- `ಕೋಪ' ಅನ್ನೋದು ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಿರುವ, ಮುಂಗಾರಿನ ಸಮಯದಲ್ಲಿ ಎನಿಸ್ಕೊಂಡಾಗ ಬರೋ ಸಿಡಿಲಿನಂತೆ ನಮ್ಗೆ ತೀರಾ ಚಿರಪರಿಚಿತ ಪದ. ಕರಿ ಮೋಡ ಮುಸುಕಿದಂತೆ ನಮ್ಮ ಮನಸ್ಸನ್ನು ಆವರಿಸಿ, ಮೈ ಮನದಲ್ಲಿ ಸಂಚಲನ ಉಂಟು ಮಾಡೋ ಈ ಕೋಪದ ಮಜಾ ಸವಿದವರಿಗಷ್ಟೇ ಗೊತ್ತು. ಕೋಪದ ಮಹಿಮೆ ಬಲ್ಲವರಾರೋ? ಆದ್ರೆ ಈ ಕೋಪ ಅನ್ನೋದು ಯಾಕೆ ಬರುತ್ತೆ ಅಂತ ನಾವ್ಯಾರೂ ಊಹಿಸೋದೇ ಇಲ್ಲ. ಒಂದು ವೇಳೆ ಹಾಗೆ ಊಹಿಸೋದಿಕ್ಕೆ ಕೆಲ ಕಾಲ ತೆಗೆದುಕೊಂಡ್ರೂ ಆಗ ಎಲ್ಲಿಲ್ಲದ ಕೋಪ ಬರುತ್ತೆ. ಹೀಗೆ ಕೋಪವನ್ನು ನಾನಾ ರೀತಿಯಲ್ಲಿ ವಿಂಗಡಣೆ ಮಾಡೋದೇನೋ ಸರಿ. ಆದ್ರೆ ಕೆಲವೊಂದು ಸಲ ಈ ತರದ ಕೋಪಗಳಿಂದ ಲಾಭಕ್ಕಿಂತ ನಷ್ಠವೇ ಹೆಚ್ಚು ಅನ್ನೋದು ಅಷ್ಟೇ ದಿಟ.
ನನ್ಗಂತೂ ಆಗಾಗ ಕೆಟ್ಟ ಕೋಪ ಬರುತ್ತೆ ಸ್ವಾಮೀ... ಈ ರೀತಿ ಕೋಪ ಬಂದಾಗ ನಾನು ಮನುಷ್ಯನಾಗಿರಲ್ಲ ಅಂತ ನಮ್ಮ ಮುಂದೆ ನಿಂತ್ಕೊಂಡು ತನ್ನ ಕೋಪದ ವರ್ಣನೆ ಮಾಡೋರನ್ನ ಬೇಜಾನ್ ನೋಡಿರ್ತೀವಿ. ಆತ ತಾನೊಬ್ಬ ಮಹಾನ್ ವ್ಯಕ್ತಿ ಅನ್ನೋ ತರಾ ಫೋಸ್ ಕೊಡ್ತಾ ನಿಂತಿದ್ರೆ ನಮ್ಗೆ ಇನ್ನಷ್ಟು ಕೋಪ ಬಂದಿರುತ್ತೆ. ಈ ಕೋಪಕ್ಕೆ ಕಾರಣಾನೂ ಬೇಕಿಲ್ಲ, ಅದಕ್ಕೆ ಅದರದ್ದೇ ಆದ ನಿದರ್ಿಷ್ಠ ಸ್ವರೂಪವೂ ಇಲ್ಲ. ಹಾಗಂತ ಈ ಕೋಪಾನ ಹಾಗೆ ಸುಮ್ಮನೆ ಬಿಡೋಕ್ಕಾಗುತ್ತಾ? ಬನ್ನಿ... ಈ ಕೋಪದ ಬಗ್ಗೆ ನಾವಾದ್ರೂ ಸ್ವಲ್ಪ ಹೊತ್ತು ಹರಟೋಣ.
