ಸ್ನೇಹದ ಕಡಲಲ್ಲೀ... ನೆನಪಿನ ದೋಣಿಯಲೀ...
ಪಯಣಿಗ ನಾನಮ್ಮಾ...
ಪ್ರೀತಿಯ ತೀರವ ಸೇರುವುದೊಂದೇ ಬಾಳಿನ ಗುರಿಯಮ್ಮಾ...
ಈ ಸ್ನೇಹ, ಗೆಳೆತನ ಇದರ ಬಗ್ಗೆ ಎಲ್ರಿಗೂ ತಿಳಿದಿರುತ್ತೆ ಬಿಡಿ. ಹಾಗೇನೇ ಪ್ರೀತಿ, ಒಲುಮೆ ಇವನ್ನು ನಾವು ನಮ್ಮ ಲೈಫಲ್ಲಿ ಅನುಭವಿಸದೇ ಇದ್ರೂ, ಇದರ ಬಗ್ಗೆ ತಿಳಿದಿರ್ತೀವಿ, ಎಲ್ಲೋ ಒಂದು ಕಡೆ ಓದಿರ್ತೀವಿ. ಇದರ ಬಗ್ಗೆ ಎಷ್ಟು ತಿಳಿದ್ರೂ ಕೆಲವೊಮ್ಮೆ ನಾವು ನಮ್ಮ ಲೈಫಲ್ಲಿ ಸ್ನೇಹಕ್ಕೂ-ಪ್ರೀತಿಗೂ ನಡುವಿನ ವ್ಯತ್ಯಾಸಾನಾ ಗುತರ್ಿಸೋದ್ರಲ್ಲಿ ಎಡವಿರ್ತೀವಿ. ಸ್ನೇಹಕ್ಕೂ-ಪ್ರೀತಿಗೂ ಅಜಗಜಾಂತರ ವ್ಯತ್ಯಾಸವಿದ್ರೂ ಹೀಗೇಕಾಗುತ್ತೆ ಅಂತ ತಿಳಿಯಲ್ಲ. ಇದು ಸ್ನೇಹಾನಾ..? ಇದು ಪ್ರೀತೀನಾ..? ಅಂತಾ ತಿಳೀದೇ ಮುಂದುವರಿದ್ರೆ ಮುಂದೆ ಕಷ್ಟಗಳ ಸರಮಾಲೆಯೇ ಎದುರಾಗೋ ಸಾಧ್ಯತೆಯಂತೂ ಇದ್ದೇ ಇರುತ್ತೆ.
ಘಟನೆ-1 ಮೊಬೈಲಿಗೆ ಯಾರ್ದೋ ಮಿಸ್ಕಾಲ್ ಬರುತ್ತೆ. ಹೊಸ ನಂಬರ್. ರಾತ್ರಿ ಹಗಲು ಆ ನಂಬರ್ನಂದ ಬಿಡುವಿಲ್ಲದೆ ಮಿಸ್ಡ್ ಕಾಲ್ಗಳು. ಯಾರಪ್ಪಾ... ಇವ್ರು ಅಂದ್ಕೊಂಡು ಅತ್ತ ಕಡೆ ಕಾಲ್ ಮಾಡಿದ್ರೆ ಅದು ಯಾವುದೋ ಹೆಣ್ಣಿನ ದನಿ. ಮಿಸ್ಡ್ಕಾಲ್ನಲ್ಲಿ ಶುರುವಾದ ಈ ಮೊಬೈಲ್ ಸ್ನೇಹ ಕೆಲವೇ ದಿನ ಕಳೆಯೋದ್ರೊಳಗೆ ಆಳವಾಗಿ ಬೇರೂರಿರುತ್ತೆ. ಅತ್ತ ಕಡೆಯ ಹೆಣ್ಣು-ಇತ್ತ ಕಡೆಯ ಗಂಡು ಇಬ್ಬರೂ ಸ್ನೇಹದ ಕಡಲಲ್ಲಿ ಮಿಂದು ರಾತ್ರಿ-ಹಗಲೆನ್ನದೆ ಏನೇನೋ ಮಾತಾಡ್ತಾರೆ. ಒಬ್ಬರಿಗೊಬ್ಬರ ಪರಿಚಯವೇ ಇಲ್ಲದಿದ್ರೂ ಸ್ನೇಹ ಗಾಢವಾಗುತ್ತಾ ಹೋಗುತ್ತೆ. ಕೊನೆಗೊಂದು ದಿನ ಆ ಘಳಿಗೆ ಬಂದೇ ಬರುತ್ತೆ. ಅವತ್ತು ಯಾರೋ ಒಬ್ರು ಸ್ನೇಹಾನಾ ಪ್ರೀತಿಯಾಗಿ ಪಡೆಯಲು ಹಾತೊರೆಯ್ತಾರೆ. ಆದ್ರೆ ಇಂತಹ ಸ್ನೇಹಿತರಲ್ಲಿ ಕೇವಲ ಮೋಜಿಗಾಗಿ ಅರೆ ಕ್ಷಣ ಮಾತ್ರ ಪ್ರೀತಿಸ್ತೀನಿ ಅನ್ನಬಹುದು. ಆದ್ರೆ ಅದೇ ಶಾಶ್ವತ ವಾಗಿರೋದಿಕ್ಕೆ ಸಾಧ್ಯಾನಾ? ಅಂತೂ ಇಂತೂ... ಪ್ರೀತಿ ಬಂತು, ಅಂತ ಹಾಡಿ ಕುಣಿದ್ರೆ ಆ ಪ್ರೀತಿ ಕೆಲವೇ ದಿನಗಳಲ್ಲಿ ಮರೆಯಾಗಿರುತ್ತೆ.
