಮನಸ್ಸಾಗದೆ ಇಲ್ಲಿಯೇ ಉಳಿದಿರುವ ಸಾಧ್ಯತೆಗಳೂ ಹೆಚ್ಚು. ಹಾಗೆಂದು ಇವರನ್ನು ಹೇಳುವವರು, ಕೇಳುವವರು ಯಾರೂ ಇಲ್ಲವೆಂದುಕೊಳ್ಳಬೇಡಿ. ಇವರ ಗುಂಪಿಗೆ ಓರ್ವ ನಾಯಕನೂ ಇದ್ದಾನೆ(ಳೆ). ಆಕೆಯ ಹೆಸರು ರಾಣಿ. ಈಕೆ ಮೂಲತ: ಬೆಂಗಳೂರಿನ ನಿವಾಸಿ. ಇವರ ಗುಂಪಿನಲ್ಲಿಯೇ ಸ್ಫುರದ್ರೂಪಿ ಈಕೆ. ಈ ಕಾರಣದಿಂದಲೇ ಇವಳಿಗೆ ಭಾರೀ ಡಿಮ್ಯಾಂಡ್ ಅಂತಾರೆ ಇವರು. ರಾಣಿ ಮಂಗಳೂರಿನಲ್ಲಿ ಇವರ ಜತೆ ಇರುವುದು ಕೆಲವು ದಿನಗಳು ಮಾತ್ರ. ಉಳಿದಂತೆ ಮಂಗಳೂರು-ಬೆಂಗಳೂರು ನಡುವೆ ಸಂಚರಿಸುತ್ತಾಳೆ. ಇಡೀ ತಂಡದಲ್ಲಿ ಏನೇ ನಿಧರ್ಾರ ಕೈಗೊಳ್ಳಬೇಕಿದ್ದರೂ ರಾಣಿಯ ಒಪ್ಪಿಗೆ ಬೇಕೇ ಬೇಕು. ಆಕೆ `ಯೆಸ್' ಅಂದಮೇಲೆ ಎಲ್ಲವೂ ಮುಂದುವರಿಯುತ್ತದೆ.

ಭಿಕ್ಷಾಂದೇಹಿ!

ಹಿಜಿಡಾಗಳು ಲೈಂಗಿಕ ಕಾರ್ಯಕರ್ತರಾಗಿ ಕೆಲಸ ಮಾಡುತ್ತಾರಾದರೂ ಅವರ ಜೀವನದ ಅವಿಭಾಜ್ಯ ಅಂಗವೆಂದರೆ ಭಿಕ್ಷಾಟಣೆ. ಅವರೇ ಹೇಳುವಂತೆ `ಭವತೀ ಭಿಕ್ಷಾಂದೇಹಿ' ಎಂದು ಕೈ ಮುಂದೆ ಚಾಚಿ ಭಿಕ್ಷೆ ಬೇಡದಿದ್ದರೆ ಅವರಿಗೆ ಏನನ್ನೋ ಕಳೆದುಕೊಂಡಂತೆ. ಇದರಿಂದ ದೊರೆಯುವ ಸಂಪಾದನೆಯೂ ಚೆನ್ನಾಗಿದೆ. ಆದರೆ ಬೆಳಗ್ಗಿನಿಂದ ಸಂಜೆಯ ತನಕ ಅಂಗಡಿ ಮೆಟ್ಟಿಲು ತುಳಿಯುತ್ತಾ ಅವರಿವರು ಹೇಳುವ ಕೊಳಕು ಮಾತುಗಳನ್ನು ಕೇಳಬೇಕು. ಎಷ್ಟೋ ಮಂದಿ ಇವರು ಬರುತ್ತಿದ್ದಂತೆಯೇ ತಮ್ಮ ಅಂಗಡಿ ಬಾಗಿಲು ಎಳೆದು ಹತ್ತಿರದ ಅಂಗಡಿಗೆ ಹೋಗುವುದೂ ಇದೆ. ಇನ್ನು ಕೆಲವರಂತೂ ಇವರು ಭಿಕ್ಷೆಗೆ ಬಂದು ಅಂಗಡಿ ಮುಂಬಾಗಿಲಲ್ಲಿ ನಿಂತರೆ ದೊಣ್ಣೆ ಹಿಡಿದು ಓಡಿಸುವುದೂ ಮಾಮೂಲಿ. ಇಷ್ಟೆಲ್ಲಾ ಸಮಸ್ಯೆಯ ನಡುವೆಯೂ ಇವರು ದಿನವೊಂದಕ್ಕೆ ಸರಾಸರಿ 250-300 ರೂ. ದುಡಿಯುತ್ತಾರೆ. `ಹೇಗಾದರೂ ಭಿಕ್ಷೆ ಬೇಡಿ ಬದುಕುತ್ತೇವೆ ಸಾರ್... ಆದ್ರೆ ರಸ್ತೆಯಲ್ಲಿ ನಡೆಯುವುದೇ ಕಷ್ಟ. ಹೆಣ್ಣು ಮಕ್ಕಳಂತೂ ನಮ್ಮ ಹತ್ತಿರವೂ ಸಾಗದೆ ಮಾರುದೂರ ಹಾರಿದರೆ, ಗಂಡಸರು ಚ... ಬಂದ ಅಂತ ವ್ಯಂಗ್ಯವಾಡುತ್ತಾರೆ, ಇಷ್ಟೆಲ್ಲಾ ಸಮಸ್ಯೆ ಇದ್ರೂ ನಾವು ಯಾರೊಡನೆಯೂ ಜಗಳಕ್ಕೆ ನಿಲ್ಲುವುದಿಲ್ಲ. ನಮ್ಮಷ್ಟಕ್ಕೆ ಭಿಕ್ಷೆ ಬೇಡುತ್ತೇವೆ' ಎನ್ನುತ್ತಾರೆ ರಮೇಶ್ ಅಲಿಯಾಸ್ ಪ್ರೀತಿ.

Saturday, November 13, 2010

ಕಾ(ಬೇ)ಡುವ ಮುಗ್ಧ ಕನಸುಗಳು..

ಅಣ್ಣಾ... ಒಂದು ರೂಪಾಯಿ ಕೊಡಣ್ಣಾ... ಹಸಿವಾಗುತ್ತೆ...

ನಾನು ನನ್ನದೇ ಅವಸರದಲ್ಲಿ ನಡೆಯುತ್ತಿರುವಾಗ ಇಂತಹ ಕೂಗೊಂದು ಬಾರಿ ಬಾರಿ ಕೇಳುತ್ತದೆ. ಅದು ಒಂದೆರಡು ಬಾರಿಯಲ್ಲ... ಬಸ್ ನಿಲ್ದಾಣಕ್ಕೆ ಕಾಲಿಟ್ಟರೆ ಸಾಕು ಈ ಕೂಗು ನನಗೊಬ್ಬನಿಗೆ ಮಾತ್ರವಲ್ಲ... ಬಹುಷ: ಬಾಕಿ ಉಳಿದವರಿಗೂ ಈ ಕೂಗು ಕೇಳಿರುತ್ತದೆ ಎಂದು ಭಾವಿಸುತ್ತೇನೆ. ಆದರೆ ಅಂತಹ ಕೂಗು ಮಾಮೂಲಿಯಾದ್ದರಿಂದ ಯಾರೂ ಅತ್ತ ತಿರುಗಿ ನಡೆಯಲಾರರು. ನನ್ನಂತೆ ಮಾಡಲು ಬೇರೆ ಕೆಲಸವಿಲ್ಲದ ಕೆಲವರಾದರೂ ಈ ಕೂಗು ಬಂದಕಡೆ ತಿರುಗಿ ಏನೆಂದು ವಿಚಾರಿಸುತ್ತಾರೆ. ಕಿಸೆಯನ್ನು ತಡಕಾಡಿ ಸಿಕ್ಕಿದ ಬಿಡಿಗಾಸು ಇವರ ತಟ್ಟೆಗೆ ಬಿಸಾಡಿ ಮುಂದೆ ಸಾಗುತ್ತಾರೆ. ಇದನ್ನು ಕಥೆಯೆಂದು ಭಾವಿಸದಿರಿ. ಇದು ನಮ್ಮ ಮಂಗಳೂರು ಅಥವಾ ನೆರೆಯ ಉಡುಪಿ ಜಿಲ್ಲೆಯ ಪ್ರಧಾನ ಬಸ್ ತಂಗುದಾಣಗಳಲ್ಲಿ ಕಂಡು ಬರೋ ಬೀದಿ ಮಕ್ಕಳ ತೀರದ ವ್ಯಥೆ..!

ಇಂದು ಮಕ್ಕಳ ದಿನಾಚರಣೆ... ಮಕ್ಕಳನ್ನು ಒಂದು ದಿನದ ಮಟ್ಟಿಗಾದರೂ ಮಾನಸಿಕ ಕಿರಿಯಿಂದ ದೂರವಿರಿಸಿ ಅವರಲ್ಲಿ ಸ್ಫೂತರ್ಿಯ ಸೆಲೆ ತುಂಬಿಸುವ ಸಲುವಾಗಿ ಶಿಕ್ಷಣ ಸಂಸ್ಥೆಗಳು, ವಿವಿಧ ಸಾಮಾಜಿಕ ಸಂಘಟನೆಗಳು ಈ ದಿನವನ್ನು ಭಾರೀ ಗೌಜಿಯಿಂದ ಆಚರಿಸುತ್ತವೆ. ಇಂದಿನ ದಿನವಾದರೂ ಮಕ್ಕಳನ್ನು ಖುಷಿಯಿಂದ ಇರಿಸಿ, ಮಕ್ಕಳೊಂದಿಗೆ ಮಕ್ಕಳಾಟ ಆಡುತ್ತಾ ಕಾಲ ಕಳೆಯೋಣ ಅನ್ನೋದು ಶಿಕ್ಷಕರ ಅಥವಾ ಇಂತಹ ಸಂಘಟನೆಗಳ ಉದ್ದೇಶವಾಗಿರಲೂಬಹು. ಆದ್ರೆ ಈ ಹೊತ್ತಲ್ಲಿ ಪ್ರಜ್ಞಾವಂತ ನಾಗರಿಕರಾದ ನಾವು ಮೇಲಿನ ಸನ್ನಿವೇಶದ ಬಗೆ ಕಿಂಚಿತ್ತಾದರೂ ಯೋಚಿಸಲೇಬೇಕು.

ಮಕ್ಕಳು ದೇವರ ಸಮಾನ?

ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರಿಗೆ ಮಕ್ಕಳೆಂದರೆ ಪ್ರೀತಿ, ಅವರು ಹೋದಲ್ಲಿ ಬಂದಲ್ಲಿ ಮಕ್ಕಳ ಜೊತೆ ಬೆರೆಯುತ್ತಿದ್ದರು. ಹೀಗಾಗಿ ಅವರ ಜನ್ಮದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತದೆ ಅನ್ನೋ ಮಾತನ್ನು ಪ್ರಾಥಮಿಕ ಶಾಲೆಯಿಂದ ಇಂದಿನವರೆಗೆ ಕೇಳುತ್ತಲೇ ಇದ್ದೇವೆ. ಆದರೆ ಈ ದಿನಾಚರಣೆಯಂದು ಬೀದಿಗೆ ಬಿದ್ದ ಮಕ್ಕಳನ್ನು ಉಪಚರಿಸುವ ಕೆಲಸವನ್ನು ಯಾರಾದರೂ ಮಾಡಲು ಮುಂದಾಗುತ್ತಾರಾ ಅನ್ನೋ ಪ್ರಶ್ನೆಗೆ ನಮ್ಮಲ್ಲಿ ಉತ್ತರ ಮಾತ್ರ ಶೂನ್ಯ. ಮಕ್ಕಳು ದೇವರಿಗೆ ಸಮಾನ ಎಂದು ಮನೆಯ ಮಕ್ಕಳನ್ನು ಪ್ರೀತಿಸುತ್ತಾ, ಅವರು ಕೇಳಿದ್ದು ಸಾವಿರ ಬೆಲೆಯದ್ದಾದರೂ ಹಿಂದೆ-ಮುಂದೆ ಯೋಚಿಸದೆ ತಂದುಕೊಡುವ ನಾವುಗಳು ಅದೇ ಬೀದಿಯ ಮಕ್ಕಳನ್ನು ಕಂಡಾಗ ಮುಖ ತಿರುಗಿಸಿ ನಡೆಯುವುದೇಕೆ?

ಉಡುಪಿ ಶ್ರೀ ಕೃಷ್ಣನ ನೆಲೆವೀಡು. ಇಲ್ಲಿನ ಅಷ್ಟಮಠಗಳಲ್ಲಿ ಸಂಪತ್ತು ಉಕ್ಕಿ ಹರಿಯುತ್ತಿದೆ. ದೇವಳದ ಜಾಗವೆಂದು ಹೇಳಲಾಗುವ ಸ್ಥಳದಲ್ಲಿ ಒಂದಿಂಚೂ ಜಾಗವನ್ನು ಬಿಡದೆ ಭವ್ಯ ಕಟ್ಟಡಗಳು ಮೇಲೇರುತ್ತಿವೆ. ಇಲ್ಲಿನ ಆದಾಯ ಕೋಟಿಗೂ ಅಧಿಕ. ಹೀಗಿದ್ದರೂ ಇಲ್ಲಿಗೆ ಬೀದಿಗಳಲ್ಲಿ ಅದೇ ಹರಕು-ಮುರುಕು ಬಟ್ಟೆಯ ಸಣ್ಣಪುಟ್ಟ ಮಕ್ಕಳು ಕೈಯಲ್ಲಿ ತಟ್ಟೆ ಹಿಡಿದು ಅಣ್ಣಾ... ಎಂದು ಬೆನ್ನು ಬೀಳುತ್ತವೆ. ಇವರಿಂದ ಪಾರಾದರೆ ಸಾಕು ಎಂದು ಓಡುವ ಮಂದಿಯೆಷ್ಟೋ ಇರಬಹುದು. ಆದರೆ ತಿರುಗಿ ನಿಂತು ಇವರ ಕಷ್ಟ ಕೇಳಿದಾಗ ಮಾತ್ರ ಒಂದು ದಿನದ ಆಚರಣೆ, ಸರಕಾರದ ಸೋಗಲಾಡಿತನ, ಸಾಮಾಜಿಕ ಸಂಘಟನೆಗಳ ಹೊಣೆಗೇಡಿತನ ಮನಸ್ಸಿಗೆ ನಿಜಕ್ಕೂ ಬೇಸರ ತರಿಸದಿರದು.

ಪಾಟರ್್ ಟೈಂ ಭಿಕ್ಷಾಟಣೆ:

ಆತನ ಹೆಸರು ಹನುಮಂತ... ಸೂರ್ಯ ಮುಳುಗುವ ಹೊತ್ತು ಉಡುಪಿಯ ಹೊಸ ಸರಕಾರಿ ಬಸ್ ನಿಲ್ದಾಣಕ್ಕೊಮ್ಮೆ(ಈಗ ಹಳತಾಗಿದೆ) ನೀವು ಕಾಲಿಟ್ಟರೆ ಅಲ್ಲಿ ಎಲ್ಲಾದರೊಂದು ಕಡೆ ಕಂಬದ ಮರೆಯಲ್ಲಿ ನಿಂತು ತನ್ನ ಅಷ್ಟಿಷ್ಟು ಹರಿದ ನೀಲಿ ಚೆಡ್ಡಿಯಿಂದ ನಾಣ್ಯಗಳನ್ನು ಒಂದೊಂದಾಗಿ ತೆಗೆದು ಲೆಕ್ಕ ಮಾಡುತ್ತಿರುತ್ತಾನೆ. ಈತನನ್ನು ನೀವು ನೋಡಿದ್ದು ಗೊತ್ತಾದರೆ ಸಾಕು, ನಿಮ್ಮ ಹಿಂದೆಯೇ ಓಡಿ ಬರುತ್ತಾನೆ. ಹಣ ನೀಡದ ಹೊರತು ಆತ ನಿಮ್ಮನ್ನು ಬಿಡುವುದಿಲ್ಲ. ಅಂದಹಾಗೆ ಹನುಮಂತ ನಿರ್ಗತಿಕನಲ್ಲ. ಉಡುಪಿ ಸಮೀಪದ ದೊಡ್ಡಣಗುಡ್ಡೆಯ ಡೇರೆಯಲ್ಲಿ ತಂದೆ-ತಾಯಿ, ತಂಗಿಯ ಜೊತೆ ವಾಸ ಮಾಡುತ್ತಾನೆ. ಮೂರನೇ ಕ್ಲಾಸು ಕಲಿಯುವ ಹನುಮಂತ ಶಾಲೆಯಿಂದ ಬಂದ ಬಳಿಕ ತಾಯಿಯೇ ಭಿಕ್ಷೆ ಎತ್ತಲು ಕಳುಹಿಸುತ್ತಾಳೆ. ಕಾರಣ ಬಿಲ್ಡಿಂಗ್ ಕಾಮಗಾರಿಗಳಲ್ಲಿ ದುಡಿಯುವ ಹನುಮಂತನ ತಂದೆ ಎಂಬ ರಾಕ್ಷಸನ ಕಿರಿಕಿರಿ. ಪ್ರತೀ ರಾತ್ರಿ ಕುಡಿದು ಇದ್ದ ಹಣವೆಲ್ಲಾ ಅಲ್ಲಲ್ಲಿ ಸಂದಿಗೊಂದರಂತೆ ಇರುವ ಮಟ್ಕಾ ಅಡ್ಡೆಯಲ್ಲಿ ಕಳೆದು ಬರುವ ತಂದೆ ಎಂಬ ಪ್ರಾಣಿ ಹನುಮಂತನ ಶಾಲೆಗೆ ನಯಾಪೈಸೆ ನೀಡುವುದಿಲ್ಲವಂತೆ. ಈ ಕಾರಣಕ್ಕಾಗಿ ಭಿಕ್ಷೆ ಎತ್ತುತ್ತಿದ್ದೇನೆ ಎನ್ನುವ ಹನುಮಂತನ ದಿನವೊಂದರ ಸಂಪಾದನೆ 30ರಿಂದ 40 ರೂಪಾಯಿ. ಕಲಿತು ಏನಾಗುತ್ತೀ ಎಂದು ಕೇಳಿದರೆ, `ಅದೆಲ್ಲ ಯಾಕಣ್ಣಾ ನನ್ಗೆ ಒಂದು ರೂಪಾಯಿ ಕೊಡಿ ಎನ್ನುವ ಮುಗ್ಧ ಬಾಲಕನ ಕನಸೇ ಇಲ್ಲದ ಮಾತುಗಳು ಮನಸ್ಸಿನಾಳಕ್ಕೆ ನೇರವಾಗಿ ಈಟಿಯಂತೆ ಇರಿಯುತ್ತದೆ. ಇದು ಓರ್ವ ಹನುಮಂತನ ಕಥೆಯಲ್ಲ, ಬೀದಿಯಲ್ಲಿ ಒಮ್ಮೆ ತಿರುಗಾಡಿದರೆ ಸಾಕು ಇಂತಹ ಹತ್ತಾರು ಕಥೆಗಳು ನಮ್ಮೆದುರು ತೆರೆದುಕೊಳ್ಳುತ್ತದೆ.

ಲಕ್ಷ್ಮಿ, ಮಂಜುಳಾ, ದ್ಯಾಮವ್ವ...

ಉಡುಪಿಯ ಸಿಟಿ, ಸವರ್ಿಸ್, ಸರಕಾರಿ ಬಸ್ ನಿಲ್ದಾಣಗಳನ್ನು ತಮ್ಮ ಖಾಯಂ ನೆಲೆಯನ್ನಾಗಿ ಮಾಡಿಕೊಂಡ ಲಕ್ಷ್ಮಿ, ಮಂಜುಳಾ, ದ್ಯಾಮವ್ವರದ್ದು ಕಥೆ ಕೇಳಿದರೆ ಅಯ್ಯೋ ಪಾಪ ಅನಿಸುತ್ತದೆ. ಇವರು ಹೊರಜಿಲ್ಲೆಯ ಕೂಲಿ ಕಾಮರ್ಿಕರ ಮಕ್ಕಳು. ತಂದೆ ಕುಡಿಯಲು ದುಡ್ಡಿಗಾಗಿ ಮಕ್ಕಳನ್ನು ಭಿಕ್ಷೆ ಎತ್ತಲು ಕಳುಹಿಸುತ್ತಾನೆ. ಇವರು ಶಾಲೆಯ ಮುಖವನ್ನೇ ಕಂಡಿಲ್ಲ. ಬೆಳಗ್ಗೆದ್ದು ಬಿಡಾರದಿಂದ ಹೊರಬಿದ್ದು ಬಸ್ ನಿಲ್ದಾಣ ಸೇರಿದರೆ ಮರಳುವುದು ಕತ್ತಲಾವರಿಸಿದ ಬಳಿಕ. ಅದೆಷ್ಟೋ ಮಂದಿಯ ನಾಲಗೆಯಿಂದ ಕೇಳಬಾರದ್ದನ್ನು ಕೇಳಿಸಿಕೊಂಡು, ವಿಕೃತ ಕಾಮುಕರ ಕೆಟ್ಟ ನೋಟಕ್ಕೆ ಸಿಲುಕಿ ಈ ಮಕ್ಕಳು ಭಿಕ್ಷೆ ಬೇಡುತ್ತಲೇ ಇದ್ದಾರೆ. ದಿನವೊಂದಕ್ಕೆ ತಮ್ಮ ಖಚರ್ು ಕಳೆದು 50-60 ರೂಪಾಯಿ ಸಂಪಾದಿಸುತ್ತಾರೆ. ಆದರೆ ಇವರ ಜೋಳಿಗೆ ತುಂಬಿದ ಚಿಲ್ಲರೆ ಹಣ ಎಲ್ಲಾ ಕ್ಷಣಮಾತ್ರದಲ್ಲಿ ಸಾರಾಯಿ ಅಂಗಡಿಯದ್ದೋ, ಮಟ್ಕಾ ಅಡ್ಡೆಯದ್ದೋ ಪಾಲಾಗುತ್ತದೆ.