ಸಾಮಾನ್ಯವಾಗಿ ಕೋಪ ಯಾವಾಗ ಬರುತ್ತೆ ಅಂತ ಹೇಳೋಕ್ಕಾಗಲ್ಲ. ಬೆಳಿಗ್ಗೆದ್ದು ಆಫೀಸಿಗೆ ಹೊರಡೋ ತಯಾರಿಯಲ್ಲಿರ್ತೀವಿ. ಆಗ ನಮ್ಗೆ ಬೇಕಿದ್ದ ವಸ್ತುಗಳು ನಮ್ಮಿಂದ ಮರೆಯಾಗಿ ಸಕಾಲದಲ್ಲಿ ಸಿಗೋದಿಲ್ಲ. ಆಗಂತೂ ಕೂಡ್ಲೇ ಕೋಪ ಬಂದ್ಬಿಡುತ್ತೆ. ಅಮ್ಮ ತಿಂಡಿ ಮಾಡಿಟ್ಟು ಹತ್ರ ತಂದು ಕೊಡೋದು ಲೇಟಾದ್ರೆ ಆಗ್ಲೂ ಕೋಪ. ತಿಂಡಿ ತಿಂದು ಅಜರ್ೆಂಟಲ್ಲಿ ವಾಚು, ಪಸರ್ು ಮರೆತು ಬಸ್ಟ್ಯಾಂಡ್ಗೆ ತೆರಳಿದ್ರೆ ಬಸ್ಸು ನಮ್ಮನ್ನೇ ಬಿಟ್ಟು ಹೋಗಿರುತ್ತೆ. ನಾವು ಬಸ್ಸು ಕಾಯ್ಬೇಕೋ? ಬಸ್ಸು ನಮ್ಮನ್ನು ಕಾಯ್ಬೇಕೋ, ತಿಳಿಯದಾಗುತ್ತೆ. ಆಗ ಅನ್ಯಾಯವಾಗಿ ಡ್ರೈವರ್ ಮಹಾಶಯ ನಮ್ಮ ಕೋಪದ ಶಾಪಕ್ಕೆ ಗುರಿಯಾಗ್ಬೇಕಾಗುತ್ತೆ.
ಸಿಕ್ಕಿದ ಬಸ್ನಲ್ಲಿ ಅಷ್ಟಿಷ್ಟು ತೂರ್ಕೊಂಡು ಒಳ ನುಗ್ಗಿದ್ರೆ ಕಂಡಕ್ಟರ್ನ ಹಾಳು ಬೈಗುಳ ಬೇರೆ. 4 ರೂಪಾಯಿ ಟಿಕೆಟ್ಗೆ 10 ರೂ ನೀಡಿದ್ರೆ ಚಿಲ್ಲರೆ ಇಲ್ಲ ಅನ್ನೋದು ನಮ್ಮ ಕಂಡಕ್ಟರ್ಗಳ ಸ್ಟೈಲ್. ಹಿಂದಿನ ಸ್ಟಾಪ್ನಲ್ಲಿ ಯಾರೋ ಟೈಂ ಕೀಪರ್ ಪುಣ್ಯಾತ್ಮ ಬೈದಿರ್ತಾನೆ, ಅದನ್ನು ಆತ ನಮ್ಮ ಮೇಲೆ ಒಂಚೂರೂ ಬಿಡದೆ ಕಾರಿ ಬಿಡ್ತಾನೆ. ಬಸ್ನಲ್ಲಿ ಮೆಲ್ಲಗೆ ಬೈದು ಬಿಟ್ರೆ ಪರ್ವಾಗಿಲ್ಲ, ಅಂತ ಸುಮ್ಮನಿರಬಹುದು. ಆದ್ರೆ ಕಾಲೇಜು ಹುಡ್ಗೀರ ಮುಂದೆ ಬೈದ್ರೆ ನಾವು ಸುಮ್ಮನಿರ್ತೀವಾ? ಆವಾಗ್ಲೆ ನಮ್ಗೆ ಕೆಟ್ಟ ಕೋಪ ಬರೋದು. ಹೀಗೆ ಕೆಲವೊಮ್ಮೆ ನಾವು ದಿನಕ್ಕೆಷ್ಟು ಸಾರಿ ಕೋಪ ಮಾಡ್ಕೋತೀವಿ ಅಂತ ನೆನಪೇ ಆಗಲ್ಲ.