ಘಟನೆ-2: ಇದ್ದಕಿಂದ್ದಂತೆ ಒಬ್ಬಳು ಹುಡುಗಿಯ ಮೊಬೈಲಿಗೆ ಯಾವುದೋ ಒಂದು ಹೊಸ ನಂಬರಿನಿಂದ ಮೆಸೇಜ್ ಬರುತ್ತೆ. ಇದು ಮುಂದುವರಿದಾಗ ಹುಡುಗಿ ಮಾತಾಡ್ತಾಳೆ. ಆತನೂ ಮಾತಾಡ್ತಾನೆ. ಮುಂದೆ ಇವರಿಬ್ಬರ ಮೊಬೈಲಿಂದ ಬೇಕಾದಷ್ಟು ಮೆಸೇಜ್ಗಳು ರವಾನೆಯಾಗುತ್ತೆ. ಅಷ್ಟರಲ್ಲಿ ಅರವರಿಬ್ರೂ ಲವ್ವಲ್ಲಿ ಬಿದ್ದಿರ್ತಾರೆ. ಇಲ್ಲೂ ಅವರಿಬ್ಬರೂ ಒಬ್ಬರನ್ನೊಬ್ಬರು ಸರಿಯಾಗಿ ನೋಡಿರಲ್ಲ, ಎದುರಾಗಿ ಮಾತಾಡಿರಲ್ಲ. ಆದ್ರೂ ಅದು ಪ್ರೀತಿ ಅಂತ ತಿಳ್ಕೊಂಡು ಮುಂದುವರಿಯ್ತಾರೆ.
ಹೀಗೆ ಈ ಮೇಲಿನ ಎರಡು ಸ್ಯಾಂಪಲ್ಲಲ್ಲಿ ಪರಸ್ಪರ ಗುರುತು ಪರಿಚಯವಿಲ್ಲದ ಎರಡು ಜೀವಗಳು ಸ್ನೇಹಕ್ಕೆ ಸಿಕ್ಕಿ ಹಾಕ್ಕೊಳ್ಳುತ್ತೆ. ಇಲ್ಲಿ ಸಿಕ್ಕಿ ಹಾಕ್ಕಿಕೊಳ್ಳುವಾಗ `ಐ ಲವ್ ಯು' ಅನ್ನೋವಾಗ ಮುಂದೇನಾಗುತ್ತೆ ಅನ್ನೋದೇ ತಿಳಿದಿರಲ್ಲ. ಹಾಗಾದ್ರೆ ನೋಡದೇ ಇದ್ರೂ ಪ್ರೀತಿ ಹುಟ್ಟುತ್ತಾ..? ತುಂಬಾ ವಿಚಿತ್ರ ಅನ್ನಿಸುತ್ತೆ ಅಲ್ವಾ? ಇದು ವಿಚಿತ್ರವಾದರೂ ಸತ್ಯ. ಬಹಳ ವರ್ಷಗಳ ಹಿಂದೆ ಹಿಂದಿಯಲ್ಲಿ ಬಿಡುಗಡೆಗೊಂಡಿದ್ದ ಯಶಸ್ವಿ ಚಿತ್ರ `ಸಿಫರ್್ ತುಮ್' ಕನ್ನಡದಲ್ಲಿ `ಯಾರೇ ನೀನು ಚೆಲುವೆ' ಆಯಿತು. ಅದರ ಕಥಾವಸ್ತುವೂ ಇದೇ ಆಗಿತ್ತು. ಅಚಾನಕ್ಕಾಗಿ ಭೇಟಿಯಾಗುವ ಗಂಡು-ಹೆಣ್ಣು ಫೋನ್ ಮುಖಾಂತರ ಸ್ನೇಹಿತರಾಗಿ, ಪ್ರೀತಿಯ ಬಲೆಯಲ್ಲಿ ಬಿದ್ದು ಕೊನೆಗೆ ಆ ಪ್ರೀತಿಯನ್ನು ಪಡೆಯಲು ಪಡುವ ಕಷ್ಟವನ್ನು ನಿದರ್ೆಶಕರು ಸೊಗಸಾಗಿ ನರೂಪಿಸಿದ್ದಾರೆ. ಹೀಗಾಗಿ ಆ ಚಿತ್ರ ಶತದಿನೋತ್ಸವ ಕಂಡಿತು. ಈ ವಿಷಯ ಯಾಕೆ ಹೇಳಿದ್ದೆಂದರೆ, ನೋಡದೆ ಪ್ರೀತಿಸುವ ಕಥಾ ಹಂದರ ನಮಲ್ಲಿ ಅದೆಷ್ಟೋ ಬಂದು ಹೋಗಿದೆ. ಇದು ಪ್ರೀತಿಯಲ್ಲ ಅಂತ ಬುದ್ಧಿಯಿರೋರು ಹೇಳಬಹುದು. ಹದಿಹರೆಯದ ಮಾನಸಿಕ ಸಮಸ್ಯೆ ಅಂತನ್ನಲೂಬಹುದು, ಮನಸ್ಸಿನ ತುಮುಲ ಅಂತಂದ್ರೂ ಓ.ಕೆ. ಆದ್ರೂ ಇಲ್ಲೂ ಒಂದು ಅಪ್ಪಟ ಸ್ನೇಹವಿರುತ್ತೆ. ತಾಜಾತನದಿಂದ ನಳನಳಿಸೋ ಹೂವಿನ ತರಾ ಸ್ನೇಹದ ಸುಗಂಧ ಎಲ್ಲೆಡೆಗೂ ವ್ಯಾಪಿಸಿರುತ್ತೆ.
