ಹದಿಹರೆಯಕ್ಕೆ ಕಾಲಿಟ್ಟ ಪ್ರತೀ ಹೆಣ್ಣು ಅಥವಾ ಗಂಡು ಮಕ್ಕಳು ಕೂಡಾ ತನ್ನ ಸಂಗಾತಿಯ ಆಯ್ಕೆಯಲ್ಲಿ ತೊಡಗುತ್ತಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ನಡೆವ ದಾರಿಯಲ್ಲಿ ಎದುರಿಗೆ ಸಿಕ್ಕ ಹುಡುಗಿ ಚಂದದ ನಗೆ ಬೀರಿದರೆ ಸಾಕು, ಆಕೆ ತನಗೇ ಸೇರಬೇಕು ಎಂದು ಬಯಸೋ ಹುಡುಗರ ಸಂಖ್ಯೆಗೇನೂ ಕಮ್ಮಿಯಿಲ್ಲ. ಸಿಗೋ ಹುಡುಗೀರನ್ನು ಒಂದು ಬಾರಿ ನೋಡಿ, ಆ ಬಳಿಕ ಬಾರಿ-ಬಾರಿ ತಿರುಗಿ ನೋಡಿ ಸಾಗುವ ಹುಡುಗರ ಕಣ್ಣುಗಳು ಆಕೆಯನ್ನು ತನ್ನ ಖಾಸಗಿ ಆಸ್ತಿಯೇನೋ ಎಂಬಂತೆ ಭಾವಿಸಿ ಪ್ರೀತಿ, ಪ್ರೇಮ ಎಂದು ಹಿಂಬಾಲಿಸುವುದೂ ಇದೆ. ನಾನೀಗ ಹೇಳಹೊರಟಿರುವುದು ಹುಡುಗರ ಬಗ್ಗೆಯಲ್ಲ.
ಸದಾ ನಾಚಿಕೆಯ ಬುಗ್ಗೆಯಾಗಿ, ದೂರದಿಂದ ಹುಡುಗರನ್ನು ಕಂಡ ಕೂಡಲೇ ಕೆನ್ನೆ ಕಂಪಡರಿ ಕಣ್ಣಲ್ಲೇ ಮಾತಾಡೋ ಹುಡ್ಗೀರಿಗೂ ಒಬ್ಬೊಬ್ಬ ಹುಡುಗ ಒಂದೊಂದು ಕಾರಣಕ್ಕೆ ಇಷ್ಟವಾಗ್ತಾರೆ. ಆದ್ರೆ ಇವರಲ್ಲಿ ಶೇಕಡಾ ಐದರಷ್ಟೋ, ಹತ್ತರಷ್ಟೋ ಮಂದಿ ಖುಲ್ಲಾಂಖುಲ್ಲಾ ಆಗಿ ತಮ್ಮ ಹುಡ್ಗರನ್ನು ಆರಿಸಿದ್ರೆ, ಇನ್ನುಳಿದ ಹುಡ್ಗೀರು ತಮ್ಮ ಹುಡುಗನನ್ನು ಅಷ್ಟು ಸುಲಭವಾಗಿ ಆರಿಸೋದಿಲ್ಲ. ಆತನ ಗುಣ-ನಡತೆಗಳ ಇಂಚಿಂಚು ಅಳೆದು ತೂಗಿ ಆತ ತನಗೆ ಸಮರ್ಥನೋ, ಅಲ್ವೋ ಅಂತ ನಿರ್ಧರಿಸ್ತಾರೆ. ಇಂತಹ ಹುಡ್ಗೀರು ನಿಜವಾಗಿಯೂ ಕನಸಿನ ಹುಡ್ಗನ ಬಗ್ಗೆ ಇರಿಸುವ ಹೊಂಗನಸುಗಳೇನು ಅನ್ನೋದರ ಬಗ್ಗೆ ಒಂದು ಪುಟ್ಟ ಸಮೀಕ್ಷೆ.(ತಪ್ಪಿದ್ರೆ ಕ್ಷಮೆ ಇರಲಿ... ನಾನೇ ಮಾಡಿದ್ದು...)