ಮಕ್ಕಳ ದಿನಾಚರಣೆಯ ಈ ಸಂದರ್ಭದಲ್ಲಿ ನಮ್ಮ ಮನೆಯ ಮಕ್ಕಳನ್ನು ಅಲಂಕರಿಸಿ ಖುಷಿಪಟ್ಟರಷ್ಟೇ ಸಾಲದು. ನಮ್ಮ ನೆರೆಮನೆಯ ಮಕ್ಕಳ ಹೊಟ್ಟೆ ತುಂಬಿದೆಯೇ, ಇಲ್ಲವೇ ಎನ್ನುವುದನ್ನು ನೋಡುವುದು ನಮ್ಮ ಕರ್ತವ್ಯವಾಗಬೇಕು. ಮಾಜಿ ಗೃಹ ಸಚಿವರ ತವರೂರಿನಲ್ಲಿ ಮಕ್ಕಳ ಭಿಕ್ಷಾಟಣೆ ನಿರಂತರ ನಡೆಯುತ್ತಲೇ ಇದೆ. ಪೊಡವಿಗೊಡೆಯನ ನಾಡಿನಲ್ಲಿ ಬೀದಿ ಮಕ್ಕಳ ಶ್ರೇಯೋಭಿವೃದ್ಧಿಗೆ ಅಷ್ಟಮಠಗಳು, ಯತಿವರ್ಯರು ಮನಸ್ಸು ಮಾಡಬೇಕು.

ಮಕ್ಕಳ ದಿನವನ್ನು ವರ್ಷಕ್ಕೊಂದು ಬಾರಿ ಆಚರಿಸಿ ಸಿಹಿತಿಂಡಿ ತಿಂದು ಸಂತಸ ಪಡುವ ನಾವುಗಳು ಬೀದಿ ಮಕ್ಕಳ ಕನಸಿನಲ್ಲಿ ಭರವಸೆಯ ಬೆಳಕನ್ನು ಮೂಡಿಸಲು ಶ್ರಮಿಸಬೇಕು. ಇದಕ್ಕಾಗಿಯೇ ಸ್ಥಾಪಿತಗೊಂಡು ಸರಕಾರದ ಹಣವನ್ನು ನುಂಗಿ ನೀರು ಕುಡಿಯುವ ಎನ್ಜಿಓಗಳು ಈ ಬಗ್ಗೆ ಇನ್ನಾದರೂ ಎಚ್ಚರವಾಗಲಿ. ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಗಮನಿಸಲಿ. ಇದು ಒಬ್ಬಿಬ್ಬರಿಂದ ಆಗುವ ಕೆಲಸವಲ್ಲ. ಆದರೆ ಮಾನವ ಸಮಾಜ ಒಂದಾದಾಗ ಮಕ್ಕಳ ಭಿಕ್ಷಾಟಣೆಗೆ ಖಂಡಿತಾ ಮಂಗಳ ಹಾಡುವುದು ಸಾಧ್ಯ. ಮಕ್ಕಳ ಕೈಯಲ್ಲಿರುವ ತಟ್ಟೆ, ಹೆಗಲಲ್ಲಿರುವ ಜೋಳಿಗೆ ತೆಗೆದು ಅವರ ಬಾಳಿಗೆ ಅಕ್ಷರ ದೀವಿಗೆ ಹಚ್ಚುವವರು ನಾವಾಗೋಣ ಬನ್ನಿ...

ಲಾಸ್ಟ್ಲೈನ್: ಕಳೆಗುಂದಿದ ಮುಖ, ಕೆದರಿದ ಕೂದಲು, ಮಮತೆ, ಪ್ರೀತಿ ವಾತ್ಸಲ್ಯವರಿಯದ ಮುಗ್ಧ ಮನಸ್ಸು, ಸಪ್ಪೆ ಮೋರೆ ಹಾಕಿಕೊಂಡು ಬಂದು ಹೋಗುವವರ ಕಡೆ ಆಶೆಯ ಕಂಗಳ ದೃಷ್ಟಿ ಹರಿಸುತ್ತಾ, ಬೆನ್ನು ಬಿದ್ದು ಮುದ್ದು ಮಾತುಗಳಿಂದ ಕಾಡುವ ನತದೃಷ್ಟ ಮಕ್ಕಳಿಗೆ ಈ ದಿನದ ಶುಭಾಶಯಗಳು.

Monday, July 26, 2010

ಕೋಪಿಸೋದ್ರಲ್ಲಿ ಇರೋ ಸುಖ...
ಕೋಪದಲ್ಲಿ ಇರೋ ಸುಖ..!

  • `ಕೋಪ' ಅನ್ನೋದು ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಿರುವ, ಮುಂಗಾರಿನ ಸಮಯದಲ್ಲಿ ಎನಿಸ್ಕೊಂಡಾಗ ಬರೋ ಸಿಡಿಲಿನಂತೆ ನಮ್ಗೆ ತೀರಾ ಚಿರಪರಿಚಿತ ಪದ. ಕರಿ ಮೋಡ ಮುಸುಕಿದಂತೆ ನಮ್ಮ ಮನಸ್ಸನ್ನು ಆವರಿಸಿ, ಮೈ ಮನದಲ್ಲಿ ಸಂಚಲನ ಉಂಟು ಮಾಡೋ ಈ ಕೋಪದ ಮಜಾ ಸವಿದವರಿಗಷ್ಟೇ ಗೊತ್ತು. ಕೋಪದ ಮಹಿಮೆ ಬಲ್ಲವರಾರೋ? ಆದ್ರೆ ಈ ಕೋಪ ಅನ್ನೋದು ಯಾಕೆ ಬರುತ್ತೆ ಅಂತ ನಾವ್ಯಾರೂ ಊಹಿಸೋದೇ ಇಲ್ಲ. ಒಂದು ವೇಳೆ ಹಾಗೆ ಊಹಿಸೋದಿಕ್ಕೆ ಕೆಲ ಕಾಲ ತೆಗೆದುಕೊಂಡ್ರೂ ಆಗ ಎಲ್ಲಿಲ್ಲದ ಕೋಪ ಬರುತ್ತೆ. ಹೀಗೆ ಕೋಪವನ್ನು ನಾನಾ ರೀತಿಯಲ್ಲಿ ವಿಂಗಡಣೆ ಮಾಡೋದೇನೋ ಸರಿ. ಆದ್ರೆ ಕೆಲವೊಂದು ಸಲ ಈ ತರದ ಕೋಪಗಳಿಂದ ಲಾಭಕ್ಕಿಂತ ನಷ್ಠವೇ ಹೆಚ್ಚು ಅನ್ನೋದು ಅಷ್ಟೇ ದಿಟ.
    ನನ್ಗಂತೂ ಆಗಾಗ ಕೆಟ್ಟ ಕೋಪ ಬರುತ್ತೆ ಸ್ವಾಮೀ... ಈ ರೀತಿ ಕೋಪ ಬಂದಾಗ ನಾನು ಮನುಷ್ಯನಾಗಿರಲ್ಲ ಅಂತ ನಮ್ಮ ಮುಂದೆ ನಿಂತ್ಕೊಂಡು ತನ್ನ ಕೋಪದ ವರ್ಣನೆ ಮಾಡೋರನ್ನ ಬೇಜಾನ್ ನೋಡಿರ್ತೀವಿ. ಆತ ತಾನೊಬ್ಬ ಮಹಾನ್ ವ್ಯಕ್ತಿ ಅನ್ನೋ ತರಾ ಫೋಸ್ ಕೊಡ್ತಾ ನಿಂತಿದ್ರೆ ನಮ್ಗೆ ಇನ್ನಷ್ಟು ಕೋಪ ಬಂದಿರುತ್ತೆ. ಈ ಕೋಪಕ್ಕೆ ಕಾರಣಾನೂ ಬೇಕಿಲ್ಲ, ಅದಕ್ಕೆ ಅದರದ್ದೇ ಆದ ನಿದರ್ಿಷ್ಠ ಸ್ವರೂಪವೂ ಇಲ್ಲ. ಹಾಗಂತ ಈ ಕೋಪಾನ ಹಾಗೆ ಸುಮ್ಮನೆ ಬಿಡೋಕ್ಕಾಗುತ್ತಾ? ಬನ್ನಿ... ಈ ಕೋಪದ ಬಗ್ಗೆ ನಾವಾದ್ರೂ ಸ್ವಲ್ಪ ಹೊತ್ತು ಹರಟೋಣ.
    ಸಾಮಾನ್ಯವಾಗಿ ಕೋಪ ಯಾವಾಗ ಬರುತ್ತೆ ಅಂತ ಹೇಳೋಕ್ಕಾಗಲ್ಲ. ಬೆಳಿಗ್ಗೆದ್ದು ಆಫೀಸಿಗೆ ಹೊರಡೋ ತಯಾರಿಯಲ್ಲಿರ್ತೀವಿ. ಆಗ ನಮ್ಗೆ ಬೇಕಿದ್ದ ವಸ್ತುಗಳು ನಮ್ಮಿಂದ ಮರೆಯಾಗಿ ಸಕಾಲದಲ್ಲಿ ಸಿಗೋದಿಲ್ಲ. ಆಗಂತೂ ಕೂಡ್ಲೇ ಕೋಪ ಬಂದ್ಬಿಡುತ್ತೆ. ಅಮ್ಮ ತಿಂಡಿ ಮಾಡಿಟ್ಟು ಹತ್ರ ತಂದು ಕೊಡೋದು ಲೇಟಾದ್ರೆ ಆಗ್ಲೂ ಕೋಪ. ತಿಂಡಿ ತಿಂದು ಅಜರ್ೆಂಟಲ್ಲಿ ವಾಚು, ಪಸರ್ು ಮರೆತು ಬಸ್ಟ್ಯಾಂಡ್ಗೆ ತೆರಳಿದ್ರೆ ಬಸ್ಸು ನಮ್ಮನ್ನೇ ಬಿಟ್ಟು ಹೋಗಿರುತ್ತೆ. ನಾವು ಬಸ್ಸು ಕಾಯ್ಬೇಕೋ? ಬಸ್ಸು ನಮ್ಮನ್ನು ಕಾಯ್ಬೇಕೋ, ತಿಳಿಯದಾಗುತ್ತೆ. ಆಗ ಅನ್ಯಾಯವಾಗಿ ಡ್ರೈವರ್ ಮಹಾಶಯ ನಮ್ಮ ಕೋಪದ ಶಾಪಕ್ಕೆ ಗುರಿಯಾಗ್ಬೇಕಾಗುತ್ತೆ.
    ಸಿಕ್ಕಿದ ಬಸ್ನಲ್ಲಿ ಅಷ್ಟಿಷ್ಟು ತೂರ್ಕೊಂಡು ಒಳ ನುಗ್ಗಿದ್ರೆ ಕಂಡಕ್ಟರ್ನ ಹಾಳು ಬೈಗುಳ ಬೇರೆ. 4 ರೂಪಾಯಿ ಟಿಕೆಟ್ಗೆ 10 ರೂ ನೀಡಿದ್ರೆ ಚಿಲ್ಲರೆ ಇಲ್ಲ ಅನ್ನೋದು ನಮ್ಮ ಕಂಡಕ್ಟರ್ಗಳ ಸ್ಟೈಲ್. ಹಿಂದಿನ ಸ್ಟಾಪ್ನಲ್ಲಿ ಯಾರೋ ಟೈಂ ಕೀಪರ್ ಪುಣ್ಯಾತ್ಮ ಬೈದಿರ್ತಾನೆ, ಅದನ್ನು ಆತ ನಮ್ಮ ಮೇಲೆ ಒಂಚೂರೂ ಬಿಡದೆ ಕಾರಿ ಬಿಡ್ತಾನೆ. ಬಸ್ನಲ್ಲಿ ಮೆಲ್ಲಗೆ ಬೈದು ಬಿಟ್ರೆ ಪರ್ವಾಗಿಲ್ಲ, ಅಂತ ಸುಮ್ಮನಿರಬಹುದು. ಆದ್ರೆ ಕಾಲೇಜು ಹುಡ್ಗೀರ ಮುಂದೆ ಬೈದ್ರೆ ನಾವು ಸುಮ್ಮನಿರ್ತೀವಾ? ಆವಾಗ್ಲೆ ನಮ್ಗೆ ಕೆಟ್ಟ ಕೋಪ ಬರೋದು. ಹೀಗೆ ಕೆಲವೊಮ್ಮೆ ನಾವು ದಿನಕ್ಕೆಷ್ಟು ಸಾರಿ ಕೋಪ ಮಾಡ್ಕೋತೀವಿ ಅಂತ ನೆನಪೇ ಆಗಲ್ಲ.
    ಆಫೀಸಿಗೆ ಹೋದ್ರೆ ಅಲ್ಲೂ ಕೋಪ. ದಿನಾಲೂ ತಲೆ ತಿನ್ನೋರು ಅವತ್ತೂ ಅದನ್ನೇ ಮುಂದುವರಿಸಿದ್ರೆ ಸಾಕು, ಗಾಯದ ಮೇಲೆ ಬರೆ ಎಳೆದಂತಾಗುತ್ತದೆ. ಮತ್ತೆ ಮನಸ್ಸಿಗೆ ಸಮಾಧಾನ ಹೇಳಿ ಸುಮ್ಮನಾಗೋ ಹೊತ್ತಿಗೆ ಕೋಪವೇನೋ ಇಳಿದಿರುತ್ತೆ. ಆದ್ರೆ ಕೋಪ ಮಾತ್ರ ನಮ್ಮನ್ನು ಆ ದಿನ ಪೂತರ್ಿ ನಕ್ಷತ್ರಿಕನ ಹಾಗೆ ಬೆನ್ನ ಹಿಂದೆ ಬಿದ್ದು ಕಾಡ್ತಾ ಇರುತ್ತೆ. ಹೀಗೆ ಕೋಪ ಮಾಡ್ಕೊಂಡು ರಸ್ತೆ ಮೇಲೆ ನಡೆಯ್ತಾ ಇದ್ರೆ ಎದುರಿಗೆ ಸಿಗೋರೆಲ್ಲಾ ನಮ್ಮ ಕೋಪಕ್ಕೆ ಗುರಿಯಾಗ್ತಾರೆ. ಹೆಚ್ಚಿನವರು ಮನೆಗೆ ಬಂದ ಮೇಲೆ ಹೆಂಡತಿಯ ನಗು ಮುಖ ನೋಡಿಯಾದ್ರೂ ತಣ್ಣಗಾಗ್ತಾರೆ. ಅವರಿಗೆ ಗೊತ್ತಿರುತ್ತೆ, ಬಡವನ ಕೋಪ ದವಡೆಗೆ ಮೂಲ ಅಂತ. ಮನೇಲಿ ಹೆಂಡತಿಯಲ್ಲಿ ಕೋಪಿಸ್ಕೊಂಡ್ರೆ ಈಗ ಸಿಗ್ತಾ ಇರೋ ಉಪಚಾರಾನೂ ಸಿಗೋದಿಲ್ಲ, ನೆಮ್ಮದೀನೂ ಇರಲ್ಲ. ಆಕೆ ಅರೆ ಬೇಯಿಸಿದ ಬೇಯಿಸಿದ ಅಡುಗೆ ತಿಂದು ಮಲಗಿದಾಗ ಕೋಪವೆಲ್ಲಾ ಇಳಿದುಬಿಡುತ್ತೆ. ಅದಕ್ಕೆ ಬುದ್ಧಿವಂತ ಗಂಡಸರು ತಮ್ಮ ಹೆಂಡತಿಯ ಮುಂದೆ ಕೋಪ ಪ್ರದಶರ್ಿಸೋಕ್ಕೆ ಹೋಗಲ್ಲ, ಒಂದು ವೇಳೆ ಹೋದ್ರೂ ಹೆಂಡತಿಯಾದವಳು ಹೇಳ್ತಾಳೆ, `ನೀವೊಮ್ಮೆ ಮನೆಗೆ ಬನ್ನಿ' ಅಂತ. ಇದರರ್ಥ ಮನೇಲಿ ಗ್ರಹಚಾರ ಕಾದಿರುತ್ತೆ ಅಂತ ಬೇರೆ ಹೇಳ್ಬೇಕಾಗಿಲ್ಲ ತಾನೇ? ಹೆಂಡತಿ ಗಂಡನ ಕೋಪಕ್ಕೆ ಉತ್ತರ ನೀಡಲು `ರಾತ್ರಿಯಾಗ್ಲಿ, ಬೆಡ್ರೂಮ್ಗೆ ಬರ್ತಾರಲ್ವಾ... ಆಗ ವಿಚಾರಿಸ್ಕೋತೀನಿ' ಅಂತ ಮನದಲ್ಲೇ ಮಂಡಿಗೆ ತಿನ್ತಾ ಇರ್ತಾಳೆ. ಹೀಗೆ ಕೋಪ ಸವರ್ಾಂತಯರ್ಾಮಿಯಾಗಿ ಅಲ್ಲೂ, ಇಲ್ಲೂ ಎಲ್ಲೆಲ್ಲೂ ಇರುತ್ತೆ. ಇವೆಲ್ಲದಕ್ಕಿಂತ ಭಿನ್ನವಾಗಿರೋದು ಪ್ರೇಮಿಗಳ ಕೋಪ... ಸಾಮನ್ಯವಾಗಿ ಹುಸಿಮುನಿಸಿನಿಂದ ಆರಂಭವಾಗೋ ಇದು ನಂತರ ಬೃಹತ್ತಾಗಿ ಬೆಳೆದು ದೊಡ್ಡ ಜಗಳವೇ ಆಗಿ ಬಿಡುತ್ತೆ. ಆಗ ಕೆಲವರಂತೂ ಏನೇನೋ ಮಾತಾಡೋದುಂಟು ಮಾರಾಯ್ರೇ... ಕೋಪಿಸ್ಕೊಂಡಾಗ ಪ್ರೇಮಿಗಳು ಅನ್ನೋದೇ ಮರೆತು ಶತ್ರುಗಳ ತರಾ ಕಾದಾಟಕ್ಕೆ ಇಳೀತಾರೆ. ಈ ಜಗಳ ಮುಗಿಯಲು ಕಣ್ಣೀರಿನ ಧಾರೆ ಎರಡೂ ಕಡೆಯಿಂದ ಧಾರಾಕಾರವಾಗಿ ಸುರೀಬೇಕು. ಆಗ ಇಬ್ಬರಿಗೂ ಸಮಾಧಾನವಾಗಿ ದಿನದ ಕೋಪಕ್ಕೆ ಫುಲ್ಸ್ಟಾಪ್. ಕೋಪ ಮರೆತು ಕಣ್ಣಂಚು ಒದ್ದೆಯಾಗಿ ಪರಸ್ಪರ ಸ್ಸಾರಿ ಕೇಳೋದಿದೆಯಲ್ವಾ? ಅದರಷ್ಟು ಸುಮಧುರ ಕ್ಷಣ ಮತ್ತೊಂದಿಲ್ಲ ಅನ್ನೋದು ನನ್ನ ಮಾತು. ಆಗ ಪ್ರೇಮಿ ಜತೆಗಿದ್ದರಂತೂ ಹೇಳೋದೇ ಬೇಡ. ಪರಸ್ಪರ ಬಾಹು ಬಂಧನದಲ್ಲಿ ಕರಗಿ ಸಂತೈಸೋ ಆ ಕ್ಷಣ ಅವಿಸ್ಮರಣೀಯ. ಕೋಪ ಬರೋದು ಸವರ್ೆ ಸಾಮಾನ್ಯ. ಆದ್ರೆ ಆ ಕೋಪಾನ ಮರೆತು ಪರಸ್ಪರ ಸಂತೈಸೋದು ಮುಖ್ಯ. ಅದಕ್ಕೆ ನಾನು ಮೊದಲು, ಅವನು ಮೊದಲು ಎನ್ನುವ ಹಠ, ಅಹಮ್ಮಿನ ಲವಲೇಶಾನೂ ಇರ್ಬಾರ್ದು. ಹಾಗಾದಾಗ ಮಾತ್ರ ಕೋಪಿಸ್ಕೊಳ್ಳೋದು ಚೆನ್ನಾಗಿರುತ್ತೆ. ಇಲ್ಲಾಂದ್ರೆ ಕೋಪ ಮತ್ತಷ್ಟು ಜಾಸ್ತಿಯಾಗಿ ಅವಾಂತರವನ್ನೆಬ್ಬಿಸುತ್ತೆ. ಅದಕ್ಕೆ ನನ್ನಾಕೆ ಆಗಾಗ ಹೇಳ್ತಿರ್ತಾಳೆ, ಕೋಪ ಕಡಿಮೆ ಮಾಡ್ಕೊಳ್ಳಿ ಅಂತ. ಆಗ ನನ್ಗೆ ಕೆಟ್ಟ ಕೋಪ ಬರುತ್ತೆ. ಎನಿವೇ... ಕೋಪ ಮರೆತು ಮತ್ತೆ ನಗಿಸುವ ನನ್ನವಳಿಗೆ ಥ್ಯಾಂಕ್ಸ್ ಹೇಳ್ತಾ, ವಂದನೆಗಳು.