ಆಫೀಸಿಗೆ ಹೋದ್ರೆ ಅಲ್ಲೂ ಕೋಪ. ದಿನಾಲೂ ತಲೆ ತಿನ್ನೋರು ಅವತ್ತೂ ಅದನ್ನೇ ಮುಂದುವರಿಸಿದ್ರೆ ಸಾಕು, ಗಾಯದ ಮೇಲೆ ಬರೆ ಎಳೆದಂತಾಗುತ್ತದೆ. ಮತ್ತೆ ಮನಸ್ಸಿಗೆ ಸಮಾಧಾನ ಹೇಳಿ ಸುಮ್ಮನಾಗೋ ಹೊತ್ತಿಗೆ ಕೋಪವೇನೋ ಇಳಿದಿರುತ್ತೆ. ಆದ್ರೆ ಕೋಪ ಮಾತ್ರ ನಮ್ಮನ್ನು ಆ ದಿನ ಪೂತರ್ಿ ನಕ್ಷತ್ರಿಕನ ಹಾಗೆ ಬೆನ್ನ ಹಿಂದೆ ಬಿದ್ದು ಕಾಡ್ತಾ ಇರುತ್ತೆ. ಹೀಗೆ ಕೋಪ ಮಾಡ್ಕೊಂಡು ರಸ್ತೆ ಮೇಲೆ ನಡೆಯ್ತಾ ಇದ್ರೆ ಎದುರಿಗೆ ಸಿಗೋರೆಲ್ಲಾ ನಮ್ಮ ಕೋಪಕ್ಕೆ ಗುರಿಯಾಗ್ತಾರೆ. ಹೆಚ್ಚಿನವರು ಮನೆಗೆ ಬಂದ ಮೇಲೆ ಹೆಂಡತಿಯ ನಗು ಮುಖ ನೋಡಿಯಾದ್ರೂ ತಣ್ಣಗಾಗ್ತಾರೆ. ಅವರಿಗೆ ಗೊತ್ತಿರುತ್ತೆ, ಬಡವನ ಕೋಪ ದವಡೆಗೆ ಮೂಲ ಅಂತ. ಮನೇಲಿ ಹೆಂಡತಿಯಲ್ಲಿ ಕೋಪಿಸ್ಕೊಂಡ್ರೆ ಈಗ ಸಿಗ್ತಾ ಇರೋ ಉಪಚಾರಾನೂ ಸಿಗೋದಿಲ್ಲ, ನೆಮ್ಮದೀನೂ ಇರಲ್ಲ. ಆಕೆ ಅರೆ ಬೇಯಿಸಿದ ಬೇಯಿಸಿದ ಅಡುಗೆ ತಿಂದು ಮಲಗಿದಾಗ ಕೋಪವೆಲ್ಲಾ ಇಳಿದುಬಿಡುತ್ತೆ. ಅದಕ್ಕೆ ಬುದ್ಧಿವಂತ ಗಂಡಸರು ತಮ್ಮ ಹೆಂಡತಿಯ ಮುಂದೆ ಕೋಪ ಪ್ರದಶರ್ಿಸೋಕ್ಕೆ ಹೋಗಲ್ಲ, ಒಂದು ವೇಳೆ ಹೋದ್ರೂ ಹೆಂಡತಿಯಾದವಳು ಹೇಳ್ತಾಳೆ, `ನೀವೊಮ್ಮೆ ಮನೆಗೆ ಬನ್ನಿ' ಅಂತ. ಇದರರ್ಥ ಮನೇಲಿ ಗ್ರಹಚಾರ ಕಾದಿರುತ್ತೆ ಅಂತ ಬೇರೆ ಹೇಳ್ಬೇಕಾಗಿಲ್ಲ ತಾನೇ? ಹೆಂಡತಿ ಗಂಡನ ಕೋಪಕ್ಕೆ ಉತ್ತರ ನೀಡಲು `ರಾತ್ರಿಯಾಗ್ಲಿ, ಬೆಡ್ರೂಮ್ಗೆ ಬರ್ತಾರಲ್ವಾ... ಆಗ ವಿಚಾರಿಸ್ಕೋತೀನಿ' ಅಂತ ಮನದಲ್ಲೇ ಮಂಡಿಗೆ ತಿನ್ತಾ ಇರ್ತಾಳೆ. ಹೀಗೆ ಕೋಪ ಸವರ್ಾಂತಯರ್ಾಮಿಯಾಗಿ ಅಲ್ಲೂ, ಇಲ್ಲೂ ಎಲ್ಲೆಲ್ಲೂ ಇರುತ್ತೆ. ಇವೆಲ್ಲದಕ್ಕಿಂತ ಭಿನ್ನವಾಗಿರೋದು