ಸಾಮಾನ್ಯವಾಗಿ ಹೆಣ್ಣು ಮಕ್ಕಳು ನಾಲ್ಕು ಗೋಡೆಗಳ ನಡುವೆ ಬಂಧಿಗಳಾಗಿ, ಅಡುಗೆ ಕೋಣೆಯೇ ಪ್ರಪಂಚ ಅನ್ನೋ ಕಾಲವೊಂದಿತ್ತು. ಓರಗೆಯ ಹುಡುಗರೊಂದಿಗೆ ಚಿನ್ನಿದಾಂಡು ಆಟವಾಡುತ್ತಿದ್ದ ತುಂಡು ಲಂಗದ ಹುಡುಗಿ ದೊಡ್ಡವಳಾಗಿದ್ದಾಳೆ ಎನ್ನುವುದನ್ನು ಮನೆಮಂದಿ ನೆನಪಿಸಿದ ನಂತರವಂತೂ ಆಕೆ ಪರ್ಮನೆಂಟಾಗಿ ಮನೆಯೊಳಕ್ಕೆ ಸೇರುತ್ತಾಳೆ. ಆ ಬಳಿಕವೂ ಹುಡುಗ್ರ ಜತೆ ಸೇರಿದರೆ ಆಕೆಯ ಬಗ್ಗೆ ನಾನಾ ಬಗೆಯ ಕಮೆಂಟ್ಸ್ಗಳು ಓಣಿಯುದ್ದಕ್ಕೂ ಹರಿದಾಡುತ್ತೆ. ಅಡುಗೆಯ ಸೌಟು, ತಟ್ಟೆಗಳೇ ಆಟದ ವಸ್ತುಗಳಾಗುತ್ತೆ. ಇಂತಹ ಪರಿಸ್ಥಿತಿ ಹಿಂದಿನ ಕಾಲದ್ದಾದರೆ ಈಗ ಪರಿಸ್ಥಿತಿ ತೀರಾ ಭಿನ್ನ. ಹುಡುಗೀರು ಮೊದಲಿನಂತಿಲ್ಲ. ತೀರಾ ಮಾಡನರ್್ ಅಲ್ಲದ, ಗ್ರಾಮೀಣ ಸೊಗಡನ್ನು ಅಷ್ಟಿಷ್ಟು ಅಲ್ಲಲ್ಲಿ ಉಳಿಸ್ಕೊಂಡಿರೋ ಕರಾವಳಿ ತೀರದ ಹುಡ್ಗೀರು ಈಗ ತುಂಬಾನೇ ಬದಲಾಗಿದ್ದಾರೆ. ಹಾಗೆ ಹೇಳೋಕ್ಕೆ ಹೋದ್ರೆ ಹುಡ್ಗೀರು ಟೋಟಲ್ ಆಗಿ ಬದಲಾಗಿದ್ದಾರೆ. ತಮಗೆ ಬೇಕಾದ ಹೇರ್ಕ್ಲಿಪ್ನಿಂದ ಹಿಡಿದು ಕೈ ಹಿಡಿಯೋ ಗಂಡನವರೆಗೆ ಆಕೆ ಆಯ್ಕೆಯ ಸ್ವಾತಂತ್ರ್ಯ ಹೊಂದಿದ್ದಾಳೆ ಅಂದಮೇಲೆ ಕೇಳಬೇಕೆ? ಆಕೆ ಸ್ಮಾಟರ್್ ಆಗಿರೋ ಕಾರಣದಿಂದ ಹುಡುಗರ ದೃಷ್ಟಿಗೆ ಸಿಲುಕದೆಯೂ ಓಡಾಡಬಲ್ಲಳು. ಇಂತಹ ಹುಡುಗಿ ಬಯಸೋದಾದರೂ ಏನನ್ನು ಅನ್ನೋದನ್ನು ತಿಳಿಯೋಣ.
1. ಸಾಮಾನ್ಯವಾಗಿ ಲವ್ ಅಥವಾ ಬಾಯ್ಫ್ರೆಂಡ್ ಈ ಎರಡು ವಿಭಾಗದಲ್ಲೂ ಹೆಣ್ಣಾದವಳು ತನಗೆ ಇಷ್ಟವಾಗೋ ಹುಡುಗನ ಪರ್ಸನಾಲಿಟಿಯನ್ನು ಮೊದಲು ಗಮನಿಸುತ್ತಾಳೆ. ಉತ್ತಮ ದೇಹದಾಢ್ರ್ಯತೆ ಇರಬೇಕೆಂದು ಹುಡ್ಗೀರು ಆಸೆ ಪಟ್ಟರೂ ಸ್ಥೂಲಕಾಯರನ್ನು ಲೈಕ್ ಮಾಡಲ್ಲ. ಸದೃಢವಾಗಿ, ಆರೋಗ್ಯದಿಂದಿರುವ ಹುಡುಗರು ಬಲು ಬೇಗನೆ ಇಷ್ಟವಾಗೋದ್ರಲ್ಲಿ ಸಂಶಯವಿಲ್ಲ.
2. ಹುಡ್ಗೀರಿಗೆ ಹುಡುಗರ ಕಿರುನಗೆಯ ಶೈಲಿಯೂ ತುಂಬಾನೇ ಇಷ್ಟ. ನೀವೇ ಗಮನಿಸಿ. ಸಭೆ ಅಥವಾ ಸಮಾರಂಭದಲ್ಲಿ ಅಂದವಾಗಿ ನಗುವ ಹುಡ್ಗರನ್ನು ನೋಡಿ, `ಆತ ಎಷ್ಟು ಚೆನ್ನಾಗಿ ನಗುತ್ತಾನೆ ನೋಡೇ ಎಂದು ಹೇಳುತ್ತಾರೆ. ಇದರರ್ಥ ಹುಡುಗರ ಸುಂದರ ನಗು ಹುಡ್ಗೀರನ್ನು ಬಹುಬೇಗನೆ ಮೋಡಿ ಮಾಡಬಲ್ಲದು. ಬಾಲಿವುಡ್ ತಾರೆ ಅಕ್ಷಯ್ ಕುಮಾರ್ನನ್ನು ಅರೆಗಳಿಗೆ ನೆನಪಿಸಿಕೊಳ್ಳಿ, ಆಗ ನಿಮಗೇ ತಿಳಿಯುತ್ತದೆ.