Tuesday, July 13, 2010

ಕೊಡಚಾದ್ರಿಯ ತುದಿಗೆ...ಕೊಡಚಾದ್ರಿಯ ತುದಿಗೆ...

ಬಿಡುವಿರದ ದಿನಗಳ ನಡುವೆಯೂ ಟ್ರೆಕ್ಕಿಂಗ್ ಅಥರ್ಾತ್ ಚಾರಣ ಅಂತಂದ್ರೆ ಕಿವಿ ನಿಮಿರಿಸೋ ನಮ್ಮ ಸಮಾನ ಮನಸ್ಕ ಗೆಳೆಯರ ತಂಡ ಈ ಬಾರಿ ಟ್ರೆಕ್ಕಿಂಗ್ ಹೊರಟಿದ್ದು ಮಂಜು ಕವಿಯುವ ನಾಡಿಗೆ... ಇಬ್ಬನಿ ಹನಿಯಾಗಿ ಹನಿಯೋ ಕೊಡಚಾದ್ರಿಯ ತುದಿಗೆ...
ಕೊಡಚಾದ್ರಿ ಟ್ರೆಕ್... ಅದೂ ಬಿಡದೆ ಕಾಡೋ ಮುಂಗಾರಿನ ನಡುವೆ..! ನಿಮಗೆಲ್ಲೋ ತಲೆ ಕೆಟ್ಟಿರಬೇಕು. ಬೇಸಿಗೆ ಕಾಲಕ್ಕೆ ಅಲ್ಲಿ ಹೋಗಲು ಸರಿಯಾದ ವ್ಯವಸ್ಥೆಯಿಲ್ಲ. ರಸ್ತೆ ಬಂದ್ ಆಗಿ ಹಲವಾರು ಕಿ.ಮೀ. ದೂರ ಕಲ್ಲುಗುಡ್ಡವನ್ನೇರಿ ನಡೆದೇ ಹೋಗಬೇಕಾದ ಪರಿಸ್ಥಿತಿ ಬೇರೆ. ಹೀಗಿರುವಾಗ ಜಡಿಮಳೆಗೆ ಎದೆಯೊಡ್ಡಿ ಕೊಡಚಾದ್ರಿ ಬೆಟ್ಟವೇರುವುದುಂಟಾ... ಅಂತ ಕೊಡಚಾದ್ರಿ ಹೆಸರು ಕೇಳಿದವರೆಲ್ಲಾ ತಮಾಷೆ ಮಾಡ್ತಾ ಇದ್ರು. ಆದ್ರೂ ಹಿಡಿದ ಪಟ್ಟು ಸಡಿಲಿಸದ ನಮ್ಮ ಗೆಳೆಯರ ತಂಡ ಹೇಗಾದ್ರೂ ಸರಿ, ಅಲ್ಲಿ ಹೋಗೋಕ್ಕೆ ಮುಂಗಾರೇ ಸೂಕ್ತ. ಅದೊಂದು ನೆನಪಿನಂಗಳದಲ್ಲಿ ಮರೆಯಾಗದೆ ಉಳಿದೀತು ಅಂತಂದು ಭಾರೀ ಸಾಹಸಕ್ಕೆ ಹೊರಟಂತೆ ಹೊರಟೇ ಬಿಟ್ಟಿತು.
ಮಂಜು ಮುಸುಕಿದ ಹಾದಿ..!
ಕೊಡಚಾದ್ರಿ ಹೆಸರು ಕೇಳಲಷ್ಟೇ ಮಧುರ. ಆದರೆ ಕೊಡಚಾದ್ರಿ ತಲುಪಲು ಮಂಗಳೂರಿನಿಂದ ಅಂದಾಜು 250 ಕಿ.ಮೀ. ಸಂಚರಿಸಬೇಕು. ಮುಸ್ಸಂಜೆಯ ವೇಳೆ ಮಂಗಳೂರು ಬಿಟ್ಟು ತೆರಳಿದ ನಮ್ಮ ತಂಡ ಬೈಕ್ನಲ್ಲೇ ಸಂಚಾರ ನಡೆಸಿ ಕೊಲ್ಲೂರು ತಲುಪುವಾಗ ರಾತ್ರಿ ಹನ್ನೊಂದು ಗಂಟೆ. ಅಲ್ಲಿ ರಾತ್ರಿ ಕಳೆದು ಮುಂಜಾನೆ ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆದ ನಮ್ಮ ತಂಡ ಕೊಡಚಾದ್ರಿಯ ಚಾರಣ ಸುಖ ಅನುಭವಿಸಲು ಹೊರಟು ನಿಂತಿತ್ತು. ಆಗಿನ್ನೂ ಬೆಳಗಾಗಿರಲಿಲ್ಲ. ಹಕ್ಕಿಗಳು ಬೆಳಗಾಯಿತು ಎಂದು ಎಲ್ಲರನ್ನೂ ಎಬ್ಬಿಸುತ್ತಾ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದುವು. ಮಂಜು ಮುಸುಕಿದ ಕೊಲ್ಲೂರಿನ ಹೋಟೆಲ್ ಒಂದರಲ್ಲಿ ಹೊಟ್ಟೆ ತುಂಬಿಸಿ ಹೊರಟಾಗ ಚುಮುಚುಮು ಚಳಿ ಬೇರೆ ನಮ್ಮ ಜತೆಯಾಗಿತ್ತು. ಕೊಲ್ಲೂರು ದೇವಳದ ಎಡಭಾಗದಲ್ಲಿ ಬಲಕ್ಕೆ ತಿರುಗಿದಲ್ಲಿ ಕೊಡಚಾದ್ರಿಗೆ ಹೋಗುವ ರಸ್ತೆ ಸಿಗುತ್ತದೆ.
ಸುಮಾರು 13 ಕಿ.ಮೀ. ಬೈಕ್ನಲ್ಲಿ ಸಂಚರಿಸುವ ಮಜಾನೇ ಬೇರೆ. ಮಂಜು ತಬ್ಬಿದ ಹಸಿರು ಕಾನನದ ನಡುವೆ ಸಂಚರಿಸುವಾಗ ಎದುರಿನ ಬೈಕ್ ಕ್ಷಣಮಾತ್ರ ಕಾಣದಾಗುತ್ತದೆ. ಹಚ್ಚ ಹಸಿರಿನ ಕಂಬಳಿ ಹೊದ್ದು ನಿಂತು ಕಂಗೊಳಿಸುವ ಕೊಡಚಾದ್ರಿಯ ತಪ್ಪಲು ಪ್ರದೇಶ ಕಣ್ತುಂಬಿಕೊಳ್ಳಲು ಮಳೆಗಾಲವೇ ಸಕಾಲ ಎನ್ನುವುದರಲ್ಲಿ ಎರಡು ಮಾತೇ ಇಲ್ಲ. ಸುತ್ತಲೂ ಕೊಲ್ಲೂರು ಮೂಕಾಂಬಿಕಾ ರಕ್ಷಿತಾರಣ್ಯ, ನಡುವೆ ಕಪ್ಪಗೆ ಮಿರಮಿರನೆ ಹೊಳೆಯುವ ಟಾರು ರಸ್ತೆ, ರಸ್ತೆಯ ಇಕ್ಕೆಲಗಳಲ್ಲಿ ಕಣ್ಣು ಹಾಯಿಸಿದರೆ ಹಾಲ್ನೊರೆಯಂತೆ ಬಳುಕುತ್ತಾ ಮೇಲ್ಗಡೆಯಿಂದ ಧುಮ್ಮಿಕ್ಕುವ ಜಲಧಾರೆ, ಕಾಡುಬಾಳೆ, ಕಾಡು ಹಲಸಿನ ಮರಗಳು ಇವನ್ನೆಲ್ಲಾ ನೋಡುತ್ತಿದ್ದರೆ ಪ್ರಕೃತಿಯ ಮಡಿಲಿನಲ್ಲಿ ನಿಜಕ್ಕೂ ಧನ್ಯತಾಭಾವ ಮೂಡುತ್ತದೆ.
ಕರಕಟ್ಟ ಎಂಬಲ್ಲಿ ರಸ್ತೆಯ ಬದಿಯ ಫಲಕವೊಂದು ಕೊಡಚಾದ್ರಿಗೆ 10ಕಿ.ಮೀ. ಎಂದು ಸೂಚಿಸುತ್ತದೆ. ಇಲ್ಲಿಂದ ಮುಂದೆ ಬೈಕ್ನಲ್ಲಿ ಅರ್ಧ ಕಿ.ಮೀ. ಸಾಗುವ ಸಾಹಸವೇನೋ ಮಾಡಬಹುದು. ಆದ್ರೆ ಬೈಕ್ ಟಯರ್ಗಳ ಗ್ಯಾರಂಟಿ ಹೇಳಲಾಗದು. ಯಾಕೆಂದರೆ ಅಲ್ಲಲ್ಲಿ ರಸ್ತೆಗಡ್ಡವಾಗಿ ಬೃಹತ್ ಗಾತ್ರದ ಸಾಗುವಾನಿ, ಬೀಟೆ ಮರಗಳು ನೆಲಕ್ಕುರುಳಿರುತ್ತವೆ. ಕಲ್ಲು, ಮಣ್ಣಿನ ದಿಣ್ಣೆಯನ್ನು ಒಳಗೊಂಡ ಏರು ರಸ್ತೆಯಲ್ಲಿ ಸಾಗುವುದು ಅಸಾಧ್ಯವೂ ಹೌದು. ಈ ಕಾರಣಕ್ಕಾಗಿ ನಮ್ಮ ತಂಡ ಬೈಕ್ ನಿಲ್ಲಿಸಿ ಕೆಳಕ್ಕಿಳಿಯಲೇಬೇಕಾಯಿತು.
ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಚಾರಣ ಕೈಗೊಳ್ಳುವ ಚಾರಣಿಗರಿಗೆ ಸಾಮಾನ್ಯವಾಗಿ ಇಂಬಳದ ಪರಿಚಯವಿದ್ದೇ ಇರುತ್ತದೆ. ಇದಕ್ಕೆ ಉಂಬಳ, ತುಳುವಿನಲ್ಲಿ ಉಂಬುರು ಎಂದೆಲ್ಲಾ ಕರೆಯುತ್ತಾರೆ. ಬೈಕ್ನಿಂದ ಕೆಳಗಿಳಿದದ್ದೇ ನಮಗೆ ಸ್ವಾಗತ ಕೋರಿದ್ದು ರಾಶಿ ರಾಶಿ ಇಂಬಳಗಳು. ನಮ್ಮ ರಕ್ತ ಹೀರಲೆಂದೇ ದಾಹಗೊಂಡು ಕಾದು ನಿಂತ ರಕ್ಕಸನ ರೀತಿ ಒಮ್ಮೆ ಭಾಸವಾಯಿತು. ಎಲ್ಲಿಂದಲೋ ಓಡೋಡಿ ಬಂದು ಕಾಲಿನ ಮೇಲೆ ಹತ್ತಿ ಕ್ಷಣದಲ್ಲಿ ರಕ್ತ ಹೀರಿ ನೇತಾಡುವ ಇಂಬಳಗಳ ಪರಿಚಯ ಮೊದಲೇ ಇದ್ದುದರಿಂದ ನಾವು ಆದಷ್ಟು ಜಾಗ್ರತೆ ವಹಿಸಿದ್ದೆವು. ಆದರೂ ಬೆಂಬಿಡದ ಇಂಬಳ ರಕ್ತ ಹೀರಿ ಹಿಗ್ಗಿದಾಗ ಅಯ್ಯೋ... ಬೆಲೆಬಾಳುವ ರಕ್ತವನ್ನು ಯಾರಿಗಾದರೂ ದಾನವಾದ್ರೂ ಮಾಡಬಹುದಿತ್ತು ಅನ್ನಿಸಿತ್ತು.
ಅರೆಕ್ಷಣ ನಿಂತರೆ ಕಾಲಿಗೆ ಮುತ್ತಿಕೊಳ್ಳುವ ಇಂಬಳ, ಏರು ಹಾದಿಯಲ್ಲಿ ಏದುಸಿರು ಬಿಡುತ್ತಾ ಸಂಚಾರ, ಇವೆಲ್ಲದರ ನಡುವೆ ದಣಿವನ್ನು ಮರೆಸೋ ದಟ್ಟವಾದ ಕಾನನದ ನಡುವೆ ಚಾರಣ ನಡೆಸೋದು ಸುಲಭವಲ್ಲ ಅಂತ ಗೊತ್ತಾಗಿದ್ದು ಆ ವೇಳೆಗೇ. ಮಳೆರಾಯ ಆಗೊಮ್ಮೆ ಈಗೊಮ್ಮೆ ಕೊಂಚ ಬಿಡುವು ಕೊಟ್ಟು ಮತ್ತೆ ತನ್ನ ಕೆಲಸ ಮಾಡುತ್ತಿದ್ದ. ಜಕರ್ಿನ್ ತೊಟ್ಟರೂ ಪೂತರ್ಿ ನೆನೆಯುವ ಜಡಿಮಳೆಗೆ ಸುಮಾರು 3 ಕಿ.ಮೀ. ಸಂಚರಿಸಿದರೆ ಮಳಯಾಲಿ ಟೀ ಶಾಪ್ ಸಿಗುತ್ತದೆ. ಬೆಟ್ಟದ ನಡುವೆ ಒಂಟಿಯಾಗಿ ಟೀ ಶಾಪ್ ತೆರೆದು ಕಷ್ಟಗಳಿಗೆ ಮೈತೆರೆದು ವನ್ಯಜೀವಿಗಳ ಜತೆ ಬದುಕುವ ಮಳಯಾಲಿ ಟೀ ಶಾಪ್ ಮಾಲಕ ನಮಗೆಲ್ಲಾ ಟೀ ವಿತರಿಸಿದ. ಅಲ್ಲಿಯೇ ಇಂಬಳವನ್ನು ಯಾಮಾರಿಸುವ ಸುಣ್ಣದ ಉಂಡೆ ಹಿಡಿದುಕೊಂಡ ನಮ್ಮ ತಂಡ ಮತ್ತೆ ಚಾರಣ ಮುಂದುವರಿಸಿತು.
ಆನಂತರದ ಚಾರಣ ನೆನೆಸಿದಂತಿರದೆ ರುದ್ರ ರಮಣೀಯವಾಗಿತ್ತು. ಕೊಡಚಾದ್ರಿಯ ಶಿಖರ ದೂರದಿಂದಲೇ ಕೈ ಬೀಸಿ ಕರೆಯುತ್ತಿತ್ತು. ಕಲ್ಲಿನ ಕಡಿದಾದ ದುರ್ಗಮ ಹಾದಿಗಳಲ್ಲಿ ಸಾಗುತ್ತಿರಬೇಕಾದರೆ ಪ್ರಕೃತಿಯ ರಮ್ಯ ಪ್ರಪಂಚ ಕಣ್ಮುಂದೆ ಬಂದು ನಿಲ್ಲುತ್ತದೆ. ಕೊಂಚ ವಿರಮಿಸೋಣ ಎಂದರೆ ಇಂಬಳಗಳು ನಾವೂ ಬರ್ತೀವಿ ಅಂತ ಜತೆಯಾಗ್ತಾ ಇತ್ತು. ಮಂಜು ಮುಸುಕಿದ ಮೂರು ದಟ್ಟವಾದ ಅರಣ್ಯವನ್ನು ದಾಟುವಾಗ ನಮ್ಮ ತಂಡ ಸುಸ್ತೋ ಸುತ್ತು. ಅಂತೂ ಇಂತು ಕೊಡಚಾದ್ರಿ ಗಿರಿ ಏರಿದೆವು ಅಂದಾಗ ಗೈಡ್ ಚಂದ್ರ ಜತೆಯಾಗಿ, ಸರ್ವಜ್ಞ ಪೀಠಕ್ಕೆ ಇನ್ನೂ 3 ಕಿ.ಮೀ. ಹೋಗಬೇಕು ಅಂದಾಗ ಮಳೆಯಲ್ಲಿ ಹೋಗೋದು ಹೇಗಪ್ಪಾ ಅನ್ನಿಸಿದ್ದು ಸಹಜ.
ಧ್ಯಾನಸ್ಥ ಸರ್ವಜ್ಞನಿಗೊಂದು ಪೀಠ
ಸರ್ವಜ್ಞ ತನ್ನ ಹೊನ್ನಿನಂತಹ ನುಡಿಮುತ್ತುಗಳ ಮೂಲಕ ಜನರ ಬಾಯಲ್ಲಿ ನಿತ್ಯ ಹರಿದಾಡುತ್ತಿದ್ದರೆ ಕೊಡಚಾದ್ರಿಯ ನೆತ್ತಿಯ ಮೇಲೆ ಧ್ಯಾನಸ್ಥನಾಗಿದ್ದಾನೆ. ಪ್ರಪಂಚದ ಅಂಕುಡೊಂಕುಗಳನ್ನು ತನ್ನ ವಚನಗಳ ಮೂಲಕ ತಿದ್ದಿದ ಮಹಾಶಿಲ್ಪಿ ಸರ್ವಜ್ಞ ಪ್ರಕೃತಿಯ ನಡುವೆ ಮಗುವೇ ಆಗಿದ್ದಾನೆ. ಸರ್ವಜ್ಞನ ಪೀಠಕ್ಕೊಂದು ಸುತ್ತು ಬಂದು ತಲೆಬಾಗಿಸಿ ವಂದಿಸಿದ ನಮಗೆ ಚಾರಣಕ್ಕೊಂದು ಅರ್ಥ ಕಂಡುಕೊಂಡ ಧನ್ಯತೆ. ಸಮುದ್ರ ಮಟ್ಟದಿಂದ ಸುಮಾರು 1400 ಅಡಿ ಎತ್ತರದಲ್ಲಿ ನಿಂತು ಇಡೀ ಲೋಕದ ಸೌಂದರ್ಯ, ಪ್ರಕೃತಿಯ ಚೆಲುವು ನೋಡುತ್ತಿದ್ದರೆ ಸಮಯ ಕಳೆದುದು ತಿಳಿಯದು. ಕೊರೆಯುವ ಚಳಿ, ವೇಗವಾಗಿ ಬಡಿಯುವ ಮಳೆಹನಿ, ಜೋರಾದ ಗಾಳಿ, ಮುತ್ತಿಕ್ಕುವ ಮಂಜಿನ ನಡುವೆ ಕೊಡಚಾದ್ರಿ ಮಾನ್ಸೂನ್ ಟ್ರೆಕ್ ನಿಜಕ್ಕೂ ವಣರ್ಿಸಲಸದಳ ಅನುಭವ.
ಕೊಡಚಾದ್ರಿ ಇಳಿದು ಭಟ್ಟರ ಮನೆ ವೀಕ್ಷಿಸಿ, ಹುಲಿರಾಯ ದೇವನಿಗೆ ನಮಸ್ಕರಿಸಿ ಚಂದ್ರ ಅವರ ಪುಟ್ಟ ಮನೆಯಲ್ಲಿ ಊಟ ಮುಗಿಸಿ ಸಂಜೆ 4 ಗಂಟೆಗೆ ಬೆಟ್ಟ ಇಳಿಯಲು ತೊಡಗಿದ ನಮಗೆ ಏನೋ ಕಾಲು ನಿಂತಲ್ಲಿ ನಿಲ್ಲದೆ ಬಲ ಕಳೆದುಕೊಂಡು ನಡುಗುತ್ತಿತ್ತು. ಜೋರಾದ ಮಳೆಯಲ್ಲಿ ಮತ್ತೆ ಎರಡು ಗಂಟೆ ಚಾರಣ ಮುಗಿಸಿ ಹಿಂತಿರುಗಿ ಬೈಕ್ ಏರುವಾಗ ದೂರದಲ್ಲಿ ಕೊಡಚಾದ್ರಿ ತಲೆ ಎತ್ತಿ ನಿಂತಿತ್ತು. ಕೊಡಚಾದ್ರಿಯಿಂದ ಕೊಲ್ಲೂರಿಗೆ ಮತ್ತದೇ ಮುಸ್ಸಂಜೆಯ ಮಬ್ಬು ಕತ್ತಲಿನಲ್ಲಿ ಸಂಚಾರ ಬೆಳೆಸಿದ ನಮಗೆ ಏನೋ ಕಳೆದುಕೊಂಡ ದು:ಖ, ಹಾಗೇ ಏನೋ ಸಾಧಿಸಿದ ಸುಖ ಹೆಜ್ಜೆಹೆಜ್ಜೆಗೆ ಕಾಡುತ್ತಿತ್ತು.

