




ದಕ್ಷಿಣ ಚಿರಾಪುಂಜಿ ಎಂದೇ ಕರೆಯಲ್ಪಡುವ ಆಗುಂಬೆಯ ಭೇಟಿ ನನ್ನ ಜೀವನದ ಮರೆಯಲಾಗದ ಕ್ಷಣಗಳಲ್ಲಿ ಒಂದು ಎಂದೇ ಭಾವಿಸುತ್ತೇನೆ. ಕೊರೆವ ಚಳಿಗಾಲದಲ್ಲಿ ಹಿಮದಿಂದ ಮಿಂದು ಮೇಲೆದ್ದು ನಿಂತಂತೆ ಗೋಚರಿಸುವ ಆಗುಂಬೆ ಎನ್ನುವ ಮಲೆನಾಡಿನ ಪುಟ್ಟ ಊರು ಅದೆಷ್ಟೋ ಸುಂದರ ಸ್ಥಳಗಳನ್ನು ತನ್ನೊಡಲಿನಲ್ಲಿ ತುಂಬಿಕೊಂಡಿದೆ. ದೂರದರ್ಶನದ ಪ್ರಸಿದ್ಧ ಧಾರಾವಾಹಿ `ಮಾಲ್ಗುಡಿ ಡೇಸ್, ಚಿತ್ರೀಕರಣಗೊಂಡ ದೊಡ್ಡಮನೆ, ಲಾಲೆ ಬೀದಿ ಇಲ್ಲಿಯೇ ಪಕ್ಕದಲ್ಲಿದೆ. ಆಗುಂಬೆಯ ದಟ್ಟವಾದ ಕಾಡಿನಲ್ಲಿ ಅವಿತಿರುವ ಒನಕೆ ಅಬ್ಬಿ ಜಲಧಾರೆಯ ಟ್ರೆಕ್ ಅನುಭವ ಸವಿಯಲು ಆಗುಂಬೆಯ ನೆಲಕ್ಕೊಮ್ಮೆ ಕಾಲೂರಲೇಬೇಕು. ಕಾಡುಪ್ರಾಣಿಗಳ ಸದ್ದು, ಕಾಲಿಟ್ಟಷ್ಟು ಮುತ್ತಿಕೊಳ್ಳುವ ಇಂಬಳಗಳ ಸ್ವಾಗತ ಎಲ್ಲವನ್ನೂ ನೆನೆಸಿಕೊಂಡರೆ ಸಾಕು, ಚಳಿಯಲ್ಲೂ ಮೈ ಬೆವರುತ್ತದೆ...(ಈ ಬಗ್ಗೆ ಸದ್ಯದಲ್ಲೇ ಬರೆಯುತ್ತೇನೆ)
ಅಂತಿರುವ ಆಗುಂಬೆಯಲ್ಲಿ ನಾನು ಮತ್ತು ನನ್ನ ತಂಡ ಕಳೆದ ಒಂದು ಸುಂದರ ಸಂಜೆಯ ಚಿತ್ರಪಟ ನಿಮಗಾಗಿ... ಮಾಲ್ಗುಡಿಗೆ ಮತ್ತೊಮ್ಮೆ ಎಲ್ಲರಿಗೂ ಸ್ವಾಗತ ಹೇಳುತ್ತಾ...