3. ಹುಡುಗ ಅಂದವಾಗಿರಬೇಕಾದ್ದು ನಿಜ. ಬಿಳಿ, ಎಣ್ಣೆಕಪ್ಪು ಬಣ್ಣ ಹೊಂದಿದ್ದರೂ ಮುಖದಲ್ಲಿ ತೇಜಸ್ಸು ತುಂಬಿರಬೇಕೆಂದು ಆಶಿಸುವ ಹುಡುಗಿ, ಚುರುಕಾಗಿ ಕಾಣುವ, ಸದಾ ಕ್ರಿಯಾಶೀಲರಾಗಿ ಕಣ್ಣಲ್ಲೇ ನಗುವ ಹುಡುಗರತ್ತ ಬೇಗ ಆಕಷರ್ಿತರಾಗುತ್ತಾರೆ. ಅದೇ ರೀತಿ ಹುಡುಗ ಪ್ರತಿಭಾವಂತನಾಗಿದ್ದು, ಸಾಮಾನ್ಯ ಜ್ಞಾನವನ್ನು ಹೊಂದಿದ್ದರೆ ಬೇಗನೆ ಆಕಷರ್ಿಸಲ್ಪಡುತ್ತಾನೆ.
4. ಕಪಟವಿಲ್ಲದೆ ನೇರಾನೇರ ಮಾತಾಡುವ ಕಲೆ ಹೊಂದಿದ್ದರೆ ಹುಡುಗ ಬೇಗನೆ ಇಷ್ಟವಾಗುತ್ತಾನೆ. ಮನಸ್ಸಿನಲ್ಲಿ ಏನನ್ನೋ ಇರಿಸಿ, ಬೇರೇನನ್ನೋ ಹೇಳುವ ಹುಡುಗನನ್ನು ಯಾವ ಹುಡುಗಿಯೂ ಕೇರ್ ಮಾಡಲ್ಲ. ನೆಲ ನೋಡದೆ ತಲೆ ಎತ್ತಿ ಮಾತಾಡುವ ಹುಡುಗ ತನ್ನ ಜತೆ ಇರುವಾಗಲಾದರೂ ವಿಧೇಯತೆಯಿಂದ ನಡೆಯಲಿ ಎಂದು ಆಶಿಸೋರೇ ಹೆಚ್ಚು.
5. ಭಯಪಡುವ ಹುಡುಗನನ್ನು ಖಂಡಿತಾ ಹುಡುಗಿ ಮೆಚ್ಚುವುದಿಲ್ಲ. ಏನೇ ಬಂದರೂ ಆತ್ಮವಿಶ್ವಾಸ ಹೊಂದಿದ್ದರೆ ಹುಡುಗ ತನಗೆ ಒಪ್ಪಿಗೆ ಎಂದೇ ಹುಡುಗಿ ಭಾವಿಸುತ್ತಾಳೆ. ಇದು ಆಕೆಯ ಮುಂದಿನ ಬಾಳಿನ ಯೋಚನೆಯನ್ನೂ ಅವಲಂಬಿಸಿರುತ್ತದೆ.
6. ಅಭಿಮಾನ ಎನ್ನುವುದು ಪ್ರೀತಿಯ ಮತ್ತೊಂದು ಮಗ್ಗುಲು. ಹೀಗಾಗಿ ಪ್ರೀತಿ ಅಥವಾ ಸ್ನೇಹದಂತೆಯೇ ತನ್ನನ್ನು ಕಂಡಾಗ ಸೌಂದರ್ಯದ ಬಗ್ಗೆ, ಪ್ರೀತಿಯ ಬಗ್ಗೆ ಕನಿಷ್ಠ ಮೆಚ್ಚುಗೆ, ಅಭಿಮಾನವನ್ನಾದರೂ ಹೊಂದಿರಲಿ ಎಂದೇ ಹುಡ್ಗೀರು ಬಯಸುತ್ತಾರೆ. ತನ್ನ ಹಿತ, ಅಹಿತಗಳನ್ನು ಗಮನಿಸಿ ಕೇರ್ ತೆಗೆದುಕೊಳ್ಳುವ ಹುಡುಗ ಹೆಚ್ಚಿನ ಹುಡುಗಿಯರಿಗೆ ಇಷ್ಟವಾಗುತ್ತಾನೆ.
7. ದಿನನಿತ್ಯದ ಬಿಡುವಿರದ ದುಡಿಮೆಯ ವೇಳೆಯಲ್ಲೂ ತನಗಾಗಿ ಒಂಚೂರು ಟೈಮನ್ನಾದರೂ ತನ್ನ ಹುಡುಗ ಮೀಸಲಿಡಲಿ ಎನ್ನುವುದೇ ಹೆಚ್ಚಿನ ಹುಡ್ಗೀರ ಬೇಡಿಕೆ. ಮಾತು ತಪ್ಪಿ ನಡೆಯುವ, ತನ್ನನ್ನು ಬಿಟ್ಟು ಬೇರೊಬ್ಬಳ ಜತೆ ಸಲುಗೆ ತೋರಿಸುವ ಹುಡುಗರು ಅಷ್ಟಕ್ಕಷ್ಟೆ. ಆದ್ರೆ ಕೆಲವೊಮ್ಮೆ ಟೈಮ್ ಇಲ್ಲ ಎಂಬ ಸಾಮಾನ್ಯ ಸಮಸ್ಯೆಯೇ ಸಂಬಂಧದ ನಡುವೆ ಬಿರುಕು ಮೂಡಿಸಲು ಕಾರಣವಾಗುತ್ತದೆ. ಆತನ ಎಲ್ಲಾ ಗುಣಗಳನ್ನು ಆಕೆ ಮೆಚ್ಚಿ, ಅಡ್ಜಸ್ಟ್ ಆಗಿದ್ದರೂ ಇದೊಂದು ಕಾರಣ ಮಾತ್ರ ಯಾವಾಗಲೂ ಸಹಿಸಿಕೊಳ್ಳುವುದಿಲ್ಲ.