Saturday, June 5, 2010

ನನ್ನ ಇಷ್ಟ...ಫಲಕ ಪುರಾಣಗಳು..!


ಫಲಕ ಪುರಾಣಗಳು...
ಎದುರು ನೋಡಿಕೊಂಡು ನಡೆಯಿರಿ... ಮುಂದಕ್ಕೆ ಉಬ್ಬು ತಗ್ಗುಗಳಿವೆ.
ಏನ್ರೀ ಹಾಗೆ ನೋಡ್ತಾ ಇದ್ದೀರಾ..? ನವು ಇದನ್ನು ಅಪಾರ್ಥ ಮಾಡ್ಕೋಬೇಕಾಗಿಲ್ಲ. ಇದೊಂದು ರಸ್ತೆ
ಬದಿ ಸಿಗೋ ಸಾಮಾನ್ಯ `ಫಲಕದ ಒಕ್ಕಣೆ ಅಷ್ಟೇ. ಇದರಲ್ಲಿ ಬರೆದಿರೋ ಪದಗಳನ್ನು ಯಾರಾದ್ರೂ ಅಪಾರ್ಥ ಮಾಡ್ಕೊಂಡು ಓದಿದ್ರೆ ನಾನೇನೂ ಮಾಡೋಕ್ಕಾಗಲ್ಲ. ಇಂತಹ ಫಲಕಗಳನ್ನು ಅದೆಷ್ಟೋ ನಾವು
ನಮ್ಮಗಳ ಲೈಪಲ್ಲಿ ನೋಡಿರ್ತೀವಿ. ಕೆಲವೊಮ್ಮೆ ನಮ್ಗೆ ಈ ಫಲಕಗಳನ್ನು ಎಷ್ಟು ಹೊತ್ತು ಓದಿದ್ರೂ ಅದರ ಅರ್ಥ ಮಾತ್ರ ತಿಳಿಯೋದೇ ಇಲ್ಲ. ಫಲಕಗಳು ಅನ್ನೋ ಪದ ನಮಗೆ ಹೊಸದೇನೂ ಅಲ್ಲ. ಜಾಹೀರಾತು ಫಲಕಗಳು, ಎಚ್ಚರಿಕೆ ಫಲಕಗಳು ಇವೆಲ್ಲಾ ಜನರನ್ನು ಸುಲಭವಾಗಿ ಸೆಳೆಯುತ್ತೆ ಅಂತ ಅಂತ ನಾನು ನಂಬ್ಕೊಂಡಿದ್ದೀನಿ.
ನನ್ಗಂತೂ ಎಲ್ಲಿಗೆ ಹೋಗ್ತಾ ಇದ್ರೂ ಈ ಎಚ್ಚರಿಕೆ ಫಲಕಗಳು ಕಣ್ಣಿಗೆ ರಾಚುತ್ತದೆ. ದಿನದ ಕೆಲಸ ಮುಗಿಸಿ ಮಂಗ್ಳೂರಲ್ಲೊಂದು ಸುತ್ತು ಹಾಗೆ ಸುತ್ತಾಡೋಣ ಅಂತ ಹೊರಟ್ರೆ ಸಾಕು ಮಾರಾಯ್ರೇ... ಈ ಫಲಕಗಳನ್ನು ನಾನು ನೋಡದೇ ಇದ್ರೂ ಅವೇ ಕಣ್ಮುಂದೆ ಬಂದು ನಿಂತಂತೆ ಭಾಸವಾಗುತ್ತೆ. ಈ ಫಲಕಗಳನ್ನು ಓದೋದ್ರಲ್ಲಿ ಇರೋ ಆನಂದ ನಿಮ್ಗೇನು ಗೊತ್ತು ಬಿಡಿ. ಹಾಗಂತ ನಾನೊಬ್ಬ `ಫಲಕ ಪ್ರೇಮಿ ಇರೋದು ಅಂತಾ ತಿಳಿಯೋದೇನೂ ಬೇಡ.
ನನ್ನ ದಿನಚರಿ ಆರಂಭವಾಗೋದೇ ಈ ಫಲಕಗಳಿಂದ... ಮುಂಜಾನೆಗೆ ಇನ್ನೂ ಒಂದರೆಗಳಿಗೆ ಇದೆ ಅನ್ನೋವಾಗ ಬಸ್ಸು ಹತ್ತಿ ಸೀಟುಗಳೇನಾದ್ರೂ ಖಾಲಿ ಇವೆಯಾ ಅಂತ ಒಳಗಡೆ ನೋಡಿದ್ರೆ ಕೆಲವೊಂದು ಸೀಟುಗಳು ಖಾಲಿ ಇರುತ್ತೆ. ಆದ್ರೆ ಅಲ್ಲಿ ಕುಳಿತ್ಕೊಳ್ಳೋಕೆ ಈ ಹಾಳು ಫಲಕಗಳು ಅಡ್ಡ ಬರುತ್ತೆ. ಆರ್.ಟಿ.ಓ.ದವ್ರು `ಮುಂದಿನ ನಾಲ್ಕು ಸೀಟು ಮಹಿಳೆಯರಿಗೆ ಮೀಸಲು ಅಂತ ದಪ್ಪ ಅಕ್ಷರದಲ್ಲಿ ಬರೆದಿದ್ದು ದೂರದಿಂದಲೇ ಕಾಣುತ್ತೆ. ಪರವಾಗಿಲ್ಲ ಮಹಿಳಾಮಣಿಗಳು ಬಂದಾಗ ಎದ್ದು ನಿಂತ್ಕೋಬಹುದು ಅಂತ ಕುಳಿತುಕೊಳ್ಳೋಕೆ ಹೋದ್ರೆ, ಬದಿಯಲ್ಲಿ ಕುಳಿತ ನಾರೀಮಣಿಯೊಂದು ವಾರೆಗಣ್ಣಿನಲ್ಲಿ ಸಂಶಯ ವ್ಯಕ್ತ ಪಡಿಸುತ್ತೆ. ಇದರ ಸಹವಾಸವೇ ಬೇಡ,
ಅಂತ ಆ ಕಡೆ ನೋಡಿದ್ರೆ ಅಲ್ಲಿ `ಅಂಗವಿಕಲರಿಗೆ ಮಾತ್ರ ಅಂತ ಬೋಡರ್ು ಬೇರೆ. ನಮ್ಮೂರ
ಬಸ್ಸಿನಲ್ಲಿ ಕೆಲವು ಕುಚೇಷ್ಟಿಗಳು `ಅಂಗವನ್ನು ಸ್ವಲ್ಪ ಓರೆಕೋರೆ ಮಾಡಿ `ಲಂಗ `ಲಿಂಗ ಅಂತ ತಿದ್ದಿದ್ದು ಅದು ಈಗ್ಲೂ ಹಾಗೇ ಇದೆ. ನನ್ ಪ್ರಕಾರ ಈ ಹಾಳು ಬಸ್ಸಿನಲ್ಲಿ ಮಹಿಳೆಯರಿಗೆ, ಅಂಗವಿಕಲರಿಗೆ ಪ್ರತ್ಯೇಕಾಸನ ಇರುವಂತೆಯೇ ಕಾಲೇಜು ಹುಡ್ಗೀರಿಗೆ, ಮದುವೆಯಾದವರಿಗೆ, ಪ್ರೇಮಿಗಳಿಗೆ, ಮಗು ಇರೋರಿಗೆ ಪ್ರತ್ಯೇಕಾಸನವನ್ನು ಇಟ್ಟು ಫಲಕ ಬರೆಯ್ಬೇಕು. ಬಸ್ಸಿಂದ ಇಳಿದು ನಡೆದು ಹೋಗ್ತಾ ಇರ್ಬೇಕಾದ್ರೆ ಮನೆಗಳ ಮುಂದೆ ದೊಡ್ಡದಾದ ಫಲಕ `ಇಲ್ಲಿ ಕಚ್ಚುವ ನಾಯಿಗಳಿವೆ... ಎಚ್ಚರಿಕೆ ಆದ್ರೆ ನಾಯಿಯ ಬೊಗುಳುವಿಕೆ ಮಾತ್ರ ಕೇಳಲ್ಲ. ಮನೆಯ ಯಜಮಾನನ ಕೈಯಲ್ಲೊಂದು ಬೆಕ್ಕಿನ ಗಾತ್ರದ ನಾಯಿಮರಿ. ಇದು ಬೊಗಳುತ್ತೋ, ಕಚ್ಚುತ್ತೋ ದೇವರಿಗೇ ಗೊತ್ತು.
ಇಂತಹ ಫಲಕಗಳು ನಮ್ಮಲ್ಲಿ ಬೇಕಾದಷ್ಟು ಕಡೆ ಕಾಣಸಿಗುತ್ತೆ. ರಸ್ತೆ ಬದಿ ನಡೆದುಕೊಂಡು ಹೋಗ್ತಾ ಇದ್ರೆ ನಮ್ಮನ್ನು ಎಚ್ಚರಿಸುವ ಫಲಕಗಳ ಸಾಲು ಸಾಲು ಕಾಣಸಿಗುತ್ತದೆ. ದೊಡ್ಡ ಅಂಗಡಿಯ ಮುಂದೆ `ವಾಹನ ಪಾಕರ್ಿಂಗ್ ನಿಷೇಧಿಸಲಾಗಿದೆ ಎಂದು ಬರೆದಿದ್ದರೂ ವಾಹನಗಳ ದಂಡೇ ನೆರೆದಿರುತ್ತೆ. ಹೊಟೇಲ್ನಲ್ಲಿ `ಹೊರಗಿನ ತಿಂಡಿಗಳಿಗೆ ನಿಷೇಧವಿದೆ ಎನ್ನುವ ಫಲಕಗಳು ಇರುವುದುಂಟು. ಹೊಟೇಲ್ಗೆ ಹೋಗೋದೇ ಏನಾದ್ರೂ ತಿನ್ನೋದಕ್ಕೆ, ಹೀಗಿರುವಾಗ ಹೊರಗಿನ ತಿಂಡಿಯನ್ನು ಒಳಗೆ ಕೊಂಡ್ಹೋಗಿ ತಿನ್ನುವ ಜರೂರತ್ತಾದರೂ ಏನು? ಅನ್ನೋದಕ್ಕೆ ಉತ್ತರಿಸೋರು ಯಾರು?
ದೇವಸ್ಥಾನದ ಹೊರಗಡೆ ಫಲಕದಲ್ಲಿ `ಚಪ್ಪಲಿ ಬಿಟ್ಟು ಹೋಗಿ ಅಂತ ಬರೆದಿತರ್ಾರೆ. ಅದರರ್ಥ ಚಪ್ಪಲಿ ಇಲ್ಲೇ ಬಿಟ್ಟು ಹೋಗಿ ಅನ್ನೋದರ ಅರ್ಥ ಪಾದಯಾತ್ರೆ ಮಾಡಿ ಮನೆಗೆ ಬಂದಾಗ ಅರಿವಾಗುತ್ತೆ. ನಾವು ಚಪ್ಪಲಿ ಬಿಟ್ಟು ಹೊಗುವಾಗ, ಕೊಂಡು ಹೋಗುವವನೂ ತಯಾರಿರುತ್ತಾನೆ. ಇಷ್ಟಕ್ಕೇ ಫಲಕಗಳ ಬಗ್ಗೆ ಹೇಳೋದು ಮುಗೀಲಿಲ್ಲ. ರಸ್ತೆ ಬದಿ ಸ್ವಚ್ಛತೆ ಕಾಪಾಡಿಕೊಳ್ಳಿ ಅನ್ನೋ ಫಲಕಗಳಿಂದ ಹಿಡಿದು `ಇಲ್ಲಿ ಮೂತ್ರ ಮಾಡಬಾರದು ಅಂತಾನೂ ಬರೆದಿತರ್ಾರೆ, ಆದ್ರೂ ಕೆಲವರು ತಮ್ಮ ಬುದ್ಧಿ ಬಿಡದೆ ಅಲ್ಲಿಯೇ ಕಾಲೆತ್ತಿ ನಿಲ್ಲೋದುಂಟು, ಅದಕ್ಕೆ ನಮ್ಮ ಊರಿನಲ್ಲೊಂದು ಕಡೆ ಯಾರೋ ಪುಣ್ಯಾತ್ಮರು, ಇಲ್ಲಿ ಮೂತ್ರ ಮಾಡಿದವ ನಾಯಿಗೆ ಸಮಾನ,
ಮಂಗನಿಗೆ ಸಮಾನ...... ಅಂತ ಇನ್ನೂ ಏನೇನೋ ಬರೆದಿದ್ದಾರೆ. ಹೀಗಾಗಿ ಹಗಲು ಹೊತ್ತು ಅಲ್ಲಿಗೆ ಹೋಗೋ ಸಾಹಸ ಮಾಡಲ್ವಂತೆ. ಇವಿಷ್ಟೇ ಅಲ್ಲ, ಬಸ್ಸಿನಲ್ಲಿ ಗೇರ್ ಬಾಕ್ಸ್ನ ಮೇಲೆ ಚಿಕ್ಕದಾದ ಫಲಕ, `ಇದರ ಮೇಲೆ ಕಾಲಿಡಬೇಡಿ, ಅದರರ್ಥ ಕಾಲು ಮಾತ್ರ ಇಡಬಾರದು, ಕೈ, ಇಡೀ ದೇಹ ಇಡಬಾರದು ಎಂದೇನೂ ಬರೆದಿಲ್ವಲ್ಲಾ, ಅಂತ ನಮ್ಮೂರಿನ ತಲರ್ೆಗಳು ಅವನ್ನು ಏರಿ ಕುಳಿತುಬಿಡುತ್ತೆ. ಡ್ರೈವರನ ಹಿಂದಿನ ಫಲಕದಲ್ಲಿ `ಡ್ರೈವರನೊಂದಿಗೆ ಮಾತಾಡದಿರಿ ಅಂತ ಬರೆದೇ ಇದ್ರೂ ಯಾವ ಡ್ರೈವರ್ ಮಾತಾಡ್ದೇ ಹೋಗ್ತಾನೆ ಹೇಳಿ? ಡ್ರೈವರ್ನನ್ನು ಮಾತಾಡಿ ತಮ್ಮ ತೀಟೆ ತೀರಿಸಲಿಕ್ಕೆಂದೇ ಕೆಲವರು ಬಸ್ಸು ಹತ್ತುವುದುಂಟು. ಗಂಡಸರಾದ್ರೆ ಬಾಯಿ ಮಾತು, ಹುಡ್ಗೀರ ಜತೆ ಕಣ್ಣಲ್ಲೇ ಡ್ರೈವರ್ ಮಾತಾಡ್ತಾ ಇರ್ತಾನೆ. ಬಸ್ಸಿನೊಳಗೆ ಸಿನಿಮಾ ಗೃಹದೊಳಗೆ ಬರೆದಂತೆ `ಹೊಗೆಬತ್ತಿ ಸೇದಬಾರದು ಅಂತಾ ಬೋಡರ್ಿದ್ರೂ ಎಷ್ಟು ಜನ ಸೇದೋದಿಲ್ಲ? ಹೀಗೆ ಕೆಲವೊಂದು ಸಮಯ ಈ ಎಚ್ಚರಿಕೆ ಫಲಕಗಳು ಅಭಾಸವಾಗಿ ಕಾಡೋದುಂಟು. `ದಯವಿಟ್ಟು ಚಿಲ್ಲರೆ ಕೊಟ್ಟು ಸಹಕರಿಸಿ, `ಟಿಕೇಟನ್ನು ಕೇಳಿ ಪಡೆಯಿರಿ, `ಟಿಕೆಟಿಲ್ಲದ ಪ್ರಯಾಣ ರೂ.500 ದಂಡ. ಇವನ್ನೆಲ್ಲಾ ಸರಕಾರದ ಡಬ್ಬಾ ಬಸ್ನಲ್ಲಿ ನೋಡಿದ್ರೆ ಇದಕ್ಕಿಂತ ನಮ್ಮೂರ ಕೆಂಪು ಮುಸುಡಿಯ ಬಸ್ಸೇ ವಾಸಿ ಅನ್ನಿಸುತ್ತೆ. ಕಂಡಕ್ಟರ್ ಕೇಳಿದ್ರೆ ಟಿಕೇಟ್, ಇಲ್ಲಾಂದ್ರೆ ಇಲ್ಲ. ನಾನು ನಗರ ಪ್ರದಕ್ಷಿಣೆ ಹಾಕುವಾಗ 15 ನಂಬರ್ ಬಸ್ಸಿನಲ್ಲಿ ದೇವಾಲಯದೊಳಗಿರುವಂತೆ ಬರೆದಿದ್ದು ಕಾಣಿಸುತ್ತೆ. `ಕಿಸೆ ಕಳ್ಳರಿದ್ದಾರೆ, ಎಚ್ಚರಿಕೆ... ನಿಮ್ಮ ಸೊತ್ತಿಗೆ ನೀವೇ ಜವಾಬ್ಧಾರರು ಈ ಫಲಕ ಬರೆದಿರೋ ತಲೆಗೆ ಥ್ಯಾಂಕ್ಸ್ ಹೇಳಲೇಬೇಕು. ಒಟ್ಟಾರೆ, ಈ ಫಲಕಗಳ ಬಗ್ಗೆ ಬರೆಯತೊಡಗಿದ್ರೆ ರಾತ್ರಿ ಕಳೆದು ಹಗಲು ಬರುತ್ತೆ. ಇವಿಷ್ಟು ಸದ್ಯಕ್ಕೆ ಸಾಕು, ಇನ್ನೊಮ್ಮೆ ಫಲಕ ಪುರಾಣ ಮುಂದುವರಿಸ್ತೀನಿ. ನಮಸ್ಕಾರ...