ನೋಡದೆ ಸ್ನೇಹ ಹುಟ್ಟುತ್ತೆ. ಅದನ್ನು ಹಾಗೇ ಬಿಟ್ಟು ಅದಕ್ಕೆ ನೀರೆರೆದರೆ ಅದು ಬೆಳೆದು ಪ್ರೀತಿಯಾಗುತ್ತೆ. ಆದ್ರೆ ಆ ಸ್ನೇಹವನ್ನು ಸರಿಯಾಗಿ ಗುತರ್ಿಸಿ, ಅಥರ್ೈಸಬೇಕಾದ್ದು ನಮ್ಮ ಕರ್ತವ್ಯ. ಕೆಲವ್ರು ಯಾವುದೋ ಒತ್ತಡದಲ್ಲಿ ಬಿದ್ದು ಪ್ರೀತಿಸ್ತಾರೆ. ಸ್ನೇಹಾನ ಪ್ರೀತಿಯೆಂದು ತಿಳಿದು ಮೋಸದ ಬಲೆಗೆ ಬೀಳ್ತಾರೆ. ಪ್ರೀತಿಸ್ತೀನಿ ಅಂತಂದು ಎಲ್ಲವನ್ನೂ ದೋಚಿ ಪರಾರಿಯಾಗೋರೂ ನಮ್ಮಲ್ಲಿ ಬೇಕಾದಷ್ಟು ಜನ ಇದ್ದಾರೆ. ಹೀಗಾಗಿ ಪ್ರೀತಿ ಹೆಸರಲ್ಲಿ ಇದಕ್ಕೆಲ್ಲಾ ಆಸ್ಪದ ಕೊಡಬಾರದು ತಾನೇ?
ಸ್ನೇಹಕ್ಕೆ ಯಾವುದೇ ಬೇಧವಿಲ್ಲ ನಿಜ. ಜಾತಿ-ಮತ ಬೇಧ ತೋರದೆ ಎಲ್ಲೆಲ್ಲೂ ತುಂಬಿರೋದು ಅಂತಂದ್ರೆ ಈ ಸ್ನೇಹ ಮಾತ್ರ. ನಿಜವಾದ ಸ್ನೇಹಕ್ಕೆ ಮುಖದರ್ಶನದ ಅಗತ್ಯವಿರಲ್ಲ. ಯಾರಿಗ್ಗೊತ್ತು, ನಾಳೆ ನಮ್ಮ ಮುಖದರ್ಶನವಾದ ಕೂಡಲೇ ಅವ್ರಿಗೆ ನಾವು ಬೇಡ ಅನ್ನಿಸೋಕ್ಕೂ ಸಾಧ್ಯವಿದೆ. ಆದ್ದರಿಂದ ಸ್ನೇಹ ಸ್ನೇಹವಾಗೇ ಇರಲಿ. ನಿರ್ಮಲ, ನಿಷ್ಕಲ್ಮಶ ಸ್ನೇಹಾನ ಪ್ರೀತಿಯೆಂದು ತಪ್ಪಾಗಿ ಭಾವಿಸಿದ್ರೆ ನಾಳೆ ನಾವು ಆ ಸ್ನೇಹಾನ ಕಳ್ಕೋಬಹುದು. ನೋಡದೆ ಹುಟ್ಟೋ ಸ್ನೇಹ ಚಿರಕಾಲದ ತನಕ ಶಾಶ್ವತವಾಗಿರಲಿ. ಅದಕ್ಕೆ ಪ್ರೀತಿಯ ಲೇಪನ ಬೇಡ ಅನ್ನುವುದು ನನ್ನ ಅಭಿಮತ. ಒಂದು ವೇಳೆ ಅದೇ ಪ್ರೀತಿಯಾಗಿ ನಮ್ಮ ಮುನ್ನಡೆಸುತ್ತದೆಯಾದ್ರೆ ಅದು ನಿಜಕ್ಕೂ ಸಂತಸದ ಮಾತೇ ಸರಿ. ಗುರುತು ಪರಿಚಯವಿಲ್ಲದೆ ಮಿಸ್ಡ್ ಕಾಲ್, ಮೆಸೇಜ್ ಮೂಲಕ ಪರಿಚಯವಾದ ಅದೆಷ್ಟೋ ಸ್ನೇಹಿತರಿಗೆ ಪ್ರೀತಿ ತುಂಬಿದ ನಮಸ್ಕಾರಗಳು.