8. ಜವಾಬ್ದಾರಿ ಇರಬೇಕಾದ್ದು ಅತಿಮುಖ್ಯ. ಕುಟುಂಬ, ಮನೆಯಲ್ಲಿ, ಹೋದಲ್ಲಿ, ಬಂದಲ್ಲಿ ಜವಾಬ್ದಾರಿಯನ್ನು ಹೇಗೆ ನಿಭಾಯಿಸುತ್ತಾನೆ ಎನ್ನುವುದರ ಮೇಲೆ ಹುಡ್ಗೀರ ಪ್ರೀತಿ ಅವಲಂಬಿತವಾಗಿರುತ್ತದೆ. ಮನೆಕೆಲಸದಲ್ಲಿ ನೆರವಾಗುವುದು, ತನ್ನನ್ನು ಪ್ರೀತಿಸಿದಂತೆ ತನ್ನ ತಾಯಿ, ತಂದೆಯೊಂದಿಗೆ ಕೂಡಾ ಗೌರವ, ಅಭಿಮಾನದಿಂದ ವ್ಯವಹರಿಸುವ ಹುಡುಗ ಹುಡುಗಿಗೆ ಇಷ್ಟವಾಗುತ್ತಾನೆ.
9. ಹೆಚ್ಚಿನ ಹುಡುಗರು ತಾವು ಹೇಳಬೇಕಾದ್ದನ್ನು ಎಲ್ಲೂ ನಿಲ್ಲಿಸದೆ ಹೇಳಿ ಹುಡುಗಿ ಬಾಯ್ತೆರೆದಾಗ ಮಾತ್ರ ಕಿವಿ ಮುಚ್ಚಿ ತಮ್ಮಷ್ಟಕ್ಕೆ ತಾವಿರುತ್ತಾರೆ. ಇದರಲ್ಲಿ ಹುಡುಗರು ಫೇಲ್ ಆದ್ರೆ ಲವ್ ಲೈಫ್ ಅರ್ಧಕ್ಕೆ ನಿಲ್ಲುತ್ತದೆ. ಕೇಳುವ ಗುಣ ಮುಖ್ಯ. ಆಕೆ ಹೇಳಿದ್ದನ್ನು ಸಮಾಧಾನದಿಂದ ಆಲಿಸಿದರೆ ಆಕೆಗೆ ಅಷ್ಟೇ ಇಷ್ಟವಾಗುತ್ತೆ ಅನ್ನೋದನ್ನು ಮರೆಯಬಾರದು.
10. ಹುಡುಗ ಎಂದರೆ ಜೋರು. ಆದರೆ ತನ್ನ ಜತೆ ಮಾತ್ರ ಆತ ಅನಗತ್ಯ ದರ್ಪ ತೋರುವುದು ಬೇಡ, ಸಾರ್ವಜನಿಕ ಸ್ಥಳಗಳಿಂದ ಹಿಡಿದು ಮನೆಯೊಳಗೆ ಕೂಡಾ ತನ್ನ ಜತೆ ನಯ, ವಿನಯದಿಂದ ನಡೆಯುವ ಹುಡುಗನನ್ನು ಹುಡುಗಿ ಅತಿಯಾಗಿ ಪ್ರೀತಿಸುತ್ತಾಳೆ. ಹುಡುಗ ತನ್ನ ಜನ್ಮತ: ಸ್ವಭಾವ ಬದಿಗಿರಿಸಿ ನವಿರು ಭಾವನೆಗಳಿಂದ ವತರ್ಿಸಿದಲ್ಲಿ ಹುಡುಗಿ ಆತನಿಗೆ ಮನಸೋಲುತ್ತಾಳೆ.