Friday, June 4, 2010

ಮಲೆನಾಡ ಮಡಿಲಿಂದ...
ಮಳೆಗಾಲಕ್ಕೆ ಮಲೆನಾಡೇ ಸರಿ...
ಮುಂಗಾರು ಕಳೆದ ಬಾರಿ ಭರದಿಂದ ಆಗಮಿಸಿ, ಆಗೊಮ್ಮೆ ಈಗೊಮ್ಮೆ ರೌಧ್ರಾವತಾರ ತಾಳಿ ಬಿರುಸಾಗಿ ಸುರಿದರೂ ನಮ್ಗೆ ಮುಂಗಾರಿನ ಮೇಲಿರುವ ಮಮತೆ, ಒಲುಮೆ, ಅಕ್ಕರೆ ಒಂದಿನಿತೂ ಕಡಿಮೆಯಾಗಲ್ಲ. ನನ್ಗಂತೂ ಮುಂಗಾರು ಆಗಮನದ ಈ ಹೊತ್ತು ಬಾಲ್ಯದಲ್ಲಿ ಗತಿಸಿಹೋದ ಅದೆಷ್ಟೋ ಸಿಹಿ ಕಹಿ ಮಿಶ್ರಿತ ನೆನಪುಗಳು ಸದಾಕಾಲ ಕಾಡ್ತಾನೇ ಇರುತ್ತೆ. ಮುಂಗಾರು ಮಳೆ ಕ್ಷಣಕ್ಕೊಮ್ಮೆ ವೇಗ ಪಡೆಯಬಹುದು ಅಥವಾ ಹನಿಯುತ್ತಿರಬಹುದು. ಆದ್ರೆ ನೆನಪುಗಳ ಧಾರೆ ಬಿಡದೆ ಸುರಿಯುತ್ತಿರುತ್ತದೆ. ಮಳೆ ಕೆಲವರಿಗೆ ವಿಪರೀತ ಸಂಕಟ ತರಬಹುದು. ಮಳೆ ಬಂತು ಅಂದ್ರೆ ಸಾಕು, ಮನೆಯ ಬಾಗಿಲು ಮುಚ್ಚಿ ಮನೆಯೊಳಗೆ ಸೇರ್ಕೊಳ್ಳೋರು ಬಹಳ ಜನ. ಇವರಿಗೆ ಈ ಮಳೆಯಲ್ಲಿ ನೆನೆಯೋ ಮನಸ್ಸೇನೋ ಇರುತ್ತೆ. ಆದ್ರೆ ಒಳಗೊಳಗೇನೋ ಅಳುಕು. ಎಲ್ಲಿ ನೆಗಡಿ, ಜ್ವರ ಶುರುವಾಗಿ ಕಂಬಳಿಯೊಳಕ್ಕೆ ಸೇರ್ಕೋಬೇಕಾಗುತ್ತೋ ಅನ್ನೋ ಭಯ. ಹೌದು. ಮುಂಗಾರು ಶುರುವಾಗುವಾಗ ಶೀತ ಸಂಬಂಧಿ ಕಾಯಿಲೆಗಳೂ ಆರಂಭವಾಗಿರುತ್ತೆ. ಪರಿಚಯದ ನೆಂಟರಂತೆ ಆಗಮಿಸುವ ಇದು ನಮ್ಮನ್ನು ಇನ್ನಿಲ್ಲದಂತೆ ಗೋಳು ಹೊಯ್ಯುತ್ತೆ ಅನ್ನೋದು ಬೇರೆ ಮಾತು.
ಚಿಕ್ಕಂದಿನಲ್ಲಿ ಮಳೆಯ ಮೊದಲ ಹನಿ ಭೂಮಿಗೆ ಸೋಕುವಾಗ ಅಮ್ಮ ನಮ್ಮನ್ನೆಲ್ಲಾ ಕರೆದು ಬಟ್ಟೆ ಬಿಚ್ಚಿಸಿ ಅಂಗಳದಲ್ಲಿ ನಿಲ್ಲಿಸುತ್ತಿದ್ದಳು. ಮೇಲಿಂದ ಬೀಳುವ ಮುಂಗಾರಿನ ರಸಧಾರೆಗೆ ಮೈಮನ ಪುಳಕವಾಗುತ್ತಿತ್ತು. ಅಮ್ಮ ಮನೆಯ ಮುಂದಿನ ಬಾಗಿಲಿನಲ್ಲಿ ನಿಂತು ನಮ್ಮನ್ನೆಲ್ಲಾ ಗದರಿಸಿ ಕೂಗಿದರೂ ನಾವು ಮನೆಯೊಳಕ್ಕೆ ಬರುತ್ತಿರಲಿಲ್ಲ. ಅಪ್ಪನ ಜೋರು ಸ್ವರ ಕಿವಿಗೆ ಬೀಳಬೇಕಾಗಿತ್ತು, ನಾವು ಮಳೆಸ್ನಾನ ಮಾಡುವುದನ್ನು ನಿಲ್ಲಿಸಲು. ಮಳೆ ಬಂತಂದ್ರೆ ಕುಟ್ಟಿ ದೊಣ್ಣೆ (ಈಗಿನ ಕ್ರಿಕೆಟ್) ಆಟ ಸಂಪೂರ್ಣ ಬಂದ್. ಅದರ ಬದಲಿಗೆ ಮಳೆಯ ಹರಿವ ನೀರಿನಲ್ಲಿ ಕಾಗದದ ದೋಣಿ ತಯಾರಿಸಿ ತೇಲಿಬಿಡುವ ನಮ್ಮ ಆಟ ಶುರುವಿಟ್ಟುಕೊಳ್ಳುತ್ತಿತ್ತು. ದೋಣಿ ಬಿಡುವುದು, ಹಳೆಯ ಸೈಕಲ್ನ ಪಂಕ್ಚರ್ ಆದ ಟಯರ್ ಹೊಡೆದುಕೊಂಡು ಸುರಿವ ಮಳೆಯನ್ನು ಲೆಕ್ಕಿಸದೆ ಹಳ್ಳ ಕೊಳ್ಳಗಳನ್ನು ದಾಟಿ ಸಾಗುತ್ತಿದ್ದೆವು. ಇದರಿಂದ ಮನಸ್ಸಿಗೆ ಏನೋ ಸಂತಸ. ಹೊತ್ತು ಏರತೊಡಗಿದಾಗ ಅಮ್ಮನ ನೆನಪಾಗುತ್ತಿತ್ತು. ಮನೆ ಸೇರಿದರೆ ಮನೆಯ ತುಂಬಾ `ಅಕ್ಷೀ ಅನ್ನೋ ಸದ್ದು. ಸಂಜೆಗೆ ಅಪ್ಪನ ಬೈಗುಳ ಕೇಳುತ್ತಾ ಅಮ್ಮ ತಯಾರಿಸಿಕೊಟ್ಟ ಒಳ್ಳೆಮೆಣಸು, ಶುಂಠಿಯ ಕಷಾಯ ಕುಡಿಯುತ್ತಿದ್ದರೆ ಮನಕ್ಕೆ ಆಹ್ಲಾದವೆನಿಸುತ್ತಿತ್ತು. ಇವೆಲ್ಲಾ ಬಾಲ್ಯ ಕಳೆದು ಯೌವನಕ್ಕೆ ಕಾಲಿಟ್ಟರೂ ಮರೆಯಲಸಾಧ್ಯವಾದ ನೆನಪುಗಳು.
ಆಗ ಈಗಿನಂತೆ ರೋಗ ರುಜಿನಗಳ ಭಯವಿರಲಿಲ್ಲ. ಈಗಿನವರು ಇದಕ್ಕೆ ಕಾಲ ಚೆನ್ನಾಗಿತ್ತು ಅಂತ ಹೇಳ್ತಾರೆ. ಕಾಲ ಚೆನ್ನಾಗಿತ್ತೋ, ಜನ ಚೆನ್ನಾಗಿದ್ದರೋ ಗೊತ್ತಿಲ್ಲ. ಸುರಿಯುವ ಮಳೆಯಾದರೇನು, ಸುಡುವ ಬಿಸಿಲಾದರೇನು, ಕೈಗೆ ಸಿಕ್ಕಿದ್ದನ್ನು ತಿನ್ನುತ್ತಿದ್ದೆವು. ನಿಮ್ಮ ಅಜ್ಜ, ಅಜ್ಜಿಯರಿಗೆ ಕೇಳಿ ನೋಡಿ, ಅವರಿಗೆ ಈಗಿನಂತೆ ಜ್ವರ ಬರೋದು, ಹಾಸಿಗೆ ಹಾಸಿ ಮಲಗೋದು ಗೊತ್ತೇ ಇರಲಿಲ್ಲ. ಮಳೆಗಾಲ ಬಂತಂದ್ರೆ ಹಲಸಿನ ಹಣ್ಣುಗಳ ವಿವಿಧ ಬಗೆಯ ತಿನಸುಗಳು, ಪದಾರ್ಥಗಳು ಎಲ್ಲಾ ಕಡೆ ಸಾಮಾನ್ಯವಾದರೂ ಮಲೆ ನಾಡಿನಲ್ಲಿ ತುಸು ಹೆಚ್ಚೇ ಎನ್ನಬಹುದು. ಪ್ರತೀದಿನ ಬಿಡದೆ ಹಲಸಿನ ಹಣ್ಣಿನ ತಿಂಡಿಯನ್ನು ತಿಂದರೂ ಆರೋಗ್ಯ ಹದಗೆಡುತ್ತಿರಲಿಲ್ಲ. ಮಳೆಗಾಲ ಆರಂಭವಾಗುತ್ತೆ ಅನ್ನೋವಾಗ ಕಾಯಿ ಹಲಸನ್ನು ಕೊಯ್ದು ತಂದು ಮನೆಯಲ್ಲಿ ಬೇರ್ಪಡಿಸಿ ಉಪ್ಪು ಹಾಕಿ ಭರಣಿಯಲ್ಲಿ ಶೇಖರಿಸುತ್ತಿದ್ದರು. ಇದರಿಂದ ಮುಂದಿನ ಮಳೆಗಾಲ ಮುಗಿಯೋ ತನಕ ಪದಾರ್ಥ ಮಾಡಲು ಪರದಾಡಬೇಕಿರಲಿಲ್ಲ. ಮನೆಗೆ ನೆಂಟರು ಬಂದರೆ ಮಕ್ಕಳಾದ ನಮ್ಗೆ ಅದೇನೋ ಖುಷಿ, ಅಮ್ಮ ಯಾವಾಗ ಉಪ್ಪು ನರಿನಲ್ಲಿ ಹಾಕಿಟ್ಟ ಹಲಸಿನ ತೊಳೆಗಳನ್ನು ತೆಗೆಯ್ತಾರೋ ಅಂತ ಕಣ್ಣುಬಾಯ್ಬಿಟ್ಟು ಕಾಯ್ತಾ ಇದ್ದೆವು. ಅದರ ಪದಾರ್ಥದ ಆ ಪರಿಮಳ ಈಗಲೂ ಬಾಯಲ್ಲಿ ನೀರೂರಿಸುತ್ತೆ.
ಮಳೆಗಾಲದಲ್ಲಿ ಯತೇಚ್ಫವಾಗಿ ಸಿಗುವ ಕೆಸುವಿನ ಎಲೆ, ದಂಟು, ವಿವಿಧ ಬಗೆಯ ಸೊಪ್ಪುಗಳು ನಾಲಗೆಗೆ ರುಚಿಯನ್ನು ಒದಗಿಸುವುದರ ಜತೆಗೆ ಔಷಧೀಯ ಗುಣವನ್ನೂ ನಮಗೆ ಒದಗಿಸುತ್ತೆ. ಮಲೆನಾಡಿನ ಗುಡ್ಡಗಳಲ್ಲಿ ಬೇಕಾದಷ್ಟು ಸಿಗುವ ಕಲ್ಲಣಬೆಯ ಪದಾರ್ಥದ ಸವಿಯನ್ನಂತೂ ಸವಿದವರೇ ಬಲ್ಲರು. ಆದ್ರೆ ಈಗ ಕಾಲ ಬದಲಾಗಿದೆ. ಮನುಷ್ಯ ಬದಲಾದಂತೆ ಸಹಜವಾಗಿ ಈ ಹಸಿರ ಪ್ರಕೃತಿಯೂ ಬದಲಾಗಿದೆ. ಪ್ರಕೃತಿಯ ಜತೆಗೆ ಮನುಷ್ಯನಿಗೆ ನಾನಾ ರೀತಿಯ ರೋಗ ಭಯಗಳೂ ಶುರುವಾಗಿದೆ.
`ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ ಅನ್ನೋ ಹಾಗೆ, ನಮಗೊಂದು ಕಾಲ, ಸೊಳ್ಳೆಗಳಿಗೊಂದು ಕಾಲ ಬರಲೇ ಬೇಕು ತಾನೆ? ಮಳೆಗಾಲ ಆರಂಭವಾದಾಗ ಸೊಳ್ಳೆಗಳ ಹಾರಾಟವೂ ಜಾಸ್ತಿಯಾಗಿ ಮನುಷ್ಯನಿಗೆ ಇನ್ನಿಲ್ಲದ ಕಾಟ ಕೊಡಲು ಶುರುವಾಗುತ್ತದೆ. ಮಲೇರಿಯಾ, ಡೆಂಗ್ಯೂನಂತಹ ಮಾರಣಾಂತಿಕ ರೋಗಗಳು ಮಳೆಗಾಲದ ಉಚಿತ ಉಡುಗೊರೆಯೆಂದರೆ ತಪ್ಪಾಗಲಾರದು. ಈಗಂತೂ ಹೊಸದಾದ ಚಿಕೂನ್ ಗುನ್ಯಾ ಕರಾವಳಿ ಪ್ರದೇಶದಲ್ಲಿ ನಿತ್ಯ ಸುದ್ದಿ ಮಾಡುತ್ತಿದೆ. ಆ ಮಟ್ಟಿಗೆ ಹೇಳುವುದಾದರೆ ಮಲೆನಾಡಿನ ನಾವೇ ಧನ್ಯರು ಅನ್ನಬಹುದು. ನಮ್ಮಲ್ಲಿ ಈಗಲೂ ಅದೇ ಹಳೆಯ ಸಂಪ್ರದಾಯಬದ್ಧ ತಿನಿಸುಗಳು ಪದಾರ್ಥಗಳು ದಿನದ ಊಟದಲ್ಲಿ ಇದ್ದೇ ಇರುತ್ತೆ. ನನ್ಗಂತೂ ವಾರಾಂತ್ಯದ ದಿನದಲ್ಲಿ ನಮ್ಮೂರು ಕೈ ಬೀಸಿ ಕರೆಯುತ್ತೆ. ಅಮ್ಮನ ಸ್ವಾದಿಷ್ಟ ತಿನಸು, ಹಲಸಿನ ಪದಾರ್ಥ ಇವೆಲ್ಲಾ ತಿಂದಷ್ಟೂ ಸಾಲದು. ನಮ್ಮೂರು ಬೆಟ್ಟ, ಗುಡ್ಡಗಳ ಹಸಿರು ವನಗಳಿಂದ ಸುತ್ತುವರಿದಿದ್ದರೂ ರೋಗ ಹರಡುವ ಸೊಳ್ಳೆಗಳಿಲ್ಲ.
ಹಾಗಾಗಿ ಮಲೆಗಾಲಕ್ಕೆ ಮಲೆನಾಡೇ ಸರಿ. ಏನಂತೀರಾ?

ಮಳೆ ಬರುವ ಕಾಲಕ್ಕೆ...
ಮಳೆ ಬರುವ ಕಾಲಕ್ಕಾ...


ಮಳೆ ಬಂತೂ... ಮಳೆ ಇದೇನಪ್ಪಾ... ಇನ್ನೂ ಮಳೇನೇ ಬಲರ್ಿಲ್ಲ, ಆವಾಗ್ಲೇ ಮಳೆ ಬಂತು ಅಂತ ಹೇಳ್ತಿದ್ದಾನೆ ಅಂತ ತಿಳ್ಕೋಬೇಡಿ. ಈ `ಮುಂಗಾರು ವಷರ್ಾನುವರ್ಷ ನಿಗದಿತ ಸಮಯಕ್ಕೆ ಬರುತ್ತೆ ಅಂತ ನಾವೇನೋ ತಿಳ್ಕೊಂಡಿರ್ತೇವೆ. ಆದ್ರೆ ಈ ಮುಂಗಾರಿನ ಆರಂಭಕ್ಕೆ ಹೊತ್ತು ಗೊತ್ತು ಅನ್ನೋದೇ ಇರಲ್ಲ. ಕಳೆದ ವರ್ಷ ತುಸು ತಡವಾಗಿ ಆಗಮಿಸಿದ್ದರೆ ಈ ವರ್ಷ ಸದ್ದಿಲ್ಲದೆ ಆಗಮಿಸಿರುತ್ತೆ. ಇನ್ನೇನು ವಾರ ಕಳೆಯುವಷ್ಟರಲ್ಲಿ ಮಳೆಗಾಲ ಆರಂಭವಾಗಿರುತ್ತೆ. ಬಹುಷ: ಈ ಸಲಾನೂ ಮಳೆ ಬೇಗ ಬರುತ್ತೆ ಅಂತ ನೀವುಗಳು ತಿಳ್ಕೊಂಡಿರ್ಬೇಕು ತಾನೇ? ಹುಡ್ಗೀರು ಕೊಡೆ ಹಿಡಿದು ನಡೆಯಲು ಅಭ್ಯಾಸ ಮಾಡ್ಕೋಬೇಕು ತಾನೇ? ಅದಕ್ಕೇ ಹೇಳಿದ್ದು. ನನ್ಗಂತೂ ಯಾಕೋ ಈ ಮಳೆ ಆರಂಭವಾಗುತ್ತೆ ಅಂತ ರೇಡಿಯೋದಲ್ಲಿ ಸುದ್ದಿ ಬಂದ್ರೆ ಸಾಕು, ಭಯ ಶುರುವಾಗುತ್ತೆ. ಅಂದ್ರೆ ನಾನು ಮಳೆಗಾಲದ ವಿರೋಧಿ ಅಂತಾ ತಿಳೀಬೇಡಿ. ಆದ್ರೂ ಮುಂಗಾರು ಅನ್ನೋ ಪದ ಕೇಳಲಷ್ಟೇ ಸೊಗಸು. ಆದ್ರೆ ಈ ಮುಂಗಾರು ಮಳೆ ಅವೇಳೆಯಲ್ಲಿ ಸುರಿದು ಹಾನಿ ಮಾಡೋದು ನೋಡಿದ್ರೆ ಯಾಕಪ್ಪಾ ಬಂತು ಅಂತಾ ಅನ್ನಿಸದಿರದು. ಈ ಸಲಾನೂ ಮುಂಗಾರು ಒಂದು ವಾರಗಳ ಮುಂಚೆ ಕೇರಳಕ್ಕೆ ಆಗಮಿಸುತ್ತೆ ಅಂತ ನಮ್ಮ ಅ(ಹ)ವಮಾನ ಇಲಾಖೆ ಈಗಾಗ್ಲೇ ಹೇಳಿಬಿಟ್ಟಿದೆ. ಹೀಗಾಗಿ ತಿಂಗಳ ಕೊನೆಗೆ ಮಳೆ ಸುರಿಯುವ ಸಾಧ್ಯತೆಯೂ ಇದೆ. ಏನಾದ್ರಾಗಲಿ... ಒಮ್ಮೆ ಮಳೆ ಸುರಿದ್ರೆ ಸಾಕಪ್ಪಾ ದೇವ್ರೇ, ಅಂತ ನಮ್ಮೂರಿನ ರೈತರೆಲ್ಲಾ ಆವಾಗ್ಲೇ ಹರಕೆ ಹೊತ್ತಿದ್ದಾರೆ. ಸುಡುಸುಡು ಬಿಸಿಲ ನಡುವೆ ನೇಗಿಲ ಯೋಗಿ ನಿಡುಸುಯ್ಯುತ್ತಿದ್ರೆ ಅಯ್ಯೋ ಪಾಪ ಅಂತನ್ನಿಸುತ್ತೆ. ಮಳೆ ಬರುವ ಕಾಲಕ್ಕಾ... ಒಳಗ್ಯಾಕ ಕುಂತೀರಿಮೋಡಗಳ ಆಟಾ ನೋಡೋಣ ಅಂತ ನಮ್ಮೂರಿನ ರೈತರು ಇತರರನ್ನು ಕರೆದು ಗದ್ದೆಯ ಕೆಲಸ ಮಾಡಲು ಪೂರ್ವ ಸಿದ್ಧತೆಯಲ್ಲಿ ತೊಡಗಿದ್ದಾರೆ. ಗದ್ದೆಯಲ್ಲಿದ್ದ ಕಸವನ್ನು ತೆಗೆದು ಅದಕ್ಕೆ ಬೆಂಕಿ ಹಾಕಿ ಸುಟ್ಟ ಗೊಬ್ಬರವನ್ನು ಉಳುಮೆಗೆ ಬಳಸಲು ರೈತ ಗದ್ದೆಯಲ್ಲಿ ಪೇರಿಸಿಟ್ಟ ದೃಶ್ಯ ನಮ್ಮಲ್ಲಿ ಮಾಮೂಲು. ಪಟ್ಟಣದಲ್ಲಿ ಮುಂಗಾರು ಅಷ್ಟೊಂದು ವಿಶೇಷತೆಯನ್ನು ಪಡೆಯದೇ ಇದ್ರೂ ಹಳ್ಳಿಗಳಲ್ಲಿ ಮಾತ್ರ ಇದು ರೈತರ ಬಹುದಿನಗಳ ಕನಸಂತೆ ಸುರಿಯುತ್ತೆ. ಹಳ್ಳಿಯ ರೈತನೊಬ್ಬ ಮಳೆ ಆರಂಭವಾಗುವ ಈ ಕಾಲಕ್ಕೆ ಎಷ್ಟೊಂದು ಹರುಷ ಚಿತ್ತನಾಗುತ್ತಾನೆಂದರೆ, ಆತನಿಗೆ ಮಳೆಯನ್ನೋದು ಮಣ್ಣಲ್ಲಿ ಬಂಗಾರ ಬೆಳೆಸುವ ಅಮೃತ ಸಿಂಚನವಿದ್ದಂತೆ. ರೈತ ಖುಷಿಪಟ್ಟರೆ ತಾನೇ ಪಟ್ಟಣಿಗರ ಬಾಳು ಹಸಾನಾಗೋದು..? ನಮ್ಮೂರಲ್ಲಂತೂ ಈ ಮುಂಗಾರಿನ ಹನಿ ಭೂಮಿಗೆ ಸೋಕುತ್ತೆ ಅಂತ ಸಿಡಿಲು, ಮಿಂಚು ರೈತನನ್ನು ಎಚ್ಚರಿಸಿದರೆ ಸಾಕು, ಆತ ತನ್ನ ಎತ್ತು, ಕೋಣವನ್ನು ಗದ್ದೆಗೆ ಹೊಡೆದುಕೊಂಡು ಹೋಗಿ ಸುರಿಯುವ ಬಿರುಮಳೆಯನ್ನು ಲೆಕ್ಕಿಸದೆ ಗದ್ದೆ ಉತ್ತರಷ್ಟೇ ರೈತನಿಗೆ ಸಮಾಧಾನ. ಸಿಡಿಲು-ಮಿಂಚುಗಳ ಸಮ್ಮಿಲನವೇ ದುಡಿಯುವ ರೈತನ ಕಿವಿಗಳಿಗೆ ಇಂಪಾದ ಸಂಗೀತದಂತೆ ಕೇಳಿಸುತ್ತಿರುತ್ತೆ. ತನ್ನದೇ ಗುಂಗಿನಲ್ಲಿ ಓಬೇಲೆ... ಹಾಡಿದನೆಂದರೆ ಮುಗೀತು ಮಳೆಗಾಲ ಆರಂಭವಾದಂತೆಯೇ. ಚಿಕ್ಕ ಮಕ್ಕಳಿರುವಾಗ ನನ್ಗೂ ಈ ಮುಂಗಾರು ಬಂದ್ರೆ ಏನೋ ಖುಷಿ, ಸುರಿಯುವ ಮಳೆಗೆ ನಮ್ಮೂರ ಕೆರೆ ತುಂಬಿ ಶಾಲೆಗೆ ರಜೆ ಎಂದು ತಿಳಿದಿದ್ರೂ ಮಳೆಯಲ್ಲಿ ನೆನೆದು ಶಾಲೆಗೆ ಹೋಗುವ ಆಸೆ. ಬಿರುಬಿಸಿಲಿಗೆ ಶಾಲೆಗೆ ಚಕ್ಕರ್ ಹಾಕಿ ಹೊಟ್ಟೆನೋವೆಂದು ಮಲಗುತ್ತಿದ್ದವನು ಮಳೆಯಲ್ಲಿ ಬೇಗನೇ ಎದ್ದು ಶಾಲೆಗೆ ಹೊರಡುವುದು ನೋಡಿ ಅಮ್ಮನಿಗೆ ಅಚ್ಚರಿ. ನಮ್ಮೂರು ನಿಸರ್ಗದ ಅದ್ಭುತ ಸೌಂದಯರ್ಾನಾ ಸವಿಯಲು, ಅದೂ ಮುಂಗಾರಿನ ಮಜಾ ಕಣ್ತುಂಬಿಕೊಳ್ಳಲು ಹೇಳಿ ಮಾಡಿಸಿದ ಊರು. ಅತ್ತ ಬೆಟ್ಟಗುಡ್ಡಗಳ ಸಾಲು ಮಳೆರಾಯನನ್ನು ಕೈ ಬೀಸಿ ಕರೆದರೆ, ಮುಂಗಾರಿನ ಅಭಿಷೇಕಕ್ಕೆ ಭೂರಮೆಯು ಹಸಿರ ಆಭರಣ ಧರಿಸಿ ಖುಷಿಯಲ್ಲಿ ನಲಿದಾಡಿದ ಅನುಭವ. ಹತ್ತಿರದ ನದಿಯೊಂದು ಮಳೆ ನೀರಿಗೆ ತುಂಬಿ ತುಳುಕುವ ದೃಶ್ಯ ನೋಡಿಯೇ ಸವಿಯಬೇಕು. ಬಾಲ್ಯದಲ್ಲಿ ಮುಂಗಾರಿನ ಆರಂಭದ ದಿನ ನಮ್ಮನ್ನೆಲ್ಲಾ ಅಮ್ಮ ಅಂಗಳದಲ್ಲಿ ಮಳೆ ನೀರಿನಲ್ಲಿ ಸ್ನಾನ ಮಾಡಿಸುತ್ತಿದ್ದ ನೆನಪು ಈಗಲೂ ಹಸಿರಾಗಿದೆ. ಹೊರಗೆ ಧೋ ಎಂದು ಸುರಿವ ಮಳೆಯ ನಡುವೆ ಅಮ್ಮನ ಮಡಿಲಲ್ಲಿ ಕುಳಿತು ಅಜ್ಜಿ ಮಾಡಿ ಡಬ್ಬ ತುಂಬಿಸಿದ್ದ ಮಳೆಗಾಲದ ಸ್ಪೆಷಲ್ ತಿಂಡಿಯನ್ನು ತಿನ್ನುತ್ತಿದ್ರೆ, ಇಂತಹ ಮಳೆಗಾಲ ತಿಂಗಳಿಗೊಮ್ಮೆ ಬರಲಿ ಅಂತನ್ನಿಸ್ತಾ ಇತ್ತು.ಕಾಲ ಬದಲಾದಂತೆ ಈಗ ಹಿಂದಿನ ಉತ್ಸಾಹವಿಲ್ಲ. ಬಿತ್ತಿದ್ದು ಬೆಳೆಯದೆ ರೈತ ಉತ್ಸಾಹ ಕಳೆದುಕೊಂಡಿದ್ದಾನೆ. ಮಳೆ ಬರುತ್ತೆ... ಆದ್ರೆ ಆ ಮಳೆ ಖುಷಿಯನ್ನು ತರಲ್ಲ, ನಾವು ಮಾಡಿದ ಬೆಳೆಯನ್ನೆಲ್ಲಾ ಕೊಚ್ಚಿಕೊಂಡು ಹೋದಾಗ ಬದುಕು ಬಾರ ಆಗದಿರುತ್ತಾ? ಅದೇ ಮುಂಗಾರು ಮಳೆ... ಹಿಂದಿನ ಉತ್ಸಾಹವಿಲ್ಲ, ಗದ್ದೆಯಲ್ಲಿ ಕೋಣಗಳ ಬದಲಿಗೆ ಮೆಷಿನ್ಗಳು ಬಂದಿವೆ. ಓಬೇಲೆಯ ಪದವಿಲ್ಲ, ಟ್ರ್ಯಾಕ್ಟರ್ ಎಂಜಿನ್ನಿನ ಸದ್ದು ದೂರದ ತನಕ ಕಿವಿಗಪ್ಪಳಿಸುತ್ತೆ.ಮುಂದೆ ಬರಲಿರುವ ಮುಂಗಾರು ರೈತನಿಗೆ ಸುಖ, ಸಮೃದ್ಧಿ ತರಲಿ. ಕಂಡ ಕನಸು ನನಸಾಗಿ ಹಸಿರು ಪೈರು ಹೊಲ ಗದ್ದೆ ತುಂಬಲಿ ಎನ್ನುವ ಹಾರೈಕೆಯೊಂದಿಗೆ...