3 comments:
ಸ್ನೇಹನಾ...?ಪ್ರೀತಿನಾ....? ಪ್ರಶ್ನೆ ಸುಲಭ...ಉತ್ತರ ಮಾತ್ರ..., ಅಬ್ಬಾ..!! ಅನಿಸಿಬಿಡುತ್ತದೆ... ಮನಸ್ಸುಗಳ ನುಡುವೆ ಉಂಟಾದ ಗೊಂದಲಗಳು, ಗೋಜಲು ಗೊಜಲದ ನಿರ್ದಾರಗಳು, ವಿಪರೀತ ಎನಿಸುವಂಥ ಮಾನಸಿಕ ಸ್ಥಿತಿ ಸ್ನೇಹದಿಂದ ಪ್ರೇಮಕ್ಕೆ ಮಾರ್ಪಡಿಸುವುದು ಸುಳ್ಳಲ್ಲ.... ಅದೇನೇ ಇದ್ದರು ಸ್ನೇಹ ಸ್ನೇಹವಾಗಿ ಇದ್ದರಷ್ಟೇ ಚೆನ್ನ..ಅದಕ್ಕೆ ಪ್ರೀತಿ ಪ್ರೇಮಗಳೆಂಬ ಬಣ್ಣ ಬಳಿಯುವುದು ಬೇಡ..ಮತ್ತು ಮುಖ್ಯವಾಗಿ ಇಂತಹ ಸ್ನೇಹಗಳಲ್ಲಿ ಇನ್ನೊಂದು ಮನಸ್ಸಿನ ಭಾವನೆಗಳ ಜೊತೆ ಚೆಲ್ಲಾಟವಾಡುವ ತಿಕ್ಕಲುತನ ಇರಬಾರದಷ್ಟೇ..ಆಗ ನಂಬಿಕೆಗೂ ಒಂದು ಅರ್ಥ ಬರುತ್ತದೆ...
sundara vivarane
olleya baraha
ಧನ್ಯವಾದ ಸುಶ್ಮಾ, ಸಾಗರದಾಚೆಯ ಇಂಚರ ಅವರಿಗೆ...
ಸುಶ್ಮಾ... ನೀವು ಬರೆದಿರೋ ಸಾಲುಗಳು ತುಂಬಾನೇ ಮುದ್ದಾಗಿವೆ. ನಿಜಕ್ಕೂ ಸ್ನೇಹ-ಪ್ರೀತಿಯ ಆಯ್ಕೆಯಲ್ಲಿ ಹೆಚ್ಚಿನವರು ಎಡವುತ್ತಾರೆ. ಎಡವಬಾರದು ಅಂದರೂ ಕೆಲವೊಮ್ಮೆ ಮನಸ್ಸು ಎಡವಿ ಬಿದ್ದಿರುತ್ತದೆ, ಈ ವೇಳೆ ಸ್ವಲ್ಪವೇ ಎಚ್ಚರ ತಪ್ಪಿದರೂ ಮನಸ್ಸು ಅಲ್ಲೋಲ-ಕಲ್ಲೋಲವಾಗುತ್ತದೆ. ಇಲ್ಲಿ ಯಾರ ತಪ್ಪು ಎನ್ನುವುದೇ ಅರ್ಥವಾಗದೇ ಇದ್ದರೂ ಸ್ನೇಹ ತನ್ನ ಮೌಲ್ಯವನ್ನು ಮಾತ್ರ ಕಳೆದುಕೊಳ್ಳುತ್ತದೆ.
Post a Comment