ಈ ಹತ್ತು ಸಿಂಪಲ್ ಸೂತ್ರಗಳು ಯಾವುದಾದ್ರೂ ಹುಡ್ಗಿಯನ್ನು ಪ್ರೀತಿಸ್ಲೇಬೇಕು ಅಂತ ಜಿದ್ದಿಗೆ ಬಿದ್ದಿರೋ ಹುಡುಗರು ಗಮನಿಸಬೇಕಾದ್ದು ಅವಶ್ಯ. ಇವೆಲ್ಲಾ ಗುಣಗಳು ಹುಡ್ಗರಲ್ಲಿ ಇದ್ರೆ ಅವರು ಪ್ರೀತಿಸೋಕ್ಕೂ ಲಾಯಕ್ಕು, ಪ್ರೀತಿ ಪಡೆಯೋಕ್ಕೂ ಲಾಯಕ್ಕು. ಇದರಲ್ಲಿ ಒಂದೆರಡು ಗುಣಗಳು ಮಾತ್ರ ಇದ್ರೆ ಪ್ರಯತ್ನಿಸೋದ್ರಲ್ಲಿ ತಪ್ಪಿಲ್ಲ. ಆದ್ರೆ ಒಮ್ಮೆಗೆ ಸಿಕ್ಕ ಪ್ರೀತಿ ಮತ್ತೆಂದೂ ದೂರವಾಗದು ಅನ್ನೋ ಭ್ರಮೆ ಬೇಡ. ಯಾಕೇಂದ್ರೆ ಪ್ರೀತಿ ಚೇಂಜ್ ಕೇಳುತ್ತೆ. ಕಾಲ ಬದಲಾದಂತೆ ಪ್ರೀತಿಸೋರು ಕೂಡಾ ಬದಲಾಗ್ತಾರೆ. ಪ್ರೀತಿಸಲು ಬೇಕಾಗುವ ಗುಣ, ಲಕ್ಷಣಗಳೂ ಕೂಡಾ ಬದಲಾಗುತ್ತೆ. ಎನಿವೇ... ಭಾವನೆಗಳನ್ನು ಅರಿತುಕೊಳ್ಳೋ ಹುಡುಗ-ಹುಡುಗಿ ಎಲ್ರಿಗೂ ಸಿಗಲಿ. ಆಯ್ಕೆ ಮಾತ್ರ ಜೋಪಾನವಾಗಿರಲಿ.
27 comments:
ಸಮೀಕ್ಷೆ ಜೋರಾಗಿದೆ.....:)
ಪ್ರೀತಿಯ ಸಣ್ಣ ಸಣ್ಣ ಸೂಕ್ಷ್ಮ ಅಂಶಗಳನ್ನು ಅನುಭವಿಸಿ ವಿವರಿಸಿದಂತಿದೆ ಶಶಿ realy Great......Love Guru.....!!!!!!!
Hey Shashi Very beautiful article.......Thumbs up dude:)
Keep up the good work:)...........Some of the points were very close to me:)
Thanks on behalf of all the girls:)
very it is true
sameekshe tumbane chennagide,hudugiyara manassannu tumba hatiradinda balla hagide shashi.......??????
sameekshe tumbane chennagide,hudugiyara manassannu tumba hatiradinda balla hagide shashi.......??????
10 on 10.Good analytical inscription without any bias and arguments. Keep the good work going!!!!!!
ಸಮೀಕ್ಷೆ ಅನ್ನೋಹಾಗಿಲ್ಲ ನಾನಂತೂ ನನ್ನ ಕಣ್ಣಿಗೆ ಒಂದು ಸಂಶೋಧಿತ ಪ್ರಬಂಧ ಎನಿಸ್ತಾ ಇದೆ,,,ಹಹಹಹ್ ಬಹಳ ಶೋಧ ಮಾಡಿದ್ದೀರಾ ಸ್ವಾಮಿ,,,>>>???
@ ಹೆಗ್ಡೆ ಸರ್,,, ಇಂತದ್ದೊಂದು ಸಿಂಪಲ್ ಸಮೀಕ್ಷೆಯಲ್ಲಿ ಇನ್ನೂ 10 ಪಾಯಿಂಟ್ಗಳನ್ನು ಸೇರಿಸಬಹುದಿತ್ತೇನೋ ಅನ್ನಿಸ್ತಿದೆ. ಓದಿ ಮೆಚ್ಚಿರುವುದಕ್ಕೆ ಧನ್ಯವಾದಗಳು... ಪ್ರೀತಿ ಹೀಗೇ ಇರಲಿ...
@ ಭಾಸ್ಕರ್... ಧನ್ಯವಾದ ಆಪ್ತಮಿತ್ರರಿಗೆ,
ಪ್ರೀತಿ ಅಂದರೆ ಹಾಗೆ... ಏನೋ ತುಡಿತ... ಭಾವನೆಗಳ ಮೊರೆತ.... ಮನದ ಮೂಲೆಯಲ್ಲಿ ಬಚ್ಚಿಟ್ಟ ಕನಸುಗಳು ಕೆಲವೊಮ್ಮೆ ಹೀಗೆ ಏನಾದರೂ ಬರೆಯೋಕ್ಕೆ ಪ್ರೇರಣೆ ಒದಗಿಸುತ್ತೆ... ಪ್ರೀತಿಯಲ್ಲಿ ಬೀಳೋ ಮುನ್ನ ಇಂತಹ ಸಣ್ಣ ಸಣ್ಣ ಪಾಯಿಂಟ್ಗಳನ್ನು ಅರಿತ್ಕೊಂಡ್ರೆ ಪ್ರೀತಿ ಅಪ್ಯಾಯಮಾನವಾಗಿರುತ್ತೆ... ಪ್ರೀತಿ ಹೀಗೇ ಇರಲಿ..
ಥ್ಯಾಂಕ್ಸ್ ಸುಗುಣಾ... ನಿಮ್ಮ ಅಕ್ಕರೆ ತುಂಬಿದ ಪ್ರತಿಕ್ರಿಯೆಗೆ.. ಇದರಲ್ಲಿರೋ ಕೆಲವೊಂದು ಪಾಯಿಂಟ್ಗಳನ್ನು ನಿಮಗೆ ತುಂಬಾ ಹತ್ತಿರವಾಗಿದೆ ಅಂದರೆ ಇದಕ್ಕಿಂತ ಬೇರೆ ಬಹುಮಾನ ನನಗೆ ಬೇಡ... ತುಂಬಾ ತುಂಬಾ ಧನ್ಯವಾದ...