Tuesday, May 18, 2010

ಎ ಮೇರೆ ವತನ್ ಕೆ ಲೋಗೋ...


ಏ ಮೇರೆ ವತನ್ ಕೆ ಲೋಗೋ
ಝರಾ ಆಂಖ್ ಮೆ ಭರ್ಲೋ ಪಾನಿ
ಜೊ ಶಹೀದ್ ಹುಯೇ ಹೈ ಉನ್ಕಿ
ಝರಾ ಯಾದ್ ಕರೋ ಕುಬರ್ಾನಿ
`ದೇಶ ಸೇವೆಯೇ ಈಶ ಸೇವೆ' ಅಂತ ನಂಬಿರೋ ನಮ್ಮ ಗಡಿ ಕಾಯುವ ಹುತಾತ್ಮ ಸೈನಿಕರನ್ನು ಸ್ಮರಿಸುವ ಈ ಹಾಡು ಅದೆಷ್ಟು ಅರ್ಥಪೂರ್ಣ ಅಲ್ವಾ? ಕೇಳ್ತಾ ಇದ್ರೆ ಕೇಳ್ತಾನೇ ಇರ್ಬೇಕು ಅನ್ನೋ ಹಾಗಾಗುತ್ತೆ. ದೇಶಸೇವೆಯ ಪವಿತ್ರ ಕೈಂಕರ್ಯಕ್ಕೆ ತಮ್ಮ ಜೀವವನ್ನೇ ಮುಡಿಪಾಗಿಟ್ಟ ಅದೆಷ್ಟೋ ವೀರಯೋಧರು ನಮ್ಮ ಕಣ್ಣಮುಂದೆ ಮಿಂಚಿ ಮರೆಯಾಗ್ತಾರೆ.
ನಾವು ದಿನನಿತ್ಯದ ಜಂಜಾಟದ ಬದುಕಿನಲಿ ಎಷ್ಟು ಪುರುಸೋತ್ತು ಇಲ್ಲಾಂದ್ರೂ ಊಟ, ತಿಂಡಿ, ನಿದ್ದೆ ಇವನ್ನೆಲ್ಲಾ ಸಮಯಕ್ಕೆ ಸರಿಯಾಗಿ ಮಾಡ್ತೀವಿ. ಆದ್ರೆ ಒಂದರೆಗಳಿಗೆ ನಮ್ಮ ದೇಶದ ಉದ್ದಗಲಕ್ಕೂ ಗಡಿಯಲ್ಲಿ ತನ್ನ ಹೆತ್ತವರು, ಬಂಧು ಬಳಗ, ಸ್ನೇಹಿತರು ಇವರ ನೆನಪಿನಿಂದ ದೂರ ನಿಂತು ದೇಶ ರಕ್ಷಣೆಗಾಗಿ ತನ್ನನ್ನೇ ಮುಡಿಪಾಗಿಟ್ಟ ಆ `ಸೈನಿಕ'ನನ್ನು ನೆನಪಿಸಿಕೊಳ್ಳಿ ನೋಡೋಣ. ಸಾಧ್ಯವೇ ಇಲ್ಲ... ಯಾಕೇಂದ್ರೆ, ಗಡಿಯಲ್ಲಿ ಸೈನಿಕ ಕಾವಲು ಕಾಯೋದನ್ನು ನಾವು ಕಲ್ಪಿಸಿಕೊಳ್ಳಬಹುದೇನೋ, ಆದ್ರೆ ಅವನು ಅಲ್ಲಿ ಯಾವ ಸ್ಥಿತಿಯಲ್ಲಿದ್ದಾನೆ ಅಂತಾ ಊಹಿಸೋಕ್ಕೂ ನಮ್ಮಿಂದಾಗಲ್ಲ. ನಾವು ಮನೆಯ ಬಾಗಿಲನ್ನು ಭದ್ರವಾಗಿ ಮುಚ್ಚಿ ಮಲಗ್ತೀವಿ, ನಮಗೆ ನಮ್ಮ ಮನೆಯೊಳಗಿರೋ ಚಿನ್ನ, ಹಣ, ಒಡವೆ, ವಸ್ತುಗಳು ಎಲ್ಲಿ ಕಳ್ಳರ ಪಾಲಾಗುತ್ತೋ ಅಂತ ಭಯ. ಮನೆ ಮುಂದೆ `ನಾಯಿ ಇದೆ ಎಚ್ಚರಿಕೆ' ಅಂತಾ ದೊಡ್ಡದಾಗಿ ಬೋಡರ್್ ಹಾಕಿರ್ತೀವಿ, ಕಂಪೌಂಡ್ಗೆ ಉದ್ದ ಕೂದಲಿನ ನಾಯಿಯನ್ನು ದೊಡ್ಡ ಸಂಕಲೆಯಲ್ಲಿ ಕಟ್ಟಿರ್ತೀವಿ, ಕಳ್ಳರು ಅಂಗಳಕ್ಕೆ ಬಂದ್ರೆ ತಿಳೀಲಿ ಅಂತ ಅಲಾರಾಂ ವ್ಯವಸ್ಥೆಯನ್ನೂ ಮಾಡಿರ್ತೀವಿ. ಇದೆಲ್ಲಾ ಇದ್ರೂ ನಮ್ಗೆ ಮನೆಯೊಳಗೆ ಕಳ್ಳರು ನುಗ್ಗಿದ್ರೆ ಅಂತ ಭಯ. ಇವೆಲ್ಲಾ ಯಾಕೆ ಇಲ್ಲಿ ಪ್ರಸ್ತಾಪಿಸಿದೆ ಅಂದ್ರೆ ದೇಶವನ್ನು ಶತ್ರುಗಳಿಂದ ಕಾಯೋದು ಅಂದ್ರೆ ನಮ್ಮ ಮನೆಯನ್ನು ಕಾಯುವ ಹಾಗಲ್ಲ ಅಂತ ಹೇಳೋಕೆ. ಅಲ್ಲಿ ಗಡಿಯಲ್ಲಿ ನಿಂತ ಸೈನಿಕ ಕಿಂಚಿತ್ತು ಏಮಾರಿದ್ರೂ ನಮ್ಮ ಮನೆಯನ್ನು ಕಾಯೋ ನಾಯಿ, ಆ ಬೋಡರ್್, ಅಲಾರಾಂ ಇವೆಲ್ಲಾ ವ್ಯರ್ಥ ಅನ್ನೋದು ನಮ್ಗೆ ಮರೆತೇ ಹೋಗಿರುತ್ತೆ.
ಗಡಿ ಕಾಯುವ ಸೈನಿಕ ಎಂದೂ ತನ್ನ ಭವಿಷ್ಯದ ಬಗ್ಗೆ ಚಿಂತಿಸೋದಿಲ್ಲ. ಬದಲಾಗಿ ತನ್ನ ದೇಶ, ತನ್ನ ಜನರು ಅನ್ನೋ ಅಭಿಮಾನದಿಂದ ರಾತ್ರಿ ಹಗಲು ದುಡಿಯ್ತಾನೆ. ನಮ್ಮೂರಿನಲ್ಲಿ ಎರಡು ದಿನ ಶೀತಗಾಳಿ ಬೀಸಿದರೆ, ಚಳಿ ಹೆಚ್ಚಾದರೆ ನಮ್ಗೆ ಶೀತ, ಕೆಮ್ಮು, ಜ್ವರ ಎಲ್ಲಾ ಶುರುವಾಗುತ್ತೆ. ಚಳಿಯ ನಡುಕದಲ್ಲಿ ನಿದ್ದೆ ಹಾರಿ ಹೋಗಿರುತ್ತೆ. ಅದಕ್ಕಾಗಿ ಕಂಬಳಿ ಹೊದ್ದರೂ ನಮಗೆ ನೆಮ್ಮದಿಯಿಲ್ಲ. ಮರುದಿನ ಎದ್ದವರೇ ರಾತ್ರಿಯೆಲ್ಲಾ ಚಳಿಯಿಂದಾಗಿ ನಿದ್ದೇನೇ ಇಲ್ಲ ಅಂತ ತಿರುಗಾ ಮಲಗ್ತೀವಿ. ಗಡಿಯ ಆ ಕೊರೆವ ಚಳಿಯಲ್ಲಿ ಶತ್ರುಗಳಿಂದ ನಮ್ಮನ್ನು ಕಾಪಾಡಲು, ನಡುಗುವ ಕೈಗಳಲ್ಲಿ ಬಂದೂಕು ಹಿಡಿದು ಕಾಯ್ತಾನಲ್ವಾ, ಅವನು ನಿದ್ದೆ ಬಂತು ಅಂತ ಮಲಗಿಬಿಟ್ರೆ, ನಾವು ಶಾಶ್ವತವಾಗಿ ಮಲಗಿಬಿಡಬೇಕಾಗುತ್ತೆ. ಸೈನಿಕ ಅಂದ ಕೂಡಲೇ ಅವನ ಜತೆ ಮಾತಾಡ್ಬೇಕು, ಅವನ ಅನುಭವವನ್ನು ಕೇಳಿ ತಿಳಿಯಬೇಕು ಅಂತ ಮನಸ್ಸು ಹಂಬಲಿಸೋದು ಬಹುಷ: ಆ ಸೈನಿಕನ ಮೇಲಿನ ಗೌರವದಿಂದಲೇ ಇರಬೇಕು.
ನಮ್ಮ ದೇಶವನ್ನು ಆಳುತ್ತಿರುವ ಕುಟಿಲ ರಾಜತಾಂತ್ರಿಕ ವ್ಯವಸ್ಥೆಯಿಂದಾಗಿ ಮೂರಕ್ಷರ ಕಲಿತವರು ಜನನಾಯಕರಾಗಿ ಮೆರೆಯುತ್ತಿದ್ದಾರೆ. ರೌಡಿಗಳು ಎಂ. ಎಲ್ .ಎ. ಗಳಾಗಿ ದೇಶದ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ದಿನನಿತ್ಯ ಲೆಕ್ಕವಿಲ್ಲದಷ್ಟು ಮಂದಿ ಉಗ್ರಗಾಮಿಗಳು ನಮ್ಮ ದೇಶಕ್ಕೆ ಸಡ್ಡು ಹೊಡೆಯಲು ಗಡಿ ರೇಖೆಯುದ್ದಕ್ಕೂ ನುಸುಳಿ ಒಳಬರುತ್ತಿದ್ದಾರೆ. ನಮ್ಮ ಪವಿತ್ರ ಭಾರತ ಭೂಮಿಯಲ್ಲಿ ವಿದ್ವಂಸಕ ಕೃತ್ಯ ನಡೆಸಿ, ನಮ್ಮ ಆಥರ್ಿಕ ಸ್ಥಿರತೆಯನ್ನು ಬುಡಮೇಲು ಮಾಡಲು ಶತ್ರು ರಾಷ್ಟ್ರಗಳು ಪಣತೊಟ್ಟು ನಿಂತಿವೆ. ಇವರೆಲ್ಲರಿಂದ ನಮ್ಮ ದೇಶವನ್ನು ಕಾಯೋದಂದ್ರೆ ಅದು ಸುಲಭದ ಮಾತಲ್ಲ, ಅನನ್ಯ ದೇಶಪ್ರೇಮವನ್ನು ಮೈಗೂಡಿಸಿಕೊಂಡವನಿಂದ ಮಾತ್ರವೇ ಇದು ಸಾಧ್ಯ. ಏನೇ ಇರಲಿ... ನಮ್ಮನ್ನು ಹೆತ್ತ ನಮ್ಮವ್ವನಂತೆಯೇ ನಮ್ಮನ್ನು ಪೊರೆಯುವ ಭಾರತ ಮಾತೆಯೂ ಮಿಗಿಲಲ್ಲವೇ? ತಾಯಿ ಜನ್ಮ ನೀಡುತ್ತಾಳಾದಾರೆ ಭೂಮಿ ತಾಯಿ ನಮಗೆ ಬದುಕಿನ ಎಲ್ಲಾ ಪಾಠವನ್ನು ಕಲಿಸಿಕೊಡುತ್ತಾಳೆ. ನಮ್ಮ ತಾಯಿಯನ್ನು ನಾವು ಯಾವ ರೀತಿ ರಕ್ಷಣೆ ಮಾಡುತ್ತೇವೋ, ಅದಕ್ಕಿಂತ ಹೆಚ್ಚಾಗಿ ಭೂಮಿತಾಯಿಯನ್ನು ಶತ್ರುಗಳಿಂದ ರಕ್ಷಿಸಬೇಕಾದ್ದು ನಮ್ಮ ಕರ್ತವ್ಯ ತಾನೇ?
ದೇಶಸೇವೆಗೆ ಅವನು, ಇವನು ಎನ್ನುವ ಬೇಧಭಾವವಿಲ್ಲ. ದೇಶಕ್ಕೆ ಗಡಿಯಿದೆಯೇ ಹೊರತು ದೇಶಪ್ರೇಮಕ್ಕೆ ಗಡಿಯಿಲ್ಲ. ಯುವಜನತೆ ದೇಶಾಬಿಮಾನದ ಕಿಚ್ಚನ್ನು ಬೆಳೆಸಿಕೊಳ್ಳಬೇಕು. ದೇಶಸೇವೆಗಾಗಿ ಪ್ರಾಣತ್ಯಾಗ ಮಾಡಿದ ಅಜಾದ್, ಭಗತ್ಸಿಂಗ್, ರಾಜ್ಗುರು, ಇವರು ನಮ್ಮ ರೋಲ್ ಮಾಡೆಲ್ ಆಗ್ಬೇಕು. ಪ್ರತಿಯೊಂದು ಮಗುವಿನಲ್ಲೂ ದೇಶಪ್ರೇಮವನ್ನು ಬಡಿದೆಬ್ಬಿಸುವ ಹಿರಿಯರ ಕತೆಗಳ ಮೂಲಕ ಪ್ರೇರಣೆಯನ್ನು ನೀಡ್ಬೇಕು. ಇದೆಲ್ಲಾ ಪ್ರತಿ ಹೆತ್ತವರ ಕರ್ತವ್ಯವಾದಾಗ ಮಡಿಕೇರಿಯ ಹಾಗೆ ನಮ್ಮಲ್ಲೂ ಪ್ರತಿ ಮನೆಗೊಬ್ಬ ಯೋಧ ಜನ್ಮ ತಳೆಯುತ್ತಾನೆ. ಆಗ ಗಡಿ ಕಾಯುವ ಸೈನಿಕನ ಕೆಲಸವೂ ಹಗುರವಾಗುತ್ತದೆ. ಆ ಹೊತ್ತು ನಮ್ಮ ದೇಶದ ಮೇಲೆ ಕಣ್ಣಿಡಲು ಯಾರೂ ಧೈರ್ಯ ತೋರುವುದಿಲ್ಲ.
ದೇಶಸೇವೆಯಲ್ಲಿ ಹುತಾತ್ಮರಾದವರನ್ನು ಸ್ಮರಿಸಲು ಆ ದಿನ, ಈ ದಿನದ ಅಗತ್ಯವಿಲ್ಲ. ಎಲ್ಲೇ ಇರಲಿ, ಹೇಗೇ ಇರಲಿ ಕ್ಷಣಕಾಲ ಸ್ಮರಣೆಗೆ ಬಂದು ಕಣ್ಣಂಚು ತೇವಗೊಂಡರೆ ಅಷ್ಟೇ ಸಾಕು. ಗಡಿ ಕಾಯುವ ಯೋಧನಿಗೆ ಗೌರವದಿ ಸೆಲ್ಯೂಟ್ ಹೊಡೆದರಷ್ಟೇ ಸಾಲದು, ಆತನ ಸಂಕಷ್ಟವನ್ನು ಅಥರ್ೈಸಿ ಆತನಿಗಾಗಿ ಅನುದಿನ ಹಾರೈಸುವ ಮನಸ್ಸಿರಬೇಕು.
ಜೈ ಹಿಂದ್..!