ಪ್ರೇಮಿಗಳ ಕೋಪ... ಸಾಮನ್ಯವಾಗಿ ಹುಸಿಮುನಿಸಿನಿಂದ ಆರಂಭವಾಗೋ ಇದು ನಂತರ ಬೃಹತ್ತಾಗಿ ಬೆಳೆದು ದೊಡ್ಡ ಜಗಳವೇ ಆಗಿ ಬಿಡುತ್ತೆ. ಆಗ ಕೆಲವರಂತೂ ಏನೇನೋ ಮಾತಾಡೋದುಂಟು ಮಾರಾಯ್ರೇ... ಕೋಪಿಸ್ಕೊಂಡಾಗ ಪ್ರೇಮಿಗಳು ಅನ್ನೋದೇ ಮರೆತು ಶತ್ರುಗಳ ತರಾ ಕಾದಾಟಕ್ಕೆ ಇಳೀತಾರೆ. ಈ ಜಗಳ ಮುಗಿಯಲು ಕಣ್ಣೀರಿನ ಧಾರೆ ಎರಡೂ ಕಡೆಯಿಂದ ಧಾರಾಕಾರವಾಗಿ ಸುರೀಬೇಕು. ಆಗ ಇಬ್ಬರಿಗೂ ಸಮಾಧಾನವಾಗಿ ದಿನದ ಕೋಪಕ್ಕೆ ಫುಲ್ಸ್ಟಾಪ್. ಕೋಪ ಮರೆತು ಕಣ್ಣಂಚು ಒದ್ದೆಯಾಗಿ ಪರಸ್ಪರ ಸ್ಸಾರಿ ಕೇಳೋದಿದೆಯಲ್ವಾ? ಅದರಷ್ಟು ಸುಮಧುರ ಕ್ಷಣ ಮತ್ತೊಂದಿಲ್ಲ ಅನ್ನೋದು ನನ್ನ ಮಾತು. ಆಗ ಪ್ರೇಮಿ ಜತೆಗಿದ್ದರಂತೂ ಹೇಳೋದೇ ಬೇಡ. ಪರಸ್ಪರ ಬಾಹು ಬಂಧನದಲ್ಲಿ ಕರಗಿ ಸಂತೈಸೋ ಆ ಕ್ಷಣ ಅವಿಸ್ಮರಣೀಯ. ಕೋಪ ಬರೋದು ಸವರ್ೆ ಸಾಮಾನ್ಯ. ಆದ್ರೆ ಆ ಕೋಪಾನ ಮರೆತು ಪರಸ್ಪರ ಸಂತೈಸೋದು ಮುಖ್ಯ. ಅದಕ್ಕೆ ನಾನು ಮೊದಲು, ಅವನು ಮೊದಲು ಎನ್ನುವ ಹಠ, ಅಹಮ್ಮಿನ ಲವಲೇಶಾನೂ ಇರ್ಬಾರ್ದು. ಹಾಗಾದಾಗ ಮಾತ್ರ ಕೋಪಿಸ್ಕೊಳ್ಳೋದು ಚೆನ್ನಾಗಿರುತ್ತೆ. ಇಲ್ಲಾಂದ್ರೆ ಕೋಪ ಮತ್ತಷ್ಟು ಜಾಸ್ತಿಯಾಗಿ ಅವಾಂತರವನ್ನೆಬ್ಬಿಸುತ್ತೆ. ಅದಕ್ಕೆ ನನ್ನಾಕೆ ಆಗಾಗ ಹೇಳ್ತಿರ್ತಾಳೆ, ಕೋಪ ಕಡಿಮೆ ಮಾಡ್ಕೊಳ್ಳಿ ಅಂತ. ಆಗ ನನ್ಗೆ ಕೆಟ್ಟ ಕೋಪ ಬರುತ್ತೆ. ಎನಿವೇ... ಕೋಪ ಮರೆತು ಮತ್ತೆ ನಗಿಸುವ ನನ್ನವಳಿಗೆ ಥ್ಯಾಂಕ್ಸ್ ಹೇಳ್ತಾ, ವಂದನೆಗಳು.
Monday, July 26, 2010
ಕೋಪದಲ್ಲಿ ಇರೋ ಸುಖ..!
Subscribe to:
Post Comments (Atom)
No comments:
Post a Comment