@ ರಮ್ಯಾ... ತುಂಬಾ ಧನ್ಯವಾದ ಪ್ರೀತಿಯ ಬಗೆಗಿನ ಬರಹವನ್ನು ಪ್ರೀತಿಯಿಂದ ಓದಿ ಪ್ರೀತಿಯಿಂದ ಪ್ರತಿಕ್ರಿಯಿಸಿದ್ದಕ್ಕೆ... ಮುಂದೆಯೂ ನಿಮ್ಮ ಪ್ರತಿಕ್ರಿಯೆ ಹೀಗೇ ಬರುತ್ತಿರಲಿ.
@ಪ್ರಿಯಾ... ಪ್ರೀತಿಯ ವಂದನೆಗಳು ನಿಮಗೆ ಪ್ರತಿಕ್ರಿಯೆ ನೀಡಿದ್ದಕ್ಕೆ... ಹಾಗೇನೂ ಇಲ್ಲ ಪ್ರಿಯಾ ಅವೇ... ಹುಡುಗಿಯರ ಮನಸ್ಸು ಮತ್ತು ಮೀನಿನ ಹೆಜ್ಜೆ ಗುರುತು ಅರಿಯೋದು ತುಂಬಾ ಕಷ್ಟ ಅಂತಾರೆ. ಹೀಗಿರುವಾಗ ಅವರಿಂದ ದೂರ ನಿಂತು ಸಮೀಕ್ಷೆ ಮಾಡಿದ್ದೇನೆ ಅಂತ ಅನ್ನಿಸ್ತಿದೆ... ಕಾಯ್ತಾ ಇರಿ, ಮುಂದೆ ಹುಡುಗರ ಬಗ್ಗೆಯೂ ಇಂತದ್ದೇ ಸಮೀಕ್ಷೆ ತಯಾರು ಮಾಡ್ತಿದ್ದೀನಿ... ಪ್ರೀತಿ ಇರಲಿ.
@ preethi... thank u very much for ur lovely coments...
@ ಜಲನಯನ, ತುಂಬಾ ಧನ್ಯವಾದ ನಿಮಗೆ, ನನ್ನ ಪುಟ್ಟ ಬರಹವನ್ನು ಸಂಶೋಧನಾ ಪ್ರಬಂಧಕ್ಕೆ ಹೋಲಿಸಿದ್ದಕ್ಕೆ... ಮುಂದೆಯೂ ನಿಮ್ಮ ಪ್ರತಿಕ್ರಿಯೆಯ ಅಕ್ಕರೆ, ಕಾಳಜಿ ನನ್ನ ಜೊತೆಗಿರಲಿ..
Smikshe chennagide.Shashi nivu prithi mado hudugi ishtella helidda???
ರಿಸರ್ಚ್ ಏನೋ ಬಾರಿ ಜೋರಾಗಿದೆ... ಎಲ್ಲೊ ಕೆಲವೆಡೆಯಾದರೂ ಅನುಭವ ಕೆಲಸ ಮಾಡಿರಬಹುದಾ ಎಂಬ ಅನುಮಾನ ಕಾಡುತಿದೆ..ಹುಡುಗೀರ ಆಲೋಚನೆಗಳು, ಗುರಿಗಳು. ನಿರೀಕ್ಷೆಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿದೆ..ಈ ಮಾರ್ಪಾಡುಗಳಿಗೆ ತಮ್ಮನ್ನು ತಾವೇ ಒಡ್ಡಿಕ್ಕೊಂಡು - ಒಗ್ಗಿಕ್ಕೊಳ್ಳುವಲ್ಲಿ ಹುಡುಗರಿಗೆ ಸಹಾಯ ಮಾಡಿದ್ದಿರಾ ...thank you...!
ಇನ್ನು ಪಾಯಿಂಟ್ಸ್ ಗಳ ಕುರಿತು..
ಶಶೀ..* ಸಾಮಾನ್ಯವಾಗಿ ಸ್ಥೂಲಕಾಯರೋ, ಸದ್ರಡರೋ ಎಂಬ ಬೇಧಗಳಿಲ್ಲ ಹುಡುಗಿಯರಿಗೆ ಹೈಟು,ವೈಟು ಸುಮರಾಗಿದ್ದು ಮಾನಸಿಕವಾಗಿ ಗಟ್ಟಿತನ ಇದ್ದರಷ್ಟೇ ಸಾಕು..
*ಕಿರುನಗೆ..., ಇದಂತೂ most important..!! ಆತ ದೊಡ್ಡದಾಗಿ- ಕೆಟ್ಟದಾಗಿ ನಕ್ಕರೂ ಪರವಾಗಿಲ್ಲ ಆ ಕುರಿತು ನಮ್ಮ ಕಂಪ್ಲೇಂಟ್ ಇಲ್ಲಾ..! ಎಂತಹ ಜನಜಂಗುಳಿಯಲ್ಲೂ. ಅವನ ಕಿರುನಗೆ "ನನ್ನೋಬ್ಬಳನ್ನು". ಸೆಳೆದರೆ ಸಾಕು ಎಂದೇ ಬಯಸುವುದು ಹುಡುಗಿಯರು..