Saturday, May 15, 2010

ತನ್ನು... ಅವಳ ಮಾತೇ ಇಷ್ಟ


ಅಮ್ಮ...ಲವ್ ಯುಅಮ್ಮಾ... ಐ ಲವ್ ಯೂ ಟೂ
ಅಮ್ಮಾ ನನ್ನ ತೋಳಿನಲ್ಲಿ ಕಂದ ನಾನು
ನನ್ನಾ ಸಂಗ ಆಡಲೆಂದು ಬಂದೆ ನಾನು
ಪದ್ಯದ ಸಾಲುಗಳಲ್ಲಿ `ಅಮ್ಮಾ...' ಅನ್ನೋ ಪದವನ್ನು ಕೇಳಿದಾಗ ಹೆತ್ತು, ಹೊತ್ತು, ಸಾಕಿ ಸಲಹಿದ ಅಮ್ಮನನ್ನು ನೆನೆಸಿಕೊಳ್ಳದವರು ಇರಲಿಕ್ಕಿಲ್ಲ. ಅಮ್ಮಾ ಎಂದು ಕೂಗಿದಾಗ ಮನಸ್ಸಿಗಾಗುವ ಸಂತಸ, ಸುಖ ಅಷ್ಟಿಷ್ಟಲ್ಲ. ಅಮ್ಮಾ ಎಂದು ತನ್ನ ಪುಟ್ಟ ಮಗು ಕೂಗಿದಾಗ ಆ ಹೆತ್ತ ಮಾತೆ ತನ್ನೆಲ್ಲಾ ನೋವನ್ನು ಮರೆತು ಓಡೋಡಿ ಹೋಗುತ್ತಾಳಲ್ಲಾ... ಆಗ ಆ ತಾಯಿಗೆ ತನ್ನ ಮಗುವಿಗೇನಾದರೂ ಆಗಿದೆಯೋ? ಎನ್ನುವ ಪ್ರಶ್ನೆಯ ಹೊರತು ಆಕೆಯ ಮನದಲ್ಲಿ ಸ್ವಾರ್ಥದ ಲವಲೇಶವೂ ಇರುವುದಿಲ್ಲ. ಈ ಜಗತ್ತಿನಲ್ಲಿ ನಿಸ್ವಾರ್ಥ ಪ್ರೀತಿಯಂದ್ರೆ ಅದು ತಾಯಿ ಪ್ರೀತಿಯಂತೆ. ಅದಕ್ಕೆ ತಾನೇ ತಾಯಿಯ ಪ್ರೀತಿಯನ್ನು ಇತರೇ ಪ್ರೀತಿಗಿಂತ ವಿಭಿನ್ನವಾಗಿ ನೋಡೋದು. ಈ ಪ್ರೀತಿಗೆ ಸರಿಸಮವಾಗಿ ನಿಲ್ಲೋದು ಈ ಜಗತ್ತಿನಲ್ಲಿ ಬೇರೇನಿದೆ ಹೇಳಿ?
ಮುತ್ತು ಕೊಡೋಳು ಬಂದಾಗ...
ತುತ್ತು ಕೊಟ್ಟೋಳ ಮರೀಬೇಡ
ಅಂತ ಕವಿ ತನ್ನ ಸಾಲಿನಲ್ಲಿ ಹೇಳಿದ್ದರಲ್ಲಿ ಎಷ್ಟೊಂದು ಅರ್ಥವಿದೆಯಲ್ವಾ? ಈಗಿನ ಕಾಲದಲ್ಲಿ ಹೆತ್ತವಳು ಅನ್ನೋ ಪ್ರೀತಿ, ಗೌರವವೇ ತಿಳಿಯದ ಮಕ್ಕಳಿರಬಹುದು. ಮುತ್ತು ಕೊಟ್ಟೋಳು ಬಂದಾಗ ತುತ್ತಿಟ್ಟು ರಮಿಸಿದವಳು ನೆನಪಾಗದಿರೋ ಜನಾ ಇರ್ಬಹುದು. ಆದ್ರೆ ತನ್ನ ಆ ಮಕ್ಕಳಿಗೆ ಕೇಡು ಬಯಸೋ ಅಮ್ಮ ಇರೋಕ್ಕೆ ಸಾಧ್ಯವಿಲ್ಲ. ಕಲಿಯುಗದಲ್ಲಿ ಇದೂ ಕೆಲವೊಮ್ಮೆ ತಿರುಗಾಮುರುಗಾ ಆಗಿರಲು ಸಾಧ್ಯ. ಆದ್ರೆ ಆ ತಾಯಿ ಮನಸ್ಸು ಬದಲಾಗ್ಬೇಕಾದ್ರೆ ಅದಕ್ಕೆ ಬಲವಾದ ಕಾರಣಾನೂ ಇರ್ಬೇಕು ಅನ್ನೋದು ಅಷ್ಟೇ ಸತ್ಯ. ಕೆಟ್ಟ ಮಕ್ಕಳು ಹುಟ್ಟಬಹುದು, ಆದ್ರೆ ಕೆಟ್ಟ ತಾಯಿ ಹುಟ್ಟೋಕೆ ಸಾಧ್ಯವಿಲ್ಲ ಇದು ಲೋಕಪ್ರಸಿದ್ಧ ನಾಣ್ಣುಡಿ. ತಾನು ಹೆತ್ತು, ಹೊತ್ತು ಸಾಕಿ ಸಲಹಿದ ತನ್ನದೇ ಮಕ್ಕಳು ತನ್ನನ್ನು ತಿರಸ್ಕರಿಸಿ ಮುಂದೆ ಸಾಗಿದರೂ ಹೆತ್ತ ತಾಯಿಯ ಮನಸ್ಸು ವಿಚಲಿತಗೊಳ್ಳೋದಿಲ್ಲ, ಅವರೆಲ್ಲೇ ಇರಲಿ, ಚೆನ್ನಾಗಿರಲಿ ಅಂತಾನೇ ಹಾರೈಸುತ್ತೆ. ಈ ಹರಕೆ, ಹಾರೈಕೆ `ಅಮ್ಮ' ಅನ್ನೋ ದೇವರಿಂದಲೇ ಹೊರತು ಬೇರೆ ಯಾರಿಂದಲೂ ಬರೋಕ್ಕೆ ಸಾಧ್ಯವಿಲ್ಲ. ಈ ಕಾರಣಕ್ಕಾಗಿಯೇ ಅಮ್ಮ ಇತರರಿಗಿಂತ ಪ್ರತ್ಯೇಕ ಸ್ಥಾನಮಾನವನ್ನು ನಮ್ಮಲ್ಲಿ ಪಡೆದುಕೊಂಡಿದ್ದಾಳೆ. ಹೌದು ತನ್ನ ಮಗು ಏನೇ ತಪ್ಪು ಮಾಡಿದರೂ ತಾಯಿಯಾದವಳು ಕ್ಷಮಿಸುತ್ತಾಳೆ. `ಕ್ಷಮಯಾ ಧರಿತ್ರಿ' ಅವಳು. ತಾಯಿ ಮನೆಯ ದೇವತೆಯಿದ್ದಂತೆ. ಆಕೆಯಿಂದಾಗಿ ಇಡೀ ಮನೆಯಲ್ಲಿ ಸುಖ, ಸಂತೃಪ್ತಿ ವೃದ್ಧಿಸುತ್ತದೆ. ಮನೆಯಲ್ಲಿ ಯಾರೇ ಇದ್ದರೂ ಅಮ್ಮ ಇರದಿದ್ದರೆ ಆ ಮನೆ ಖಾಲಿ... ಖಾಲಿ...
ಅಮ್ಮ ಅನ್ನೋ ಮಾಂತ್ರಿಕ ಪದದ ಶಕ್ತೀನೇ ಅಂತದ್ದು. ಪ್ರೀತಿಯಿಂದ ಆಕೆಯನ್ನು ಕರೆದರೆ ಸಾಕು, ಆಕೆ ನಮಗೆ ಪ್ರೀತಿಯ ಗಂಗೆಯನ್ನೇ ಹರಿಸುತ್ತಾಳೆ. ತಪ್ಪು ಮಾಡಿದ್ದೇನೆ ಅಂತ ಮಡಿಲಲ್ಲಿ ಮುಖ ಹುದುಗಿಸಿದರೆ ಸಾಕು ತನ್ನ ಮಗುವಿನ ತಪ್ಪು ಏನೇ ಇರಲಿ ಅದು ಗೌಣವಾಗುತ್ತೆ. ಹೆತ್ತ ತಾಯಿಗೆ ಹೆಗ್ಗಣ ಮುದ್ದು ಅನ್ನೋ ಪದಕ್ಕೆ ಅನ್ವಥವೇ ಆಕೆ. ತನ್ನ ಮಗುವಿನ ತಪ್ಪನ್ನು ಆಕೆ ಅಷ್ಟು ಸುಲಭವಾಗಿ ಒಪ್ಪೋ ಅಮ್ಮ ಅನ್ನುವ ಪದ ಅಕ್ಕರೆ, ಪ್ರೀತಿಯ ಧ್ಯೋತಕ. ಅದಕ್ಕೇ ತಾನೇ ನಾವು ನೋವಾದಾಗ, ಕಷ್ಟ ಬಂದರೂ ಮೊದಲಿಗೆ ಅಮ್ಮಾ ಅಂತ ರೋಧಿಸೋದು. ಯಾವ ಮಗುವಾದ್ರೂ ಹುಟ್ಟಿದ ಕೂಡಲೇ ಅಮ್ಮಾ ಅಂತ ಕರೆಯದೆ `ಮಮ್ಮೀ' ಅಂತಾ ಕರೆಯುತ್ತಾ..? ಅವಕ್ಕೆ ಮಮ್ಮಿ, ಪಪ್ಪ ಅಂತ ಅಭ್ಯಾಸ ಮಾಡಿಸೋ ನಾವುಗಳು, ಆ ಮಗುವಿಗೆ ಅಮ್ಮ ಅನ್ನೋ ಪದದ ಮಹತ್ವಾನೇ ತಿಳಿಯದಂತೆ ಮಾಡಿಬಿಡುತ್ತೇವೆ.
ದಿನ ಕಳೆದಂತೆ ಅಮ್ಮ ಅಂದ್ರೆ ಏನು ಅಂತ ತಿಳಿಯದ ಎಲ್. ಕೆಜಿ, ಯು.ಕೆಜಿ ಮಕ್ಕಳು ಹೆತ್ತವಳನ್ನು ಮಮ್ಮಿ ಅಂತ ಕರೆಯೋದು ನೋಡಿದ್ರೆ ಹಿಂಸೆ ಅಂತನ್ನಿಸುತ್ತೆ. ಅಮ್ಮಾ ಅನ್ನೋ ಪದದಲ್ಲಿರೋ ಪ್ರೀತಿ, ಅಕ್ಕರೆ ಈ ಹಾಳು ಇಂಗ್ಲೀಷ್ನಲ್ಲೇನಿದೆಯೋ ದೇವರಿಗೇ ಗೊತ್ತು. ತನ್ನ ಮಗು ಮಮ್ಮೀ ಅಂತಾ ಹೇಳೋಕ್ಕೆ ಕಲಿತರೆ ಅದೇ ಭಾಗ್ಯ ಅಂತ ತಿಳಿಯೋ ಮಮ್ಮಿಗಳು ಇರೋವಾಗ ಅಮ್ಮ ಅಂತ ಕರೆಯೋ ಮಕ್ಕಳಾದ್ರೂ ಎಲ್ಲಿರುತ್ತೆ?
ನಾವು ಪ್ರತಿವರ್ಷ ಪ್ರೀತಿಗೊಂದು ದಿನ, ಸ್ನೇಹಕ್ಕೊಂದು ದಿನ, ಟೀಚರುಗಳಿಗೆ ಒಂದು ದಿನ ಅಂತ ನೆನಪಲ್ಲಿಟ್ಟು ಆಚರಿಸ್ತೇವೆ. ಆದ್ರೆ ಅಮ್ಮನಿಗೂ ಒಂದು ದಿನ ಇದೆ, ಅದನ್ನು ಆಚರಿಸೋದು ಬಿಡಿ, ಅದರ ಬಗ್ಗೆ ತಿಳಿಯದವರೇ ಸಾಕಷ್ಟು ಜನ ಇದಾರೆ.
ಮಕ್ಕಳಿಗೆ ಅಮ್ಮನೇ ದಾರಿದೀಪ. ಆಕೆ ನಡೆದ ಹಾದಿಯನ್ನು ಅನುಸರಿಸಿದ ಮಕ್ಕಳು ಜೀವನದಲ್ಲಿ ಖಂಡಿತಾ ಮುಂದೆ ಬಂದೇ ಬರ್ತಾರೆ. ಮುಂದೆ ಅಮ್ಮನ ಆದರ್ಶ ಗುಣಗಳು ಆ ಮಕ್ಕಳನ್ನು ಎಡವದಂತೆ ಕಾಪಾಡುತ್ತೆ. ಅಮ್ಮನಾಗುವುದು ಮುಖ್ಯವಲ್ಲ. ಆದ್ರೆ ಮಕ್ಕಳಿಗೆ ಒಳ್ಳೆಯ ಅಮ್ಮನಾಗಿ ಅವರ ಬಾಳು ಬೆಳಗಿಸೋದು ಮುಖ್ಯ. ತಪ್ಪಿದಾಗ ತಿದ್ದಿ, ಎಡವಿದಾಗ ಕೈ ಹಿಡಿದು ಮುನ್ನಡೆಸೋ ಅಮ್ಮ ದೇವತೆಗಿತಲೂ ಒಂದು ಹೆಜ್ಜೆ ಮುಂದಿರುತ್ತಾಳೆ. ಒಂದು ಮಾತಿದೆ, ದೇವರಿಗೆ ಭೂಮಿಯೆಲ್ಲೆಡೆ ಹೋಗಲು ಪುರುಸೋತ್ತಿರಲಿಲ್ಲವಂತೆ, ಆಗ ತನ್ನ ಮಕ್ಕಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಅಮ್ಮನನ್ನು ಸೃಷ್ಟಿಸಿದನಂತೆ.
ಇಂದಿನ ಫ್ಯಾಶನ್ ಯುಗದಲ್ಲಿ ಅಮ್ಮ ಅನ್ನೋ ಪ್ರೀತಿ ಬಾಂಧವ್ಯ ಜಸ್ಟ್ ಫ್ರೆಂಡ್ಸ್ ಅನ್ನೋದಕ್ಕೆ ಬಂದು ನಿಂತಿದೆ. ಇದು ಸರಿಯಲ್ಲ. ಅಮ್ಮ ಜಸ್ಟ್ ಫ್ರೆಂಡ್ ಅಲ್ಲ, ಆಕೆ ಬೆಸ್ಟ್ ಫ್ರೆಂಡ್. ಬಾಳಿನುದ್ದಕ್ಕೂ ನಮಗೆ ಕೈ ಹಿಡಿದು ನಡೆಸುವವಳು. ಆಕೆ ಎಲ್ಲಿಯೇ ಇರಲಿ, ಹೇಗೇ ಇರಲಿ. ಆಕೆಯ ನೆನಪು ಸದಾ ಹಸಿರು. ಅಮ್ಮಾ... ಐ ಲವ್ ಯೂ ಟೂ...

Friday, May 14, 2010

Thursday, May 13, 2010

ನೋ ಮೋರ್ ಕಮೆಂಟ್ಸ್ ಪ್ಲೀಸ್...