"ನಿನ್ನ ಕಿರುನಗೆಯೊಂದು ಸಾಲದೇ ಓ ನಲ್ಲ ಈ ಬಾಳು ಬೆಳಕಾಗಲು..."
ಭಾವಗೀತೆ ಗೊತ್ತಲ್ಲ..?
*ನನಗಾಗಿ ಅವನ್ನಲ್ಲಿ ಟೈಮ್ ಬೇಕು...ಇದು ಮಹತ್ತರ ಬೇಡಿಕೆ ಹುಡುಗಿರದ್ದು....
"ಅಭಿಮಾನ ಎನ್ನುವುದು ಪ್ರೀತಿಯ ಮತ್ತೊಂದು ಮಗ್ಗುಲು..." ನಿಜವಾದ ಮಾತು..
Each n every points superb..
ನಮ್ಮೊಳಗಿನ ಭಾವಗಳು ನಿಮ್ಮಲ್ಲಿ ಅಕ್ಷರವಾಗಿದೆ..
ಚೆನ್ನಾಗಿದೆ...
ಪ್ರೀತಿಯ ಶಶಿಯವರೆ...
ಅನುಭವ.. ಓದು ಎಲ್ಲಸೇರಿಸಿ ಬರೆದ ಹಾಗಿದೆ..
ನನ್ನ ಕಾಲೇಜಿನ ದಿನಗಳು ನೆನಪಾದವು...
ನೀವು ಬರೆದುದು ಓದಿ ತಲೆದೂಗಿದೆ...
ಜೈ ಹೋ... !
ಅಬ್ಬಬ್ಬ ಏನ್ರೀ ಸಾರ್ ಇದು ಸಂಶೋದನಾ ಲೇಖನ .ಹೌದು ಪ್ರೀತಿಸುವ ಹುಡುಗರಿಗೆ ಒಂದು ದಾರಿ ದೀಪ. ಇನ್ನೂ ಕೆಲವು ವಿಚಾರ ಸೇರ್ಸಿ ಸ್ವಾಮೀ. ಜೀವನದಲ್ಲಿ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಹುಡುಗರನ್ನು ಹುಡುಗಿಯರು ಹೆಚ್ಚು ಇಷ್ಟಾ ಪಡ್ತಾರೆ., ೨] ಅಪ್ಪನ/ಅಮ್ಮನ ಕಾಸಿನಲ್ಲಿ ಶೋಕಿಮಾಡುವ ಹುಡುಗರನ್ನು ಪ್ರೀತಿಸುವುದಿಲ್ಲ ಇಂತಹ ವಿಚಾರಗಳನ್ನು ಸಹ ಹೇಳಿ ನಮ್ಮ ಹುಡುಗರು ಸಾಧನೆ ಮಾಡಲು ಪ್ರೇರೇಪಿಸಿ ಸಾರ್. ಲೇಖನ ಚೆನ್ನಾಗಿದೆ.
ಬಹಳ ಒಳ್ಳೆಯ ಮಾಹಿತೆ ಕಲೆ ಹಾಕಿದ್ದೀರ, ಅನುಭವದ ಮಾತು ಅನಿಸುತ್ತೆ
ಲೇಖನ ಚೆನ್ನಾಗಿದೆ ಶಶಿಯವರೇ.... "ಕನ್ಯಾ ವರಯತೇ ರೂಪಂ" ಎಂದು ನಮ್ಮ ಹಿರಿಯರು ಹೇಳಿರುವುದನ್ನು ನೀವು ಒಂದನೇ ಪಾಯಿಂಟ್ ನಲ್ಲಿ ತೋರಿಸಿರುವಿರಿ.... ಏಳ್ನೇ ಪಾಯಿಂಟು ಇಷ್ಟವಾಯಿತು... ಎಂಟ್ನೇ ಪಾಯಿಂಟ್ ನಲ್ಲಿ ಹುಡುಗೀರು ಮಾತ್ರವಲ್ಲ ಹುಡುಗರೂ ಸಹಾ ಕಡ್ಡಾಯವಾಗಿ ಬಯಸುವರು... ಏನಂತೀರಿ..??
@ ನವ್ಯಾ...
ಹಾಗೇನೂ ಇಲ್ಲ... ನನ್ಗೆ ಇದನ್ನು ಯಾರೂ ಹೇಳಿಕೊಟ್ಟಿಲ್ಲ ಅಂತಾನೇ ತಿಳೀಬಹುದು. ಏನೋ ಇಷ್ಟು ವರ್ಷಗಳಿಂದ ಹುಡಗೀರ ಮನೋಸ್ಥಿತಿ ಹೇಗಿರಬಹುದು ಅಂತ ಸಿಂಪಲ್ ಆಗಿ ಸ್ಟಡಿ ಮಾಡಿದಾಗ ಈ ಮೇಲಿನ ಕೆಲವು ಅಂಶಗಳು ಗೋಚರಿಸಿದ್ದು... ಇವುಗಳಲ್ಲಿ ಕೆಲವಾದ್ರೂ ಸರಿಯಿದೆ ಅಂತ ನಿಮ್ಗೆ ಅನ್ನಿಸಿದ್ರೆ ನಾನೇ ಧನ್ಯ...
@ ಸುಷ್ಮಾ...
ನಾನು ಕಾಯ್ತಾ ಇದ್ದೆ ನಿಮ್ಮ ಪ್ರತಿಕ್ರಿಯೆಗಾಗಿ... ತಡವಾಗಿಯಾದರೂ ತುಂಬಾ ಸುಂದರ ಕಮೆಂಟ್ಸ್ ಮಾಡಿದ್ದೀರಿ ನೀವು... ವಾವ್.. ನಿಮ್ಮ ಪ್ರತಿಯೊಂದು ಸಾಲುಗಳೂ ಸೂಪರ್... ಸಿಕ್ಕಾಪಟ್ಟೆ ಇಷ್ಟಪಟ್ಟೆ.
ಸುಷೀ... ನಾನು ಬರೆದಿರೋ 10 ಸಿಂಪಲ್ ಪಾಯಿಂಟ್ಗಳು ನಿಮ್ಗೆ ಅಷ್ಟೊಂದು ಸರಿ ಎನಿಸಿದ್ರೆ ಸಾಕು, ನನ್ನ ಶ್ರಮ ಸಾರ್ಥಕ. ಹೇ.,.. ಮತ್ತೆ ಇದನ್ನು ಅನುಭವ ಅಂತ ತಿಳೀಬೇಕಿಲ್ಲ.. ಯಾಕೇಂದ್ರೆ ನಾನು ಪ್ರೀತಿ-ಸ್ನೇಹಕ್ಕಾಗಿ ಹುಡಗೀರ ಹಿಂದೆ ಬಿದ್ದು ಕಾಡಿ-ಬೇಡಿ-ಸತಾಯಿಸೋನಲ್ಲ... ನಾನು ಡೀಸೆಂಟ್ ಹುಡುಗ ಕಣ್ರೀ...(ತಮಾಷೆಗೆ...) ಆದ್ರೆ ಹಿಂದಿನಿಂದಲೂ ಹುಡುಗೀರ ಬಗ್ಗೆ ತುಂಬಾ ವಿಚಿತ್ರ ಭಾವನೆ, ಕಲ್ಪನೆ... ಒಟ್ಟಾರೆ ಹುಡುಗಿ ಅರ್ಥವಾಗದ ಪದಕೋಶ,,, ವಣರ್ಿಸಲಾಗದ ಭಾವನೆಗಳ ಕಣಜ ಅಂತ ವಾದಿಸೋನು ನಾನು... ಎನಿವೇ...ನಿಮ್ಮ ಪ್ರೋತ್ಸಾಹ, ಪ್ರೀತಿ, ಅಕ್ಕರೆ, ಕಾಳಜಿ... ಇದೇ ರೀತಿ ಇರಲಿ...ಸದಾ ನನ್ನೊಂದಿಗೆ,.
@ ಪ್ರಕಾಶ್ ಸರ್,
ತುಂಬಾ ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ, ಪ್ರೀತಿ ತುಂಬಿದ ಪ್ರೋತ್ಸಾಹ ಹೀಗೇ ಇರಲಿ.
@ ನಿಮ್ಮೊಳಗೊಬ್ಬ,
ಆತ್ಮೀಯರೇ, ಹುಡಿಗೀರು ಇಷ್ಟಪಡುವಂತೆ ಮಾಡಲು ಹುಡುಗರು ಸಾಧನೆ ಮಾಡಿದರೆ ತುಂಬಾ ಸಂತೋಷ. ಈ ಮಾತು ನಿಜ ಅಂತ ಬೆನ್ನು ತಟ್ಟಿದ್ದಕ್ಕೆ ಥ್ಯಾಂಕ್ಸ್... ಸಾಧನೆಯ ಹಾದಿಯಲ್ಲಿ ಸಾಗೋರಿಗೆ ಎಷ್ಟು ಮಂದಿ ಹುಡುಗೀರು ಬೇಕಾದ್ರೂ ಇಷ್ಟಪಡ್ತಾರೆ.. ಇದಕ್ಕೆ ಚಲನಚಿತ್ರ ನಟರ ಹಿಂದೆ-ಮುಂದೆ ಹುಡುಗೀರ ದಂಡೇ ಇರುವುದು ಉದಾಹರಣೆ ಅಲ್ವಾ ಸರ್...? ಮತ್ತೊಮ್ಮೆ ಧನ್ಯವಾದ..!
@ ಸಂದೀಪ್ ಕೆ.ಬಿ. ಗುರುಪ್ರಸಾದ್ ಶೃಂಗೇರಿ...
ಧನ್ಯವಾದಗಳು ಸರ್.. ನಿಮ್ಮ ಕಮೆಂಟ್ಸ್ಗಳಿಗೆ... ಮುಂದೆಯೂ ನನ್ನ ಬ್ಲಾಗ್ ಓದಿ ಪ್ರೋತ್ಸಾಹಿಸುವಿರಾಗಿ ನಂಬಿದ್ದೇನೆ...ಪ್ರೀತಿ ಇರಲಿ.
enri shashi nim abhipraya eno chanagide. hage..... ANUBHAVA idda hagide alla
Post a Comment