ಓ ಅವ್ಳಾ... ಕಿವಿಗೊಂದು ಮೊಬೈಲ್ ಅಂಟಿಸ್ಕೊಂಡು ಬಿಟ್ರೆ ಎದುರಲ್ಲಿ ಯಾರು ಬಂದು ಗುದ್ದಿದರೂ ಗೊತ್ತಾಗಲ್ಲ ಅವಳಿಗೆ. ಕಾಲೇಜಿಗೆ ಹೋಗುವಾಗ ಮನೆಯಿಂದ ಬಸ್ ನಿಲ್ದಾಣದ ತನಕ, ಅಲ್ಲಿಂದ ಬಸ್ ಹತ್ತಿ ಕಾಲೇಜ್ನಲ್ಲಿ ಇಳಿಯೋವರೆಗೆ, ಸಂಜೆ ಮರಳಿ ಬಸ್ನಿಂದ ಇಳಿದವಳು ಮನೆ ಕಡೆ ನಡೆಯೋವಾಗ್ಲೂ ಮೊಬೈಲ್ ಕಿವೀಲೇ ನೇತಾಡ್ಬೇಕು. ಅವಳಿಗೆ ಯಾವನೋ ಒಬ್ಬ ಇದ್ದಾನಂತೆ... ಅಲ್ಲಲ್ಲ ಅವಳು ದ್ರೌಪತಿಯ ಥರಾ ನಾಲ್ಕೈದು ಮಂದಿ ಹುಡುಗ್ರ ಜತೆ ಫ್ಲಟರ್್ ಮಾಡ್ತಿರ್ತಾಳೆ ಅಂತೆ. ಮೂರೂ ಬಿಟ್ಟವರಿಗೆ ಯಾರೇನೇ ಹೇಳಿದ್ರೂ ನಾಚಿಕೆ ಎಂಬುದಿರಲ್ಲ. ನನ್ನ ಮಗಳಾಗಿರ್ಬೇಕಾಗಿತ್ತು, ಒದ್ದು ಬುದ್ಧಿ ಕಲಿಸ್ತಿದ್ದೆ. ಆಕೆ ಹಾಗಂತೆ... ಆಕೆ ಹೀಗಂತೆ... ಇಂತಹ ಹಲವಾರು ಮಾತುಗಳನ್ನು ನಮ್ಮ ಸುತ್ತಮುತ್ತ ದಿನಾ ಕೇಳಿರ್ತೀವಿ. ಇದು ನಮ್ಮ ಮನೆಯ ಅಥವಾ ಪಕ್ಕದ ಮನೆಯ ಆಗಷ್ಟೇ ಯೌವನಕ್ಕೆ ಕಾಲಿಟ್ಟ ಹುಡ್ಗಿಗೆ ಅಕ್ಕಪಕ್ಕದ ಜನ ಹೇಳೋ ಮಾತುಗಳು. ಇಂತದ್ದನ್ನೆಲ್ಲಾ ಬೇಜಾನ್ ಕೇಳಿ ನಾವೂ ತಲೆ ಅಲ್ಲಾಡಿಸಿರ್ತೀವಿ. ಆದ್ರೆ ಒಂದು ದಿನನಾದ್ರೂ ಆಕೆಯ ಬಗ್ಗೆ ಕಮೆಂಟ್ ಮಾಡೋಕ್ಕೆ, ಆಕೆಗೆ ಎಲ್ಲಾ ಬಿಟ್ಟವಳೆಂಬ ಸಟರ್ಿಫಿಕೇಟ್ ಕೊಡೋಕ್ಕೆ `ನೀವ್ಯಾರು?' ಅಥವಾ ಅದನ್ನು ಕೇಳಿಕೊಂಡು ಸುಮ್ಮನಿರೋಕ್ಕೆ `ನಾವ್ಯಾರು?' ಅಂತ ಚಿಂತೆ ಮಾಡಿದ್ದೀವಾ?
ಇಲ್ಲಿ ಸಟರ್ಿಫಿಕೇಟ್ ಹೆಣ್ಣು ಮಕ್ಕಳಿಗೆ ಮಾತ್ರ ಸಿಗೋದು, ಅದರಿಂದ ನಾವು ಸೇಫ್ ಎಂದು ಹುಡುಗರು ಭಾವಿಸಬೇಕಾದ್ದಿಲ್ಲ. ಆದ್ರೆ ಪುರುಷ ಪ್ರಧಾನ ಸಮಾಜ ವ್ಯವಸ್ಥೆಯಲ್ಲಿನ ಹೆಂಗಸರೂ ಹೆಚ್ಚಾಗಿ ಹುಡುಗಿಯರತ್ತಲೇ ಬೊಟ್ಟು ಮಾಡಿರುತ್ತಾರೆ ಅನ್ನೋದು ಮಾತ್ರ ನನಿಜ. ಹೆಚ್ಚಾಗಿ ಕಾಲೇಜ್ ಮೆಟ್ಟಿಲು ಹತ್ತಿದ ತಕ್ಷಣ ಅವರನ್ನು ಈ ಕಮೆಂಟ್ಸ್ಗಳು ಬೆನ್ನು ಬೀಳುತ್ತವೆ. ಆಗಷ್ಟೇ ಆಕೆ ಹದಿಹರೆಯಕ್ಕೆ ಕಾಲಿಟ್ಟಿರ್ತಾಳೆ. ಮನೆಯಲ್ಲಿ ಇನ್ನೂ ಪುಟ್ಟ ಮಗು ಎಂದು ಭಾವಿಸಿ ಕೈಗೊಂದು ಮೊಬೈಲು ತೆಗೆಸಿಕೊಟ್ಟು ಕಾಲೇಜಿಗೆ ಕಳುಹಿಸುತ್ತಾರೆ. ಆಕೆ ಮನೆಯಿಂದ ಹೊರಬಂದವಳೇ ಹೊಸ ಪರಿಸರಕ್ಕೆ ಹೊಂದಿಕೊಳ್ಳುವ ಆತುರದಲ್ಲಿ ಕಾಲೇಜಿನ ಬಗ್ಗೆ ಬಣ್ಣ, ಬಣ್ಣದ ಕನಸು ಕಾಣುತ್ತಾ ರಸ್ತೆಗಿಳಿಯುತ್ತಾಳೆ. ರಸ್ತೆಯಲ್ಲಿ ಇದ್ದವರ ಕಣ್ಣುಗಳು ತನ್ನನ್ನೇ ತಿವಿಯುತ್ತಿವೆ ಎಂದು ಭಾಸವಾದರೂ ಭಯಪಡದೆ ನೋಡಿದವರಲ್ಲಿ ನಗು ವಿನಿಮಯ ಮಾಡಿಕೊಳ್ಳುತ್ತಾಳೆ. ರಿಕ್ಷಾ ಚಾಲಕ, ಬಸ್ ಕಂಡಕ್ಟರ್, ಅಂಗಡಿಯವನು... ಹೀಗೆ ಎಲ್ಲರಲ್ಲೂ ನಿಷ್ಕಲ್ಮಶ ನಗು ಮಾತ್ರ. ಇದು ಮುಂದುವರಿಯಿತು ಅಂತ ತಿಳ್ಕೊಳ್ಳಿ. ಆಗ ಬರುತ್ತೆ ಅವಳ ಹಿಂದೆ ಕಮೆಂಟ್ಸ್ಗಳ ಸರಮಾಲೆ. ಅವಳು ಅದರಿಂದ ಪಾರಾಗೋ ದಾರಿ ಕಾಣದೆ ಎಡವಿ ಬಿದ್ದರಂತೂ ಅವಳನ್ನು ಸುತ್ತಿಕೊಳ್ಳುವುದೇ ಡಿ.ಗ್ರೇಡ್ ಸಟರ್ಿಫಿಕೇಟ್ಗಳು. ಅವಳಿಗೆ ಆತನೊಂದಿಗೆ... ಈತನೊಂದಿಗೆ... ಏನೇನೇ ಗುಸುಗುಸು... ಪಿಸುಪಿಸು. ಎಲ್ಲರ ಬಾಯಿ ಮುಚ್ಚಿಸುವಷ್ಟರಲ್ಲಿ ಒಂದೋ ಅವಳು ಈ ಕೆಟ್ಟ ಸಮಾಜಕ್ಕೆ ವಿದಾಯ ಹೇಳಿರ್ತಾಳೆ ಅಥವಾ ಬಸವಳಿದು ಬೆಂಡಾಗಿರುತ್ತಾಳೆ.
ಇದು ಹುಡುಗಿಯರ ಬಗೆಗಿನ ವ್ಯಾಖ್ಯಾನವಾದರೆ ಹುಡುಗರದ್ದು ಇನ್ನೂ ವಿಚಿತ್ರ ಕತೆಗಳು. ಹುಡುಗಿ ಸಂಜೆ ಶಾಲೆ ಬಿಟ್ಟ ನಂತರ ನೇರವಾಗಿ ಮನೆಗೆ ನಡೆಯೋ ಅಭ್ಯಾಸ ಮಾಡಿರ್ತಾಳೆ. ಆದ್ರೆ ಹುಡುಗ ಸಂಜೆ ಶಾಲೆ ಮುಗಿದ ಬಳಿಕ ಒಂದು ಸ್ವಲ್ಪ ಹೊತ್ತು ಆಟವಾಡ್ತಾ ತಡವಾಗಿ ಮನೆಗೆ ಬರ್ತಾನೆ. ಶಾಲೆ ಮುಗಿದು ಕಾಲೇಜಿಗೆ ಸೇರಿದ ಬಳಿಕ ಆತನ ಮನೆ ಹೊರಗಡೆಯ ಗೆಳೆಯರ ಸಂಖ್ಯೆ ಇನ್ನಷ್ಟು ಹೆಚ್ಚಿರುತ್ತದೆ. ಕೈಯಲ್ಲೊಂದು ಮೊಬೈಲ್ ಇದ್ದರಂತೂ ಮೆಸೇಜ್ ಫ್ರೀ ಆಫರ್ ಹಾಕಿಸ್ಕೊಂಡು ಎಲ್ಲೋ ಕುಳಿತು ಕಾಲೇಜ್ ಫ್ರೆಂಡ್ಸ್ಗಳಿಗೆ ಮೆಸೇಜ್ ಮಾಡ್ತಾ ಇದ್ರೆ ರಾತ್ರಿಯಾದದ್ದೇ ತಿಳಿಯುವುದಿಲ್ಲ. ಇದನ್ನು ನೋಡೋ ಸಮಾಜ ಯಾವ ರೀತಿ ಬೇಕಾದ್ರೂ ಅರ್ಥ ಮಾಡ್ಕೋಬಹುದು. ಕುಡುಕನೆಂತಲೂ, ಹುಡ್ಗೀರ ಹಿಂದೆ ಬಿದ್ದಿದ್ದಾನೆ ಅಂತಲೂ ಕಮೆಂಟ್ಸ್ ಮಾಡ್ಬಹುದು. ಇದು ಕಾಲೇಜ್ ಮುಗಿಸಿ ಎಲ್ಲಾದ್ರೂ ಸಣ್ಣಪುಟ್ಟ ಕೆಲಸಕ್ಕೆ ಸೇರಿದ ನಂತರ ಮತ್ತಷ್ಟು ಹೆಚ್ಚುತ್ತೆ. ಆತನ ಬಗ್ಗೆ ಕಾಲಕ್ಕೆ ಅನುಗುಣವಾಗಿ ರೌಡಿ, ಪೊಕರ್ಿ, ಹೆಣ್ಣು ಹುಚ್ಚ... ಹೀಗೆ ನಾನಾ ರೀತಿಯ ಸಟರ್ಿಫಿಕೇಟ್ ಅನ್ನು ಕೊಟ್ಟಿರುತ್ತದೆ ಈ ಸಮಾಜ.
ಈಗಂತೂ ಕಾಲ ಬದಲಾಗಿ ಬಿಟ್ಟಿದೆ. ಬದಲಾವಣೆ ಅನ್ನೋದು ಪ್ರಕೃತಿಯ ಸಹಜ ಗುಣ. ಪ್ರಾಕೃತಿಕ ವೈಚಿತ್ರ್ಯಗಳಲ್ಲಿ ಬದಲಾವಣೆ ಕಂಡು ಬಂದಂತೆ ನಾವೂ, ನೀವೂ ಬದಲಾಗಲೇಬೇಕು. ಆದ್ರೆ ಹೊಸತನದತ್ತ ಹೊರಳುವಾಗ ಸ್ವಲ್ಪವೇ ಎಡವಿದ್ರೂ ಇಂತಹ ಮಾತುಗಳನ್ನು ಕೇಳ್ಬೇಕಾಗುತ್ತೆ. ತುಳುವಿನಲ್ಲಿ ಒಂದು ಗಾದೆ ಮಾತಿದೆ. `ಅಂಡೆದ ಬಾಯಿನಾಂಡಲಾ ಕಟ್ಟೊಲಿ, ಆಂಡ ದೊಂಡೆದ ಬಾಯಿನ್ ಕಟ್ಟರೆ ಸಾಧ್ಯ ಇಜ್ಜಿ' ಅಂತ. ಮನುಷ್ಯರ ಎಲುಬಿಲ್ಲದ ನಾಲಗೆಯೇ ಹಾಗೆ. ಕಂಡದ್ದರ ಬಗ್ಗೆ, ಕೇಳಿದ್ದರ ಬಗ್ಗೆ ಏನಾದ್ರೂ ಕಮೆಂಟ್ಸ್ ಮಾಡದೇ ಇದ್ರೆ ನಾವು ಬದುಕಿದ್ದೂ ಸತ್ತಂತೆ ಎಂದು ಭಾವಿಸುವ ಜನಾನೇ ಇಲ್ಲಿರೋದು. ಹೀಗಾಗಿ ಮಾತು ಆಡಿದರೆ ಹೊಯ್ತು, ಮುತ್ತು ಒಡೆದರೆ ಹೋಯ್ತು ಎನ್ನುವ ಗಾದೆ ಮಾತನ್ನು ಯಾರೂ ಕೇರ್ ಮಾಡಲ್ಲ.
ಈ ಕಮೆಂಟ್ಸ್ ಅನ್ನೋದು ಯಾರನ್ನೂ ಬಿಟ್ಟಿಲ್ಲ. ಆಗಷ್ಟೇ ಅಂಗನವಾಡಿಗೆ ಹೋಗೋ ಪುಟ್ಟ ಹುಡ್ಗನಿಂದ ವಯಸ್ಕರ ತನಕ ಎಲ್ಲರಿಗೂ ಕಮೆಂಟ್ಸ್ ಅನ್ವಯವಾಗುತ್ತೆ. ಏನೇ ಮಾಡ್ಲಿ ಅದಕ್ಕೊಂದು ಕಮೆಂಟ್ಸ್, ಎಲ್ಲಿಗೇ ಹೋಗಲಿ ಅಲ್ಲಿಗೂ ಬೆನ್ನು ಬಿಡದ ಕಮೆಂಟ್ಸ್. ಈ ಕಮೆಂಟ್ಸ್ಗಳ ಸಂಖ್ಯೆ ಹೆಚ್ಚಿದಂತೆ ಅವನು ಅಥವಾ ಅವಳು ಹಾಗೆ ಅಂತ ಪುಕ್ಸಟ್ಟೆ ದೊರೆಯುವ ಸಟರ್ಿಫಿಕೇಟ್. ಇಂತಹ ಕೀಳು ಸಟರ್ಿಫಿಕೇಟ್ಗೆ ಬಲಿಯಾಗಿ ನಾವು ಯಾರೆಂದು ನಮಗೇ ಮರೆತು ಹೋಗುವ ಮುನ್ನ ಈ ಬಗ್ಗೆ ಯೋಚಿಸಬೇಕಾದ್ದು ನಮ್ಮೆಲ್ಲರ ಕರ್ತವ್ಯ ಅನ್ನೋದು ನನ್ನ ಅಭಿಮತ.

ಸಟರ್ಿಫಿಕೇಟ್ ನೀಡೋರ ಮನೋಸ್ಥಿತಿ:
ಇಲ್ಲಿ ಎಲ್ಲರೂ ಕೆಟ್ಟವರು, ಕೀಳು ಅಭಿರುಚಿಯ ಕಮೆಂಟ್ಸ್ ಮಾಡೋರು ಅಂತ ಹೇಳೋಕ್ಕಾಗಲ್ಲ. ಆದ್ರೆ ಕಮೆಂಟ್ಸ್ಗಳ ವಿರುದ್ಧ ತಿರುಗಿ ನಿಂತು ಅವರ್ಯಾಕೆ ನಮ್ಗೆ ಈ ರೀತಿ ಕಮೆಂಟ್ಸ್ ಮಾಡ್ತಾರೆ ಅಂತ ಯೋಚಿಸಿದ್ರೆ ವಾಸ್ತವ ಸಂಗತಿ ತಿಳಿಯುತ್ತೆ. ಮುಖ್ಯವಾಗಿ ಹೇಳುವುದಾದ್ರೆ ಕಮೆಂಟ್ಸ್ ಮಾಡೋರ ಮನೋಸ್ಥಿತಿಯೂ ಸರಿ ಇರೋದಿಲ್ಲ. ಅವಳು ಅಥವಾ ಅವಳು ಹಾಗೆ ಅಂತ ಹೇಳೋರ ಮನೆಯಲ್ಲಿನ ಮಕ್ಕಳು ಅಂತಹ ಏನೋ ಘನಂದಾರಿ ಕೆಲಸ ಮಾಡಿರ್ತಾರೆ. ಅಥವಾ ಅವರಿಗೆ ವೈಯಕ್ತಿಕ ದ್ವೇಷ ಇರುತ್ತೆ. ಇದು ಯಾವುದೂ ಇಲ್ಲ ಅಂತಂದ್ರೆ ಅವರು ಅವಳ ಅಥವಾ ಅವನ ಬಗ್ಗೆ ಇನ್ನೇನನ್ನೋ ಯೋಚಿಸಿರ್ತಾರೆ. ಆದ್ರೆ ಅವರು ಅಂತಹವಳಲ್ಲ ಅಂತ ತಿಳಿದಾಗ ಅವಳಿಗೆ ಏನಾದ್ರೂ ಸರಿ ಕೆಟ್ಟ ಹೆಸರು ತರ್ಬೇಕು ಅಂತ ಹಾತೊರೆಯುತ್ತಾರೆ. ನೀವು ಈ ಕಸಮೆಂಟ್ಸ್ ಮಾಡೋರನ್ನು ಗಮನವಿಟ್ಟು ನೋಡಿ. ಅವರು ಜೀವನದಲ್ಲಿ ಖುಷಿಯಾಗಿರಲ್ಲ ಮತ್ತು ಅವರ ಮಾತಿಗೆ ಏನಾದರೂ ವೈಯಕ್ತಿಕ ಕಾರಣ ಇದ್ದೇ ಇರುತ್ತೆ. ಇದನ್ನೇ ನಾವು ಕೇಳಿ ಸುಮ್ಮನಿರೋದು ಸರೀನಾ?

ಎಚ್ಚರಿಕೆ ಅಗತ್ಯ:
ನಾವೇನೋ ಟೀಕೆ ಅಥವಾ ಕಮೆಂಟ್ಸ್ ಮಾಡೋರು ಮಾಡ್ತಾನೇ ಇರ್ತಾರಪ್ಪ. ಅವರು ಏನು ಹೇಳಿದ್ರೆ ನಮಗೇನು? ಸಿನಿಮಾರಂಗದಲ್ಲಿ ಗುರುತಿಸಿಕೊಂಡ ಮಹಾನ್ ನಟಿಯರ ಬಗ್ಗೆ ಏನೇನೋ ಕಮೆಂಟ್ಸ್ ಮಾಡಲ್ವ? ನಟರುಗಳಿಗೆ ದಿನಕ್ಕೊಬ್ಬ ಹುಡುಗಿಯ ಜತೆ ಸಂಬಂಧ ಇದೆ ಅಂತ ಕೆಲವೊಂದು ಪತ್ರಿಕೆಗಳು ಪುಟಗಟ್ಟಲೆ ಬರೆಯೋಲ್ವ? ಅಷ್ಟೇ ಯಾಕೆ ಇತ್ತೀಚೆಗೆ ಮುಖ್ಯಮಂತ್ರಿ ಯಡ್ಡಿಯವರ ಬಗ್ಗೆ ರೆಡ್ಡಿ ಸೋದರರು ಬಾಯಿಗೆ ಬಂದಂತೆ ಕಮೆಂಟ್ಸ್ ಮಾಡಿಲ್ವಾ? ಅವರ ಮಯರ್ಾದೆ ಏನಾದ್ರೂ ಬೀದಿ ಪಾಲಾಗಿದೆಯಾ? ಅವರು ಕಮೆಂಟ್ಸ್ಗಳಿಗೆ ನೊಂದಿಕೊಂಡಿದ್ದಾರಾ ಅಂತ ತೀಮರ್ಾನಿಸಿ ಬಿಡಬಹುದು. ಆದ್ರೆ ಇದು ದೊಡ್ಡೋರ ವಿಷಯವಾಯ್ತು. ಸಿನಿಮಾ ತಾರೆಯರಿಗೆ, ರಾಜಕೀಯ ನಾಯಕರಿಗೆ ಕಮೆಂಟ್ಸ್ ಅನ್ನೋದು ದೊಡ್ಡ ಸಂಗತಿಯೇ ಅಲ್ಲ. ಅವರು ಅದನ್ನೆಲ್ಲಾ ಹೇಗೋ ಮ್ಯಾನೇಜ್ ಮಾಡ್ತಾರೆ. ಆದ್ರೆ ಇದರಲ್ಲಿ ಪಾಡು ಅನುಭವಿಸೋದು ಮಾತ್ರ ನಮ್ಮ, ನಿಮ್ಮಂತಹ ಸಾಮಾನ್ಯ ಜನರು ಅನ್ನುವುದನ್ನು ತಿಳಿದುಕೊಳ್ಳಬೇಕು. ಕಮೆಂಟ್ಸ್ ಮಾಡಲಿ ಅಂತ ಸುಮ್ಮನಿರುವ ಬದಲು ಒಮ್ಮೆಯಾದರೂ ಅದನ್ನು ಎದುರಿಸುವ ಧೈರ್ಯ ತೋರಬೇಕು. ಇಲ್ಲಾಂದ್ರೆ ಅವರಿಗೂ ಅಭ್ಯಾಸವಾಗಿ ಬಿಡುತ್ತೆ. ನಮಗೂ ಅಭ್ಯಾಸವಾಗುತ್ತೆ.
ಹದಿಹರೆಯಕ್ಕೆ ಕಾಲಿಟ್ಟ ಅಥವಾ ಹದಿಹರೆಯ ಮೀರುವ ವೇಳೆ ಮಕ್ಕಳು ಅದರಲ್ಲೂ ಹೆಣ್ಣು ಮಕ್ಕಳನ್ನು ಈ ಕೆಟ್ಟ ಕಮೆಂಟ್ಸ್ಗಳಿಗೆ ಬಲಿಯಾಗದಂತೆ ಕಾಪಾಡಬೇಕಾದ್ದು ಹೆತ್ತವರ, ಪೋಷಕರ ಕರ್ತವ್ಯ. ಮನೆಯಿಂದ ಶಾಲೆಗೆ, ಶಾಲೆಯಿಂದ ಮನೆಗೆ ಹೋಗುವಾಗ ಸಭ್ಯತೆ ರೂಢಿಸಿಕೊಳ್ಳಬೇಕು. ಸಾರ್ವಜನಿಕ ಸ್ಥಳದಲ್ಲಿನ ವರ್ತನೆ ಹೇಗಿದ್ದರೆ ಚೆನ್ನ ಅನ್ನೋದನ್ನು ಹೆತ್ತವರು ತಿಳಿಸಿ ಕೊಡಬೇಕು. ಎದುರಿಗೆ ಸಿಕ್ಕವರ ಜತೆ ನಗು ವಿನಿಮಯ ಮಾಡುವುದು ತಪ್ಪಲ್ಲ. ಆದ್ರೆ ಗುರುತು ಪರಿಚಯವಿಲ್ಲದವರು ಮಾತಿಗೆಳೆದರೆ ಮುಂದುವರಿಯದಿರುವುದು ಸೂಕ್ತ. ಬಸ್ ಕಂಡಕ್ಟರ್, ರಿಕ್ಷಾ ಚಾಲಕ, ಅಂಗಡಿಯವನು... ಯಾರೇ ಆಗಿರಲಿ. ರಸ್ತೆಯಲ್ಲಿ, ಸಾರ್ವಜನಿಕ ಸ್ಥಳದಲ್ಲಿ ಸಲುಗೆ ಒಳ್ಳೆಯದಲ್ಲ. ಅತಿಯಾದ ಸಲುಗೆ, ಸ್ನೇಹ ನಿಮಗೆ ಬೇರೆಯೇ ಆದ ಸಟರ್ಿಫಿಕೇಟ್ ದೊರಕಿಸುವ ಸಾಧ್ಯತೆಯಿದೆ. ಜೀವ ಮತ್ತು ಜೀವನ ಎರಡೂ ಅಮೂಲ್ಯ. ಹೀಗಾಗಿ ಕಮೆಂಟ್ಸ್ಗೆ ಬಲಿಯಾಗುವುದು ಬೇಡ. ಒಂದು ವೇಳೆ ಅಂಥ ಸಟರ್ಿಫಿಕೇಟ್ ಯಾರಾದ್ರೂ ನೀಡಿದ್ರೆ ಅದನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಿ ಬದಲಾಗಲು ಪ್ರಯತ್ನಿಸೋಣ. ಸಟರ್ಿಫಿಕೇಟ್ ನೀಡೋರಿಗೆ ನನ್ನ ಕಿವಿಮಾತು ಏನೆಂದರೆ, ಇನ್ನು ಮುಂದಾದರೂ ಯೋಚಿಸಿ ಸಟರ್ಿಫಿಕೇಟ್ ನೀಡುವುದೊಳ್ಳೆಯದು. ಯಾಕೇಂದ್ರೆ ಇಂದು ನಿಮ್ಮ ಕಮೆಂಟ್ಸ್ಗಳಿಂದ ಬೇರೆಯವರು ನೊಂದರೆ ನಾಳೆ ಮತ್ತ್ಯಾರದ್ದೋ ಕಮೆಂಟ್ಸ್ಗೆ ನೀವು, ನಿಮ್ಮ ಮನೆಯ ಮಕ್ಕಳೂ ಗುರಿಯಾಗುತ್ತಾರೆ. ಆದ್ದರಿಂದ ನೋ...ಮೋರ್ ಕಮೆಂಟ್ಸ್ ಪ್ಲೀಸ್..!